300 ರೂ.ಗೆ ನಕಲಿ ಕೋವಿಡ್‌ -19 ನೆಗೆಟಿವ್‌ ವರದಿ ನೀಡುವ ಮುಂಬೈನ ಟೂರ್ಸ್-ಟ್ರಾವೆಲ್ಸ್ ಆಪರೇಟರ್‌ಗಳು:ಪತ್ರಿಕಾ ವರದಿಯಲ್ಲಿ ಬಹಿರಂಗ..!!

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಅಪಾಯಕಾರಿ ದರದಲ್ಲಿ ಏರಿಕೆಯಾಗುತ್ತಿದ್ದಂತೆಯೇ ಲಾಕ್‌ಡೌನ್‌ ಅಥವಾ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗುವ ಸೂಚನೆ ಸಿಗುತ್ತಿದ್ದಂತೆಯೇ ಮುಂಬೈನ ಅನೇಕ ಟೂರ್ಸ್‌ ಮತ್ತು ಟ್ರಾವೆಲ್ ಆಪರೇಟರ್‌ಗಳು ಜನರು ಈ ರಾಜ್ಯದಿಂದ ತೆರಳಲು ನಕಲಿ ಆರ್ಟಿಪಿಸಿಆರ್ ಸರ್ಟಿಫಿಕೆಟ್‌ ನೀಡುತ್ತಿವೆ ಎಂದು ವರದಿಯಾಗಿದೆ.
ಘಾಟ್ಕೋಪರ್‌ನ ಗೋಪಾಲ್ ಭುವನ್ ನಿಲ್ದಾಣದಲ್ಲಿ ಮತ್ತು ಬೋರಿವ್ಲಿಯ ಎಸ್‌ಜಿಎನ್‌ಪಿ ಬಸ್ ನಿಲ್ದಾಣದಲ್ಲಿ ನಡೆಸಿದ ಕುಟುಕು ಕಾರ್ಯಾಚರಣೆಗಳಲ್ಲಿ, ಟೂರ್ಸ್‌ ಮತ್ತು ಟ್ರಾವೆಲ್ ಏಜೆಂಟರು ಪ್ರಯಾಣಿಸಲು ಬಯಸುವ ಜನರಿಗೆ 300-500 ರೂ.ಗಳ ಮೊತ್ತಕ್ಕೆ ನಕಲಿ ಕೋವಿಡ್‌-19 ನೆಗೆಟಿವ್‌ ಪರೀಕ್ಷಾ ವರದಿಗಳನ್ನು ನೀಡುತ್ತಿದ್ದಾರೆ ಎಂದು ಮಿಡ್-ಡೇ ಕಂಡುಹಿಡಿದಿದೆ.
ದೇಶದಲ್ಲಿ ಕೊರೊನಾ ವೈರಸ್ ಏಕಾಏಕಿ ಉಲ್ಬಣಗೊಂಡ ನಂತರ, ಗುಜರಾತ್ ಮತ್ತು ರಾಜಸ್ಥಾನ ಸೇರಿದಂತೆ ಅನೇಕ ರಾಜ್ಯಗಳು ಮಹಾರಾಷ್ಟ್ರದಿಂದ ತಮ್ಮ ರಾಜ್ಯಕ್ಕೆ ಬರುವವರಿಗೆ ನೆಗೆಟಿವ್‌ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಿವೆ. ಆದಾಗ್ಯೂ, ಮಹಾರಾಷ್ಟ್ರದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ನಕಲಿ ನೆಗೆಟಿವ್‌ ಆರ್‌ಟಿಪಿಸಿಆರ್ ಪರೀಕ್ಷೆ ಸರ್ಟಿಫಿಕೆಟ್‌ ನೀಡುವ ಮೂಲಕ ಮುಂಬೈನ ಟೂರ್ಸ್‌ ಮತ್ತು ಟ್ರಾವೆಲ್ಸ್‌ ನಿರ್ವಾಹಕರು ಈ ನಿಯಂತ್ರಣ ಬೈಪಾಸ್ ಮಾಡಲು ಮಾರ್ಗ ಕಂಡುಕೊಂಡಿದ್ದಾರೆ.
ಮಿಡ್‌-ಡೇ ವರದಿ ಪ್ರಕಾರ, ಪ್ರಯಾಣಿಕರಿಗೆ ನಕಲಿ ಕೋವಿಡ್‌-19 ಪ್ರಮಾಣಪತ್ರಗಳನ್ನು ಒದಗಿಸಿದ್ದಕ್ಕಾಗಿ ಟೂರ್ ಮತ್ತು ಟ್ರಾವೆಲ್ಸ್‌ಗಳ ಬಸ್‌ ಆಪರೇಟರ್ ಅನ್ನು ಮಂಗಳವಾರ ಬೆಳಿಗ್ಗೆ ಮೀರಾ ರಸ್ತೆಯಲ್ಲಿ ಮುಂಬೈ ಕ್ರೈಂಮಿಡ್-ಡೇ ಬ್ರಾಂಚ್‌ನಿಂದ ಬಂಧಿಸಲಾಯಿತು. ವರದಿಯು ಇತರ ಟ್ರಾವೆಲ್ ಏಜೆಂಟರ ವ್ಯವಹಾರಗಳಿಗೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಹೇಳಿದೆ.
ಮಹಾರಾಷ್ಟ್ರದಿಂದ ಗುಜರಾತಿಗೆ ಹೋಗುವಾಗ ಚೆಕ್‌ಪೋಸ್ಟ್‌ಗಳಲ್ಲಿ ಮಾತ್ರ ಪರೀಕ್ಷಾ ವರದಿಗಳು ಬೇಕಾಗುತ್ತವೆ ಎಂದು ಬಸ್‌ಗಳಲ್ಲಿ ಕೆಲಸ ಮಾಡುವವರು ಹೇಳಿಕೊಂಡರೆ, ಉದಯಪುರಕ್ಕೆ ಹೋಗುವ ಬಸ್‌ನ ಚಾಲಕ ಭದ್ರತೆ ತುಂಬಾ ಬಿಗಿಯಾಗಿದ್ದರೆ, ನಕಲಿ ಜನರಿಗೆ ಸಹಾಯ ಮಾಡುವ ವ್ಯವಸ್ಥೆಗಳನ್ನು ಮಾಡುವುದಾಗಿ ಆ ಪತ್ರಿಕೆ ನಡೆಸಿದ ಕುಟುಕು ಕಾರ್ಯಾಚರಣೆ ವೇಳೆ ಹೇಳಿದ್ದಾರೆ.
ಸ್ಥಳೀಯ ನಂಬರ್ ಪ್ಲೇಟ್ ಹೊಂದಿರುವ ವಾಹನದಲ್ಲಿ ಚೆಕ್‌ಪೋಸ್ಟ್‌ಗಳನ್ನು ದಾಟಿಸುತ್ತಾರೆ. ಸ್ಥಳೀಯ ವಾಹನಗಳು ಈ ಪ್ರದೇಶದ ನಿವಾಸಿಗಳನ್ನು ಹೊಂದಿವೆ ಎಂದು ಊಹಿಸಿ, ಅಧಿಕಾರಿಗಳು ಅವುಗಳನ್ನು ಪರಿಶೀಲಿಸುವುದಿಲ್ಲ. ಚೆಕ್‌ಪಾಯಿಂಟ್ ದಾಟಿದ ನಂತರ ಪ್ರಯಾಣಿಕರು ಮತ್ತೆ ತಮ್ಮ ಬಸ್‌ಗೆ ಹತ್ತುತ್ತಾರೆ ಎಂದು ಹೇಳಿದ್ದಾರೆ ಎಂದು ವರದಿ ಹೇಳುತ್ತದೆ.
ಬೋರಿವಲಿಯ ಟೂರ್ ಆಪರೇಟರ್‌ಗಳು ತಮ್ಮ ಬಗ್ಗೆ ವಿಶ್ವಾಸ ಹೊಂದಿದ್ದು, ವಿಷಯಗಳು ಗೊಂದಲಕ್ಕೀಡಾದರೆ ತಾವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ ಹೇಳಿದ್ದಾರೆ. ತಮ್ಮ ನಕಲಿ ಪ್ರಮಾಣಪತ್ರಗಳು ನಿಜವಾದ ಪ್ರಮಾಣಪತ್ರಗಳಿಗಿಂತ ಹೆಚ್ಚು ಶಕ್ತಿಶಾಲಿ ಎಂದು ಅವರು ಭರವಸೆ ನೀಡಿದರು, ಏಕೆಂದರೆ ಅವರು ರಾಜ್ಯ ಗಡಿಗಳಲ್ಲಿ ಪೋಸ್ಟ್ ಮಾಡಿದ ಪೊಲೀಸರೊಂದಿಗೆ ತಮ್ಮ ಜಾಲ ಹೊಂದಿದ್ದಾರೆ, ಆದರೆ ನಿಯಮಗಳಿಗೆ ಬದ್ಧರಾಗಿರುವವರು ಕ್ಯೂನಲ್ಲಿ ಹಲವಾರು ಗಂಟೆಗಳ ಕಾಲ ಕಾಯಬೇಕಾಗುತ್ತದೆ ಎಂದು ಮಿಡ್‌ ಡೇ ವರದಿ ಮಾಡಿದೆ.
ವರದಿಯು ವರದಿಗಾರ ಮತ್ತು ಘಾಟ್‌ಕೋಪರ್‌ನಲ್ಲಿನ ಟ್ರಾವೆಲ್‌ ಏಜೆಂಟ್‌ ನಡುವಿನ ಸಂಭಾಷಣೆಗಳನ್ನು ಉಲ್ಲೇಖಿಸಿದೆ. ಸಂಭಾಷಣೆಯ ಸಮಯದಲ್ಲಿ, ಅವರು ನಕಲಿ ನೆಗೆಟಿವ್‌ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ತನಿಖೆ ನಡೆಸಬಹುದೇ ಎಂದು ಕೇಳಿದಾಗ ಆ ಟ್ರಾವೆಲ್‌ ಏಜೆಂಟ್‌ ಪ್ರಯಾಣಿಕರಿಗೆ ಗಡಿ ದಾಟಲು ಸಾಕು ಎಂದು ಹೇಳಿದ್ದಾರೆ. ಅಲ್ಲದೆ ಈ ನಕಲಿ ಆರ್‌ಟಿಪಿಸಿಆರ್ ಪರೀಕ್ಷೆ ವರದಿ ಪಡೆಯಲು ಅವರು ವರದಿಗಾರರಿಂದ 500 ರೂ.ಪಡೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ.
ಪತ್ರಿಕೆ ತನ್ನ ತನಿಖೆ ವರದಿ ಸಂದರ್ಭದಲ್ಲಿ ಹಲವಾರು ಟ್ರಾವೆಲ್‌ಗಳ ವ್ಯಕ್ತಿಗಳನ್ನು ಭೇಟಿಯಾಗಿತ್ತು. ಅವರೆಲ್ಲರೂ ರಾಜ್ಯದ ಗಡಿ ಚೆಕ್‌ಪೋಸ್ಟ್‌ಗಳನ್ನು ದಾಟಲು ಪ್ರಯಾಣಿಕರಿಗೆ ನಕಲಿ ಆರ್‌ಟಿಪಿಸಿಆರ್ ಪರೀಕ್ಷಾ ವರದಿಗಳನ್ನು ಒದಗಿಸುವುದನ್ನು ಒಪ್ಪಿಕೊಂಡಿದ್ದಾರೆ.
ನಕಲಿ ಕೋವಿಡ್‌-19 ಪರೀಕ್ಷಾ ವರದಿಗಳೊಂದಿಗೆ ಮೀರಾ ರಸ್ತೆ ಪೊಲೀಸರು ಮಂಗಳವಾರ ಸೂರತ್‌ಗೆ ಪ್ರಯಾಣಿಕರನ್ನು ಕರೆದೊಯ್ಯುವ ಬಸ್ ಹಿಡಿದಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಸ್ ಮಾಲೀಕರು, ಇಬ್ಬರು ಚಾಲಕರು, ಕ್ಲೀನರ್ ಮತ್ತು ಇಬ್ಬರು ಏಜೆಂಟರು ಸೇರಿದಂತೆ 38 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಏಕಾಏಕಿ ತೀವ್ರವಾಗುತ್ತಿದ್ದಂತೆ, ಹಲವಾರು ಜನರು ಮುಂಬೈಯಿಂದ ಹೊರಹೋಗಲು ಪ್ರಯತ್ನಿಸುತ್ತಿದ್ದಾರೆ. ಟೂರ್ಸ್‌ ಮತ್ತು ಟ್ರಾವೆಲ್ ಆಪರೇಟರ್‌ಗಳು ಈ ಉಲ್ಬಣವನ್ನು ತಮ್ಮ ಪಾಕೆಟ್‌ಗಳನ್ನು ತುಂಬಿಸಿಕೊಳ್ಳಲು ಅವಕಾಶವಾಗಿ ಬಳಸುತ್ತಿದ್ದಾರೆ. ಅವರು ಹಣ ಸಂಪಾದಿಸಲು ಎಲ್ಲಾ ರೀತಿಯ ಅನೈತಿಕ ಪದ್ಧತಿಗಳನ್ನು ಆಶ್ರಯಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮಿಡ್‌-ಡೇ ವರದಿ ಮಾಡಿದೆ.
20 ಜನರಿಂದ ಮೂರು ಪ್ರಯೋಗಾಲಯಗಳು ನೀಡಿದ ನಕಲಿ ಆರ್ಟಿ-ಪಿಸಿಆರ್ ವರದಿಗಳನ್ನು ನಾವು ಪಡೆದುಕೊಂಡಿದ್ದೇವೆ. ಉಳಿದ 12 ಪ್ರಯಾಣಿಕರಿಂದ ನಕಲಿ ಪ್ರಮಾಣಪತ್ರಗಳ ಹೆಸರಿನಲ್ಲಿ 30-500 ರೂ.ವಸೂಲಿ ಮಾಡಲಾಗಿದೆಯಾದರೂ ಅವರಿಗೆ ಏನನ್ನೂ ನೀಡಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವಾರದ ಆರಂಭದಲ್ಲಿ, ಮಿಡ್-ಡೇ ಪ್ರಕಟಿಸಿದ ಮತ್ತೊಂದು ತನಿಖಾ ವರದಿಯು ಮುಂಬೈ ವಿಮಾನ ನಿಲ್ದಾಣದ ಬಿಎಂಸಿ ಅಧಿಕಾರಿಗಳು ವಿದೇಶದಿಂದ ಹಾರಾಟ ನಡೆಸುವ ಜನರಿಗೆ ಕಡ್ಡಾಯವಾದ ಸಂಪರ್ಕತಡೆ ತಪ್ಪಿಸಿಕೊಳ್ಳಲು ಹೇಗೆ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿತ್ತು.
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ನಾಗರಿಕ ಅಧಿಕಾರಿಗಳು 10,000 ರಿಂದ 12,000 ರೂ.ಗಳ ವರೆಗೆ ತೆಗೆದುಕೊಂಡು ಕಡ್ಡಾಯ ಏಳು ದಿನಗಳ ಸಾಂಸ್ಥಿಕ ಸಂಪರ್ಕತಡೆ ತಪ್ಪಿಸಿಕೊಳ್ಳಲು ವಿದೇಶದಿಂದ ಬಂದ ಪ್ರಯಾಣಿಕರಿಗೆ ಅವಕಾಶ ನೀಡಿದ್ದಾರೆ ಎಂದು ವರದಿ ಮಾಡಿದೆ.
ಮಿಡ್-ಡೇ ನಡೆಸಿದ ಕುಟುಕು ಕಾರ್ಯಾಚರಣೆಯು ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿರುವ ಬಿಎಂಸಿ ಅಧಿಕಾರಿಗಳಿಂದ ಆಘಾತಕಾರಿ ತಪ್ಪುಗಳನ್ನು ಕಂಡುಹಿಡಿದೆ. ಮುಖ್ಯವಾಗಿ ಬ್ರಿಟನ್‌, ಯುರೋಪ್, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಆಫ್ರಿಕಾದ ಪ್ರಯಾಣಿಕರು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ಸಂಪರ್ಕತಡೆಗೆ ಒಳಗಾಗುವುದನ್ನು ಖಚಿತಪಡಿಸಿಕೊಳ್ಳುವುದು ಅವರ ಕೆಲಸ. ಕೊರೊನಾ ವೈರಸ್‌ ವೇಗವಾಗಿ ಹರಡುವ ಹೊಸ ರೂಪಾಂತರಗಳನ್ನು ವರದಿ ಮಾಡಿದ ರಾಷ್ಟ್ರಗಳಲ್ಲಿ ಇವು ಸೇರಿವೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ದೂರವಾಣಿ ಕರೆಗಳಿಗೆ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಎಂದು ಉತ್ತರಿಸಿ: ಅಧಿಕಾರಿಗಳಿಗೆ ಮಹಾರಾಷ್ಟ್ರ ಸರ್ಕಾರದ ಸೂಚನೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement