ಅಮೆರಿಕ: ಮತ್ತಿಬ್ಬರು ಭಾರತೀಯರಿಗೆ ಮಹತ್ವದ ಹುದ್ದೆ ನೀಡಿದ ಜೋ ಬಿಡೆನ್‌

ವಾಷಿಂಗ್ಟನ್: ಅಮೆರಿಕ ಸರ್ಕಾರದಲ್ಲಿ ಮತ್ತೆರಡು ಮಹತ್ವದ ಹುದ್ದೆಗಳಿಗೆ ಇಬ್ಬರು ಭಾರತೀಯ-ಅಮೆರಿಕನ್ನರನ್ನು ಆಯ್ಕೆ ಮಾಡಿರುವುದಾಗಿ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
ಅಟಾರ್ನಿ ಜನರಲ್ ಹಾಗೂ ಕಾರ್ಯನಿರ್ವಾಹಕ ಹುದ್ದೆಗಳಿಗೆ ಇಬ್ಬರು ಭಾರತೀಯ-ಅಮೆರಿಕನ್ ಮಹಿಳೆಯರನ್ನು ನಾಮಕರಣಗೊಳಿಸಿದ್ದೇವೆ ಎಂದು ಬೈಡೆನ್ ಹೇಳಿದ್ದಾರೆ.
ಮೀರಾ ಜೋಶಿ ಹಾಗೂ ರಾಧಿಕಾ ಫಾಕ್ಸ್ ನಾಮಕರಣಗೊಳಿಸುವ ಮೂಲಕ ಬಡ್ತಿ ನೀಡಲಾಗಿದೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.
ಮೀರಾ ಜೋಶಿ ಅವರನ್ನು ಸಾರಿಗೆ ಇಲಾಖೆಯ ವಾಹನ ನಿಯಂತ್ರಣ ಹಾಗೂ ಸುರಕ್ಷತಾ ಕಾರ್ಯನಿರ್ವಾಹಕರನ್ನಾಗಿ ನೇಮಿಸಿದೆ. ಜಲ, ಹಾಗೂ ಎನ್ವಿರಾನ್ಮೆಂಟಲ್ ರಕ್ಷಣಾ ಏಜೆನ್ಸಿಯ ಮುಖ್ಯ ಕಾರ್ಯನಿರ್ವಾಹಕರಾಗಿ ರಾಧಿಕಾ ಫಾಕ್ಸ್ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಪರಿಸರ ಸಂರಕ್ಷಣಾ ಸಂಸ್ಥೆ (ಇಪಿಎ)ಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಪೈಸಲ್ ಅಮೀನ್ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ