ಕರ್ನಾಟಕದಲ್ಲಿ 15 ಸಾವಿರ ಸಮೀಪವೇ ಬಂದ ದೈನಂದಿನ ಕೊರೊನಾ ಸೋಂಕು..ಬೆಂಗಳೂರಲ್ಲೇ 10 ಸಾವಿರ ದಾಟಿದ ಪ್ರಕರಣ..!!

ಬೆಂಗಳೂರು : ರಾಜ್ಯದಲ್ಲಿ ಗುರುವಾರ ಕೊರೊನಅ ಸ್ಪೋಟವೇ ಉಂಟಾಗಿದೆ. ಕಳೆದ 24 ಗಂಟೆಯಲ್ಲಿ 14,738 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 66 ಜನರು ಮೃತಪಟ್ಟಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ಗುರುವಾರ ಕೊರೊನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 10,497 ಸೇರಿದಂತೆ ರಾಜ್ಯಾದ್ಯಂತ 14,738 ಜನರಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.
ಇದರಿಂದ ಸೋಂಕಿತರ ಸಂಖ್ಯೆ 11,09,650ಕ್ಕೆ ಏರಿಕೆಯಾಗಿದೆ. ಗುರುವಾರ 3,591 ಜನರು ಸೇರಿದಂತೆ ಇದುವರೆದೆ 9,99,958 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದಬಿಡುಗಡೆ ಆಗಿದ್ದಾರೆ.
ರಾಜ್ಯದಲ್ಲಿ 96,561 ಸಕ್ರೀಯ ಸೋಂಕಿತರು ಇದ್ದಾರೆ. ಬಳ್ಳಾರಿಯಲ್ಲಿ ಆರು ಸೋಂಕಿತರು, ಬೆಳಗಾವಿಯಲ್ಲಿ ಒಬ್ಬರು, ಬೆಂಗಳೂರು ನಗರದಲ್ಲಿ 30 ಸೋಂಕಿತರು, ಬೀದರ್ ನಲ್ಲಿ ಇಬ್ಬರು, ಧಾರವಾಡದಲ್ಲಿ ಮೂವರು, ಹಾಸನದಲ್ಲಿ ನಾಲ್ವರು, ಕಲಬುರ್ಗಿ, ಕೋಲಾರದಲ್ಲಿ ತಲಅ ಒಬ್ಬರು, ಮೈಸೂರಿನಲ್ಲಿ ಐವರು, ರಾಮನಗರ, ಶಿವಮೊಗ್ಗ ತಲಾ ಒಬ್ಬರು, ತುಮಕೂರು, ಉತ್ತರ ಕನ್ನಡದಲ್ಲಿ ತಲಾ ಇಬ್ಬರು ಮತ್ತು ವಿಜಯಪುರದಲ್ಲಿ ಒಬ್ಬರು ಸೇರಿದಂತೆ 66 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಹೆಲ್ತ್‌ ಬುಲೆಟಿನ್‌ ಪ್ರಕಅಋ, ‌ ರಾಜ್ಯದಲ್ಲಿ ಕೊರೊನಾಕ್ಕೆ ಮೃತಪಟ್ಟವರ ಸಂಖ್ಯೆ ಬ 13,112ಕ್ಕೆ ಏರಿಕೆಯಾಗಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement