ಕಸದ ಲಾರಿಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಶವಗಳ ಸಾಗಣೆ

ರಾಜನಂದಗಾಂವ: ಛತ್ತೀಸಗಢ ರಾಜ್ಯದ ರಾಜನಂದಗಾಂವನಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟವರನ್ನು ಆರೋಗ್ಯ ಕಾರ್ಯಕರ್ತರು ಕಸ ತುಂಬುವ ಲಾರಿಗಳಲ್ಲಿ ಶವಾಗಾರಕ್ಕೆ ಸಾಗಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.
ಆಂಬುಲೆನ್ಸ್‌ಗಳು ಹಾಗೂ ಶವಸಾಗಣೆ ವಾಹನಗಳ ಕೊರತೆಯಿಂದಾಗಿ ಮೃತದೇಹಗಳನ್ನು ಕಸ ತುಂಬುವ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ವಿಡಿಯೋದಲ್ಲಿ ಶವಗಳನ್ನು ಕಸದ ಲಾರಿಗೆ ಎಸೆಯುತ್ತಿರುವ ದೃಷ್ಯಗಳಿವೆ.
ಈ ಘಟನೆ ಕುರಿತು ರಾಜ್ಯ ಸರಕಾರ ಅಥವಾ ಆರೋಗ್ಯ ಇಲಾಖೆ ಯಾವುದೇ ಹೇಳಿಕೆ ನೀಡಿಲ್ಲ. ಏಪ್ರಿಲ್ 14 ರಂದು ರಾಜ್ಯದಲ್ಲಿ 14,250 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಒಂದೇ ದಿನದಲ್ಲಿ 120 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ರಾಜ್ಯದಲ್ಲಿ 1,18,636 ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆಯಾಗಿ, ರಾಜ್ಯದಲ್ಲಿ 4,86,244 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 3,62,301 ಚೇತರಿಸಿಕೊಂಡಿದ್ದು, 5,307 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ವಿಷಯದಲ್ಲಿ ರಾಜ್ಯವು ಪ್ರಸ್ತುತ ಎರಡನೇ ಸ್ಥಾನದಲ್ಲಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement