ನನ್ನ ಅಪ್ಪನಿಗೆ ಬೆಡ್‌ ನೀಡಿ.. ಇಲ್ಲವಾದ್ರೆ, ಇಂಜೆಕ್ಷನ್ ಕೊಟ್ಟು ಸಾಯಿಸ್ಬಿಡಿ: ಮಗನ ಅಳಲಿನ ವಿಡಿಯೋ ವೈರಲ್‌

‌ ಆಸ್ಪತ್ರೆಯಲ್ಲಿ ನಿಮಗೆ ಹಾಸಿಗೆಗಳನ್ನ ಒದಗಿಸಲು ಸಾಧ್ಯವಾಗದಿದ್ದರೆ ಕನಿಷ್ಠ ಇಂಜೆಕ್ಷನ್ ಕೊಟ್ಟು ಕೊಂದು ಬಿಡಿ ಎಂದು ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತನ ಮಗನೊಬ್ಬ ತನ್ನ ಅಳಲು ತೋಡಿಕೊಂಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣವು ದಿನದಲ್ಲಿ ಎರಡು ಲಕ್ಷ ದಾಟಿದೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ, ಮತ್ತೊಂದೆಡೆ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇಲ್ಲ. ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯ ಬಗ್ಗೆ ಅನೇಕ ರೀತಿಯ ಸುದ್ದಿಗಳು ಬರುತ್ತಿವೆ.ಮಹಾರಾಷ್ಟ್ರದ ಪರಿಸ್ಥಿತಿಯಂತೂ ಹೇಳತೀರದು.
ಮಹಾರಾಷ್ಟ್ರದ ಚಂದ್ರಪುರದ ಯುವಕನೊಬ್ಬ, ತನ್ನ ತಂದೆಯೊಂದಿಗೆ ಆಂಬ್ಯುಲೆನ್ಸ್‌ನಲ್ಲಿ ಬಂದಿದ್ದಾನೆ. ಆಂಬ್ಯುಲೆನ್ಸ್‌ʼನಲ್ಲಿರುವ ಆಮ್ಲಜನಕ ನಿಧಾನವಾಗಿ ಖಾಲಿಯಾಗುತ್ತಿದೆ, ಆದರೆ ತಂದೆಗೆ ಆಸ್ಪತ್ರೆಯಲ್ಲಿ ಬೆಡ್‌ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಅವರನ್ನ ಆಂಬ್ಯುಲೆನ್ಸ್‌ʼನಲ್ಲಿಯೇ ತಂದೆಯನ್ನು ಇರಿಸಲಾಗಿದೆ.
ಆತ ಕಾದು ಕಾದು ಕೊನೆಗೂ ಆಸ್ಪತ್ರೆಯಲ್ಲಿ ಬೆಡ್‌ ಹಾಗೂ ಆಮ್ಲಜನಕ ಸಿಗದ ಕಾರಣ, ಆಸ್ಪತ್ರೆಯಲ್ಲಿ ಬೆಡ್‌ ಸಿಗುತ್ತಿಲ್ಲ, ಮತ್ತು ಆಮ್ಲಜನಕವು ಖಾಲಿಯಾಗುತ್ತಿದೆ. ನನ್ನ ತಂದೆಗೆ ಇಲ್ಲಿ ಹಾಸಿಗೆ ಸಿಗದಿದ್ದರೆ, ಕನಿಷ್ಠ ಇಂಜೆಕ್ಷನ್ ನೀಡಿ ಕೊಂದುಹಾಕಿ’ ಎಂದು ಹೇಳಿದ್ದಾನೆ. ನಾನು ಅವರನ್ನ ಮನೆಗೆ ಕರೆದೊಯ್ಯಲು ಸಾಧ್ಯವಿಲ್ಲ. ಯಾಕೆಂದರೆ, ಅವರಿಗೆ ಉಸಿರಾಟದ ತೊಂದರೆಯಿದೆ, ಆದರೆ ಖಾಲಿಯಾದರೆ ಅವರು ಉಳಿಯುವುದಿಲ್ಲ ಎಂದು ಗೋಳಾಡುತ್ತಿದ್ದಾನೆ.
ದೇಶದ ಅನೇಕ ರಾಜ್ಯಗಳಲ್ಲಿನ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ ಇಲ್ಲ. ಹಾಸಿಗೆಯ ಕೊರತೆಯಿಂದ ಜನರು ಸಮಸ್ಯೆಗಳನ್ನ ಎದುರಿಸಿದ್ದಾರೆ.
ಇದು ಕೊರೊನಾ ಜನಮಾನಸವನ್ನು ಯಾವ ಪರಿಸ್ಥಿತಿಗೆ ತಂದೊಡ್ಡಿದೆ. ರೋಗಿಗಳ ಹೆಚ್ಚಳದಿಂದ ಹೇಗೆ ಆರೋಗ್ಯ ವ್ಯವಸ್ಥೆಗೆ ಹದಗೆಡುತ್ತಿದೆ ಎಂಬುದನ್ನು ತೋರಿಸುವಂತಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

ಓದಿರಿ :-   ಜಮ್ಮು ಮತ್ತು ಕಾಶ್ಮೀರದಲ್ಲಿ ಗುಜ್ಜರ್, ಬಕರ್ವಾಲ್, ಪಹಾರಿ ಸಮುದಾಯಗಳಿಗೆ ಎಸ್‌ಟಿ ಮೀಸಲಾತಿ: ಅಮಿತ್ ಶಾ ಘೋಷಣೆ

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.3 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

advertisement