ಗುಜರಾತ್‌ :ಕೊರೊನಾ ಸೋಂಕಿನಿಂದ ಜನಿಸಿದ್ದ 15 ದಿನದ ನವಜಾತ ಶಿಶು ಸಾವು..!!

ಸೂರತ್: ಗುಜರಾತಿನ ಸೂರತ್ ನಗರದ ಆಸ್ಪತ್ರೆಯೊಂದರಲ್ಲಿ ಕೋವಿಡ್-19 ಸೋಂಕಿತ ಮಹಿಳೆಗೆ ಜನಿಸಿದ 15 ದಿನದ ಹಸುಗೂಸು ಹೆಣ್ಣು ಮಗುವೊಂದು ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಏಪ್ರಿಲ್ 1ರಂದು ಕೋವಿಡ್‌ ಸೋಂಕಿನೊಂದಿಗೆ ಈ ಶಿಶು ಜನಿಸಿತ್ತು, ಆ ಮಗುವಿನ ತಾಯಿ ಕೂಡ ಸೋಂಕಿಗೆ ಒಳಗಾಗಿದ್ದರು ಎಂದು ಡೈಮಂಡ್ ಆಸ್ಪತ್ರೆಯ ಟ್ರಸ್ಟಿ ದಿನೇಶ್ ನವಾಡಿಯಾ ಹೇಳಿದ್ದಾರೆ.
ಈ ಶಿಶುವಿನ ತಾಯಿಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ನವಜಾತ ಶಿಶುವಿನ ಸ್ಥಿತಿ ಕ್ಷೀಣಿಸಿದಂತೆ ಶಿಶುವನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಆಕೆಯ ಸ್ಥಿತಿ ಹದಗೆಡಲು ಪ್ರಾರಂಭಿಸಿದಾಗ ಮಗುವಿಗೆ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಸಹ ನೀಡಲಾಗಿತ್ತು. ಆದರೆ, ಗುರುವಾರ ರಾತ್ರಿ ಚಿಕಿತ್ಸೆ ಫಲಿಸದೆ ಶಿಶು ಎಂದು ಅವರು ತಿಳಿಸಿದ್ದಾರೆ.
ಕೋವಿಡ್-19 ಸೋಂಕಿನಿಂದ ಇತ್ತೀಚಿಗೆ ಚೇತರಿಸಿಕೊಂಡಿದ್ದ ಸೂರತ್ ಮಾಜಿ ಮೇಯರ್ ಡಾ. ಜಗದೀಶ್ ಪಾಟೀಲ್, ಶಿಶು ವಿನ ಚಿಕಿತ್ಸೆಗಾಗಿ ರಕ್ತದ ಫ್ಲಾಸ್ಮಾ ದಾನ ಮಾಡಿದ್ದರು. ನವ ಜಾತ ಶಿಶುವನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನಿಸಿದರು, ಆದರೆ, ಆಗಲಿಲ್ಲ. ಎಂದು ಅವರು ತಿಳಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಸರ್ವಪಕ್ಷ ಸಭೆಯಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧಾರ: ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement