ಪ್ರಧಾನಿ ಕಾರ್ಯಾಲಯದಲ್ಲಿ ಡೆಪ್ಯುಟಿ ಸೆಕ್ರೆಟರಿ ಹುದ್ದೆಗೇರಿದ ಉತ್ತರಕನ್ನಡ ಜಿಲ್ಲೆಯ ಡಾ. ಕಾರ್ತಿಕ ಹೆಗಡೆಕಟ್ಟೆ

posted in: ರಾಜ್ಯ | 0

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಡಾ. ಕಾರ್ತಿಕ ಹೆಗಡೆಕಟ್ಟೆ ಅವರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಾಲಯದಲ್ಲಿ ಡೆಪ್ಯುಟಿ ಸೆಕ್ರೆಟರಿಯಾಗಿ ಪದೋನ್ನತಿ ಹೊಂದಿದ್ದಾರೆ.

ಇದರೊಂದಿಗೆ ಕಾರ್ತಿಕ ಪ್ರಧಾನಿ ಕಾರ್ಯಾಲಯದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಉಪಕಾರ್ಯದರ್ಶಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡಾ. ಕಾರ್ತಿಕ ಬ್ಲಾಕ್‌ಚೆನ್‌ ಟೆಕ್ನಾಲಜಿ ಹಾಗೂ ಕ್ರಿಪ್ಟೊ ಕರೆನ್ಸಿಯಲ್ಲಿ ಪರಿಣಿತಿ ಪಡೆದಿದ್ದು, ಈ ವಿಷಯಗಳ ಕುರಿತು ವಿವಿಧ ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ೪೮ ವೈಜ್ಞಾನಿಕ ಪ್ರಬಂಧ ಪ್ರಕಟಿಸಿದ್ದಾರೆ. ಡಾ. ಕಾರ್ತಿಕ ಕಾರವಾರದ ಹೃದಯರೋಗ ತಜ್ಞ ಡಾ. ವಿ.ಪಿ.ಹೆಗಡೆಕಟ್ಟೆ ಹಾಗೂ ಸರಸ್ವತಿ ಹೆಗಡೆಕಟ್ಟೆ ಅವರ ಪುತ್ರರಾಗಿದ್ದು, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

3.8 / 5. ಒಟ್ಟು ವೋಟುಗಳು 6

ನಿಮ್ಮ ಕಾಮೆಂಟ್ ಬರೆಯಿರಿ