ವಿಟಿಯು ಪ್ರಥಮ ಸೆಮಿಸ್ಟರ್  ಪರೀಕ್ಷೆ ಮುಂದೂಡಿಕೆ ಇಲ್ಲ

posted in: ರಾಜ್ಯ | 0

ಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ಬಿ.ಇ./ಬಿ.ಟೆಕ್./ಬಿ.ಆರ್ಕ್/ ಬಿ.ಪ್ಲಾನ್. ಕೋರ್ಸಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ಮುಂದೂಡಿಕೆ ಇಲ್ಲ ಎಂದು ವಿಟಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು ವಿದ್ಯಾರ್ಥಿಗಳು ವದಂತಿಗಳಿಗೆ ಕಿವಿಗೊಡದೆ ಪರೀಕ್ಷೆಗೆ ಹಾಜರಾಗಬೇಕೆಂದು ತಿಳಿಸಿದೆ.”

ವಿ ಟಿ ಯು ಪರೀಕ್ಷೆ ಮುಂದೂಡಿಕೆ” ಎಂದು ಸುಳ್ಳು ಸುದ್ದಿಯು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಕಾರಣ “ಪರೀಕ್ಷೆ ಮುಂದೂಡಿಕೆ ಇಲ್ಲ” ಎಂದು ವಿ ಟಿ ಯು ಸ್ಪಷ್ಟನೆ ನೀಡಿದ್ದು ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ಈ ಮೊದಲು ಪ್ರಕಟಿಸಿದಂತೆ ಸೋಮವಾರ ದಿನಾಂಕ 19/04/2021 ರಿಂದಲೇ ಪ್ರಾರಂಭಗೊಳ್ಳುತ್ತಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ