ಅಮೆರಿಕದಲ್ಲಿ ನಾಲ್ವರು ಸಿಕ್ಖರು ಸೇರಿ ಎಂಟು ಜನರ ಹತ್ಯೆ

ವಾಷಿಂಗ್ಟನ್: ಅಮೆರಿಕಾದಲ್ಲಿ ಭಾರತೀಯ ಮೂಲದವರನ್ನು ಗುರಿಯಾಗಿರಿಸಿಕೊಂಡು ಹತ್ಯೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂಡಿಯಾನಾ ಮೂಲದ ಯುವಕನೊಬ್ಬ ನಾಲ್ವರು ಸಿಕ್ಖರು ಸೇರಿದಂತೆ ಎಂಟು ಮಂದಿಯನ್ನು ಗುಂಡಿಟ್ಟುಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಇಂಡಿಯಾನಾ ಮೂಲದ 19 ವರ್ಷದ ಯುವಕ ಬ್ರಾಂಡನ್ ಸ್ಕಾಟ್ ಹೋಲ್ ಎಂಬಾತ ಭಾರತೀಯರೇ ಹೆಚ್ಚಾಗಿ ಕೆಲಸದಲ್ಲಿರುವ ಫೆಡ್‍ಎಕ್ಸ್ ಕೊರಿಯರ್ ಸರ್ವಿಸ್ ಸಂಸ್ಥೆಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದರಿಂದ ಎಂಟು ಮಂದಿ ಮೃತಪಟ್ಟಿದ್ದಾರೆ.
ಈ ಘಟನೆಯಲ್ಲಿ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲೂ ಅತಿ ಹೆಚ್ಚು ಸಿಖ್ ಸಮುದಾಯದವರೆ ಇರುವ ಸಂಸ್ಥೆ ಮೇಲೆ ದಾಳಿ ಮಾಡಿ ಹಲವರನ್ನು ಹತ್ಯೆ ಮಾಡಿರುವುದು ನೋವಿನ ಸಂಗತಿ ಎಂದು ಸಿಖ್ ಮುಖಂಡ ಗುರಿಂದರ್‍ಸಿಂಗ್ ಖಾಲ್ಸಾ ಕಳವಳ ವ್ಯಕ್ತಪಡಿಸಿದ್ದಾರೆ. ಘಟನೆಗೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಶೋಕ ವ್ಯಕ್ತಪಡಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

3 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ