ಹಂಪಿ ಲೋಕಪಾವನ ಕೊಳಕ್ಕೆ ವಿಷ ಬೆರೆಸಿದ ಕಿಡಿಗೇಡಿಗಳು: ಮೀನುಗಳ ಸಾವು

posted in: ರಾಜ್ಯ | 0

ಹಂಪಿ:ಹಂಪಿ ಪರಿಸರದ ಪುಣ್ಯಕೊಳವೆಂದೇ ಪ್ರಸಿದ್ಧಿ ಪಡೆದಿರುವ ಲೋಕಪಾವನ ಕೊಳಕ್ಕೆ ಯಾರೋ ಕಿಡಿಗೇಡಿಗಳು ವಿಷ ಹಾಕಿದ ಪರಿಣಾಮ  ಮೀನುಗಳು ಸತ್ತಿವೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ ಎಂದು ಹೇಳಲಾಗಿದೆ.
ಹಂಪಿಯ ಐತಿಹಾಸಿಕ ಪ್ರಸಿದ್ಧ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀ ವಿದ್ಯಾರಣ್ಯ ಮಠದ ಹಿಂಭಾಗಕ್ಕಿರುವ ಈ ಲೋಕಪಾವನ ಕೊಳವು ಮಲೀನಗೊಂಡ ಕಾರಣ ಶ್ರೀಗಳು ಅದನ್ನು ಸ್ವಚ್ಛಗೊಳಿಸಿದ್ದರು. ನಂತರ ಕೊಳದ ನೀರಿನಲ್ಲಿ ಮೀನುಗಳು ಹಾಗೂ ಆಮೆಯನ್ನು ಬಿಡಲಾಗಿತ್ತು. ಈಗ ಅವುಗಳ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ ಶುಕ್ರವಾರ ರಾತ್ರಿ ಯಾರೋ ಕಿಡಿಗೇಡಿಗಳು ಕೊಳದ ನೀರಿಗೆ ವಿಷ ಬೆರೆಸಿದ ಪರಿಣಾಮ ಪ್ರಮಾಣದ ಮೀನುಗಳು ಸತ್ತು ನೀರಿನಲ್ಲಿ ತೇಲುತ್ತಿವೆ.
ವಿದ್ಯಾರಣ್ಯ ಮಠದ ಶ್ರೀಗಳು ಸದ್ಯ ಮಠದಲ್ಲಿಲ್ಲದ ಕಾರಣ ಭಕ್ತರೇ ಮುಂದಾಗಿ ಹಂಪಿಯ  ಪೊಲೀಸ್‌ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಓದಿರಿ :-   ಕಾರ್ತಿಕ ಮಾಸದಲ್ಲಿ ಕರ್ನಾಟಕಕ್ಕೆ ತೊಂದರೆ, ಮಳೆ ಮುಂದುವರಿಕೆ, ಮುಂದಿನ ಯುಗಾದಿ ವರೆಗೂ ವಿಷ ಜಂತುಗಳು ತಾಂಡವ: ಕೋಡಿಮಠ ಶ್ರೀಗಳ ಭವಿಷ್ಯ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement