ಕೋವಿಡ್ ಮಾರ್ಗಸೂಚಿ; ಮದುವೆಗೇ ಬಂದ ಪೊಲೀಸರು-ಅಧಿಕಾರಿಗಳು..ಜನರೆಲ್ಲ ಸಭಾಂಗಣದಿಂದ ಹೊರಕ್ಕೆ..!

ಕಾರವಾರ: ಕೋವಿಡ್ ಎರಡನೇ ಅಲೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವುದರಿಂದ ಮದುವೆ ಕಾರ್ಯಕ್ರಮಕ್ಕೂ ಜನರ ಉಪಸ್ಥಿತಿಗೆ ಕೂಡ ಕಡಿವಾಣ ಹಾಕಲಾಗಿದೆ. ಕೇವಲ 50 ಜನರನ್ನೊಳಗೊಂಡ ಮದುವೆಗೆ ಅವಕಾಶ ನೀಡಲಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮದುವೆಯೊಂದರಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಾಹಿತಿ ಪಡೆದ ಅಧಿಕಾರಿಗಳು ಮತ್ತು ಪೊಲೀಸರು ಮದುವೆ ಕಾರ್ಯಕ್ರಮಕ್ಕೇ ದಾಳಿ ಮಾಡಿದ್ದಾರೆ..! ಮದುವೆಗೆ ಬಂದಿದ್ದವರನ್ನು ಹೊರಕ್ಕೆ ಕಳುಹಿಸಿದರು, ಇದಕ್ಕೆ ಕಾರಣ ಕೊರೊನಾ ಉಲ್ಬಣದಿಂದ ಈಗ ಜಾರಿಯಲ್ಲಿರುವ ಕಟ್ಟುನಿಟ್ಟಿನ ಕೊರೊನಾ ನಿಯಮಾವಳಿ..
ಇದು ನಡೆದಿದ್ದು ಕಾರವಾರದ ಶೇಜವಾಡದ ಸದಾನಂದ ಪ್ಯಾಲೇಸ್‌ನಲ್ಲಿ ಮದುವೆ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ. ಕೋವಿಡ್ ಮಾರ್ಗಸೂಚಿ ಪ್ರಕಟಗೊಳ್ಳುವುದಕ್ಕಿಂತಲೂ ಮೊದಲೇ ನಿಗದಿಯಾಗಿದ್ದ ಮದುವೆಯನ್ನು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲಾಗುತ್ತಿತ್ತು. ಆದರೆ ಜನರು ನಿಯಮಕ್ಕಿಂತ ಬಹಳ ಹೆಚ್ಚು ಜನರು ಸೇರಿದ್ದರು.
ಮದುವೆಯಲ್ಲಿ ಮಾಂಗಲ್ಯ ಧಾರಣೆಯೂ ನಡೆದು, ಆರತಕ್ಷತೆ ನಡೆಯುತ್ತಿದ್ದ ವೇಳೆ ಹೆಚ್ಚು ಜನ ಸೇರಿದ್ದ ಮಾಹಿತಿ ಸಿಕ್ಕ ಅಧಿಕಾರಿಗಳು ಸಭಾಂಗಣಕ್ಕೆ ಪೊಲೀಸರೊಂದಿಗೆ ಆಗಮಿಸಿದರು. ಈ ಸಂದರ್ಭ 50ಕ್ಕಿಂತ ಹೆಚ್ಚು ಜನರು ಸೇರಿದ್ದ ಕಾರಣ, ನಿಗದಿತ ಜನರನ್ನು ಹೊರತುಪಡಿಸಿ ಉಳಿದವರೆಲ್ಲ ಹೊರ ಹೋಗುವಂತೆ ಮೈಕ್ ನಲ್ಲಿ ಸೂಚಿಸಿದರು. ಇದರಿಂದಾಗಿ ಕಕ್ಕಾಬಿಕ್ಕಿಯಾದ ಮದುವೆಗೆ ಆಗಮಿಸಿದ್ದ ಕೆಲವರು ಊಟವನ್ನೂ ಮಾಡದೆ ಭಯದಲ್ಲಿ ಸಭಾಂಗಣದಿಂದ ಹೊರ ಹೋಗಿದ್ದಾರೆ.
ಕೆಲ ಸಮಯದ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡು ಉಡುಗೊರೆ ನೀಡಲು ಹಾಗೂ ಊಟಕ್ಕೆ ಅವಕಾಶ ನೀಡಲಾಯಿತು.
ಕಲ್ಯಾಣ ಮಂಟಪದ ಮಾಲೀಕರು ಮದುವೆ ಕಡೆಯವರಿಗೆ ಪರವಾನಗಿ ಪಡೆಯುವುದು ಬೇಡ. ಎಲ್ಲ ತಾನೆ ನೋಡಿಕೊಳ್ಳುತ್ತೇನೆಂದು ಹೇಳಿದ್ದರಂತೆ. ಹೀಗಾಗಿ ಮದುವೆ ಕಡೆಯವರು ಅನುಮತಿ ಪಡೆಯಲಿಲ್ಲವಂತೆ. ತಮಗೆ ಕೋವಿಡ್ ನಿಯಮದ ಪ್ರಕಾರ ಅನುಮತಿ ಪಡೆಯುವುದು ಗೊತ್ತಿತ್ತು.ಆದರೆ ಮಾಲೀಕರ ಮಾತಿನಿಂದಾಗಿ ತಾವು ಅನುಮತಿ ಪಡೆದಿರಲಿಲ್ಲ ಎಂದು ಮದುವೆ ಕಡೆಯವರು ಹೇಳಿದ್ದಾರೆ. ಈ ಬಗ್ಗೆ ಮಾಲೀಕರು ತಮಗೆ ಅನುಮತಿ ಪಡೆಯಬೇಕೆಂದು ನಿರ್ದಿಷ್ಟವಾಗಿ ಯಾರು ಹೇಳಿರಲಿಲ್ಲ. ಇನ್ನು ಮುಂದೆ ತಾವು ಅನುಮತಿ ಪಡೆದು ಮದುವೆ ನಡೆಸಲು ಅವಕಾಶ ನೀಡುತ್ತೇವೆಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement