ಹೊಸ ಭದ್ರತಾ ನೀತಿ ತನಿಖೆಗೆ ತಡೆ : ವಾಟ್ಸಪ್ ಮೇಲ್ಮನವಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ನವ ದೆಹಲಿ: ಹೊಸ ಭದ್ರತಾ ನೀತಿಯ ವಿರುದ್ಧ ತನಿಖೆಗೆ ತಡೆ ನೀಡುವಂತೆ ವಾಟ್ಸ್‌ಪ್ , ಫೇಸ್‍ಬುಕ್ ಕಂಪನಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ನವೀನ್ ಚಾವ್ಲಾ ಅವರು ಸಾಮಾಜಿಕ ಜಾಲತಾಣಗಳ ಕಂಪನಿಗಳ ಆತಂಕವನ್ನು ತಳ್ಳಿ ಹಾಕಿದ್ದಾರೆ. ಇದೇವೇಳೆ ಭಾರತೀಯ ಸ್ಪರ್ಧಾ ಆಯೋಗ ಸಂಸ್ಥೆ (ಸಿಸಿಐ)ಯ ಕ್ರಮವನ್ನು ಎತ್ತಿಹಿಡಿದಿದ್ದಾರೆ.
ವಾಟ್ಸ್‌ಪ್ ಸಂಸ್ಥೆ ಇತ್ತೀಚಿಗೆ ಹೊಸ ಭದ್ರತಾ ನೀತಿ ಪ್ರಕಟಿಸಿತ್ತು ಹಾಗೂ ಗ್ರಾಹಕರು ಅದನ್ನು ಅಂಗೀಕರಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿತ್ತು. ವಾಟ್ಸ್‌ಪ್ ಸಂಸ್ಥೆಯ ಹೊಸ ನೀತಿಗಳ ಬಗ್ಗೆ ಸಾಕಷ್ಟ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ತನಿಖೆಗೆ ಸಿಸಿಐ ಆದೇಶ ಮಾಡಿತ್ತು. ಇದನ್ನು ವಾಟ್ಸ್‌ಪ್ ಸಂಸ್ಥೆ ಹೈಕೋರ್ಟಿಲ್ಲಿ ಪ್ರಶ್ನಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಸಿಸಿಐ ಕ್ರಮ ವಿವೇಕಯುತ ನಡೆ ಎಂದು ಅಭಿಪ್ರಾಯಪಟ್ಟಿದೆ.
ಖಾಸಗಿ ನೀತಿಯ ವಿರುದ್ಧ ಸಲ್ಲಿಸಲಾಗಿರುವ ವಿಶೇಷ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ನಲ್ಲಿ ಯಾವ ರೀತಿಯ ತೀರ್ಪು ಬರಲಿದೆ ಎಂಬುದನ್ನು ಕಾದು ನೋಡೋಣ. ಆ ವರೆಗೂ ಕಾದು ನೋಡೋಣ ಎಂದು ಹೈಕೋರ್ಟ್ ಹೇಳಿದೆ.
ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿ ಕುರಿತು ತನಿಖೆ ನಡೆಸಲು ಸಿಸಿಐ ಮಾರ್ಚ್ 24 ರಂದು ಆದೇಶಿಸಿದ್ದು, ಇದನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕಾಗಿದೆ. ಫೇಸ್‌ಬುಕ್ ಮತ್ತು ವಾಟ್ಸಪ್ ಎರಡೂ ಈ ಆದೇಶವನ್ನು ಪ್ರಶ್ನಿಸಿವೆ ಮತ್ತು ವಕೀಲ ತೇಜಸ್ ಕರಿಯಾ ಅವರ ಮೂಲಕ ಸಲ್ಲಿಸಿದ ತಮ್ಮ ಪ್ರತ್ಯೇಕ ಮನವಿಯಲ್ಲಿ, ವಾಟ್ಸಪ್‌ನ ಗೌಪ್ಯತೆ ನೀತಿಯ ವಿಷಯವು ಸುಪ್ರೀಂ ಕೋರ್ಟ್‌ನ ಮುಂದೆ ಇರುವುದರಿಂದ, ಸಿಸಿಐ ತನಿಖೆಗೆ ಆದೇಶಿಸುವ ಅಗತ್ಯವಿಲ್ಲ ಎಂದು ವಾದಿಸಿತು.
ಸಿಸಿಐ ಸಾಮಾಜಿಕ ಮಾಧ್ಯಮ ಮಧ್ಯವರ್ತಿ ವಾಟ್ಸಪ್‌ನ ಹೊಸ ಗೌಪ್ಯತೆ ನೀತಿಯು ಹೆಚ್ಚಿನ ಬಳಕೆದಾರರನ್ನು ಕರೆತರಲು ಉದ್ದೇಶಿತ ಜಾಹೀರಾತುಗಳಿಗಾಗಿ ಅತಿಯಾದ ಡೇಟಾ ಸಂಗ್ರಹಣೆ ಮತ್ತು ಗ್ರಾಹಕರನ್ನು “ಹಿಂಬಾಲಿಸಲು” ಕಾರಣವಾಗುತ್ತದೆ ಎಂದು ವಾದಿಸಿತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ