18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ: ವೆಬ್‌ಸೈಟಿನಲ್ಲಿ ನೋಂದಣಿ ಹೀಗೆ ಮಾಡಬೇಕು

posted in: ರಾಜ್ಯ | 0

ನವ ದೆಹಲಿ: 18 ವರ್ಷ ಮೇಲ್ಪಟ್ಟವರ ಕೊರೊನಾ ಲಸಿಕಾ ನೋಂದಣಿಗೆ ಕ್ಷಣಗಣನೇ ಆರಂಭವಾಗಿದ್ದು, ಏಪ್ರಿಲ್​ 28ರಿಂದ ಪ್ರಕ್ರಿಯೆ ಆರಂಭವಾಗಲಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್​ಎಚ್​ಎ)ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್​.ಎಸ್​. ಶರ್ಮಾ ಅವರು ಗುರುವಾರ ತಿಳಿಸಿದ್ದಾರೆ.
ಹದಿನೆಂಟು ವರ್ಷ ಮೇಲ್ಪಟ್ಟವರು ಸರ್ಕಾರದ ಕೋವಿನ್ (COWIN.GOV.IN) ವೆಬ್​ಸೈಟ್​ನಲ್ಲಿ ಏಪ್ರಿಲ್​ 24ರಿಂದ ನೋಂದಣಿ ಮಾಡಿಕೊಳ್ಳಬಹುದು. ಲಸಿಕಾ ಪ್ರಕ್ರಿಯೆ ಮತ್ತು ದಾಖಲಾತಿಗಳು ಒಂದೇ ಆಗಿರುತ್ತವೆ. ಕೋವಾಕ್ಸಿನ್​ ಮತ್ತು ಕೋವಿಶೀಲ್ಡ್​ ದೇಶಿ ಲಸಿಕೆಗಳ ಜತೆಯಲ್ಲಿ ರಷ್ಯಾದ ಸ್ಪುಟ್ನಿಕ್​ ವಿ ಸಹ ಕೆಲವೊಂದು ಕೇಂದ್ರಗಳಲ್ಲಿ ಲಸಿಕೆಯ ಮತ್ತೊಂದು ಆಯ್ಕೆ ಆಗಿರಲಿದೆ ಎಂದು ಅವರು ಹೇಳಿದ್ದಾರೆ
ಕೊರೊನಾ ಲಸಿಕೆಗೆ ಅರ್ಹ ಫಲಾನುಭವಿಗಳು ಕೋವಿನ್​ ವೆಬ್​ಸೈಟ್​ ಅಥವಾ ಆರೋಗ್ಯ ಸೇತು ಅಪ್ಲಿಕೇಶನ್​ ಮೂಲಕ ಲಸಿಕೆಗೆ ನೋಂದಣಿ ಮಾಡಿಕೊಳ್ಳಬಹುದು.
ಕೋವಿನ್​ ಅಪ್ಲಿಕೇಶನ್​ನಲ್ಲಿ ಲಸಿಕೆ ನೋಂದಣಿ: ಕೋವಿನ್​ ವೆಬ್​ಸೈಟ್​ ಓಪನ್​ ಮಾಡಿ ಸೈನ್​ ಇನ್​ ಆಗಿ. ಮೊಬೈಲ್​ ಸಂಖ್ಯೆ ನಮೂದಿಸಿ. ನಂತರ ನಿಮಗೆ ಬಂದ ಒಟಿಪಿಯನ್ನ ಟೈಪ್​ ಮಾಡಿ ಅದನ್ನು ಸರಿಯಾಗಿ ಪರಿಶೀಲಿಸಿ ಕ್ಲಿಕ್ ಮಾಡಿ.
ರಿಜಿಸ್ಟರ್ ಫಾರ್​ ವ್ಯಾಕ್ಸಿನೇಷನ್​ ಪೇಜ್​ನಲ್ಲಿ ಹೆಸರು ಕೇಳುತ್ತದೆ, ಆಗ ಹೆಸರು, ಜನ್ಮ ದಿನಾಂಕ, ಫೋಟೋ ಸೇರಿದಂತೆ ಎಲ್ಲಾ ಮಾಹಿತಿಗಳನ್ನ ನಮೂದಿಸಿ. ರಿಜಿಸ್ಟರ್​ ಆಯ್ಕೆ ಮೇಲೆ ಕ್ಲಿಕ್​ ಮಾಡಬೇಕು.
ಒಮ್ಮೆ ನೋಂದಣಿ ಕಾರ್ಯ ಮುಗಿಯುತ್ತಿದ್ದಂತೆಯೇ ನಿಮಗೆ ದಿನಾಂಕ ನಿಗದಿ ಆಯ್ಕೆ ನಿಮಗೆ ಸಿಗಲಿದೆ.ನಿಮ್ಮ ಪಿನ್ ಕೋಡನ್ನು ಎಂಟರ್​ ಮಾಡಿ ಸರ್ಚ್ ಕೊಡಬೇಕು. ಈ ಪಿನ್​ ಕೊಡ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಲಸಿಕಾ ಕೇಂದ್ರಗಳು ಮೊಬೈಲ್‌ ಅಥವಾ ಕಂಪ್ಯೂಟರ್‌ ಸ್ಕ್ರೀನ್‌ ಮೇಲೆ ಕಾಣುತ್ತವೆ. ಆಗ ದಿನಾಂಕ ಹಾಗೂ ಸಮಯ ಕ್ಲಿಕ್​ ಮಾಡಿ ಅದನ್ನು ದೃಢಪಡಿಸಿಕೊಂಡು ಆಯ್ಕೆ ಕ್ಲಿಕ್​ ಮಾಡಬೇಕು.
ಒಮ್ಮೆ ಲಾಗಿನ್​ ಆದರೆ ನೀವು 4 ಮಂದಿಯನ್ನ ಲಸಿಕೆಗೆ ನೋಂದಾಯಿಸಬಹುದಾಗಿದೆ. ನೋಂದಣಿ ದಿನಾಂಕವನ್ನೂ ನೀವು ಸುಲಭವಾಗಿ ಬದಲಾಯಿಸಿಕೊಳ್ಳಲು ಅವಕಾಶವಿದೆ.
ಆರೋಗ್ಯ ಸೇತು ಅಪ್ಲಿಕೇಶನ್​:
ಆರೋಗ್ಯ ಸೇತು ಅಪ್ಲಿಕೇಶನ್​ನಲ್ಲಿ ಕೋವಿನ್​ ಟ್ಯಾಬ್​​ ಮೇಲೆ ಕ್ಲಿಕ್​​ ಮಾಡಬೇಕು. ವ್ಯಾಕ್ಸಿನ್​ ನೋಂದಣಿ (ರಿಜಿಸ್ಟ್ರೇಷನ್​​) ಆಯ್ಕೆ ಮಾಡಿ – ಫೋನ್​ ನಂಬರ್​​ ನಮೂದಿಸಿ – ಒಟಿಪಿ ಟೈಪ್​ ಮಾಡಬೇಕು. ನಂತರ ಸರಿಯಾಗಿ ಪರಿಶೀಲಿಸಿ ಅದರ ಮೇಲೆ ಕ್ಲಿಕ್​ ಮಾಡಬೇಕು – ಈಗ ನೀವು ರಿಜಿಸ್ಟ್ರೇಷನ್ ವ್ಯಾಕ್ಸಿನೇಷನ್​ ಪೇಜ್​ಗೆ ಬಂದಿರುವುದನ್ನು ಹೇಳುತ್ತದೆ.
ನಂತರ ಮುಂದಿನ ಆಯ್ಕೆಗಳನ್ನ ಕ್ಲಿಕ್​ ಮಾಡುತ್ತಾ ಹೋಗಬೇಕು. ಪ್ರತಿಯೊಬ್ಬರೂ ಕೊರೊನಾ ಲಸಿಕೆಯ ಎರಡು ಡೋಸ್​ಗಳನ್ನ ಪಡೆಯಬೇಕು. ಕೋವ್ಯಾಕ್ಸಿನ್​ ಲಸಿಕೆಯ ಮೊದಲ ಡೋಸ್​ ಪಡೆದ 28 ರಿಂದ 42 ದಿನಗಳ ಒಳಗೆ ಎರಡನೇ ಡೋಸ್ ಪಡೆಯಬೇಕು.
ಕೋವಿ ಶೀಲ್ಡ್ ಮೊದಲ ಡೋಸ್​ ಪಡೆದವರು 28 ರಿಂದ 56 ದಿನಗಳ ಒಳಗೆ ಎರಡನೇ ಡೋಸ್​ ಹಾಕಿಸಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ