ಉಸಿರಾಟದ ಸಮಸ್ಯೆ ಎದುರಾದ ಕೊರೊನಾ ಸೋಂಕಿತರಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಮಹತ್ವದ ಸಲಹೆ

ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರು ಉಸಿರಾಟದ ಸಮಸ್ಯೆ ಅನುಭವಿಸಿದರೆ ಮಾಡಬೇಕಾದ ಪ್ರೋನಿಂಗ್​ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ.
ಆಮ್ಲಜನಕ ಮಟ್ಟ ಸುಧಾರಿಸಿಕೊಳ್ಳಲು ಮಾಡಬೇಕಾದ ಪ್ರೋನಿಂಗ್​ ಬಗ್ಗೆ ವಿಸ್ತೃತ ವರದಿಯನ್ನ ತಯಾರಿಸಲಾಗಿದೆ.
ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರೋದ್ರ ಹಿನ್ನೆಲೆ ಆಸ್ಪತ್ರೆಗಳ ಅಭಾವ ಕಂಡುಬರುತ್ತಿದೆ. ಹೀಗಾಗಿ ವೈದ್ಯರು ಆದಷ್ಟು ಮನೆಯಲ್ಲೇ ಚಿಕಿತ್ಸೆ ಪಡಯಿರಿ ಎಂದು ಮನವಿ ಮಾಡುತ್ತಿದ್ದಾರೆ.
ಮನೆಯಲ್ಲಿ ಹೋಮ್‌ ಐಸೊಲೇಶನ್‌ನಲ್ಲಿ ಇದ್ದಾಗ ಚಿಕಿತ್ಸೆ ಪಡೆಯುತ್ತಿರುವ ರೋಗಿ ಉಸಿರಾಟದ ಸಮಸ್ಯೆ ಅನುಭವಿಸಿದ್ದರೆ ಅಂತಹ ರೋಗಿಗಳಿಗ ಬೋರಲು ಹಾಕಿಕೊಂಡು (ಅಧೋಮುಖ) ಮಲಗಬೇಕು ಎಂದು ಹೇಳಲಾಗಿದೆ.
ಹೀಗೆ ಬೋರಲು ಹಾಕಿ ಮಲಗುವುದರಿಂದ ಆಮ್ಲಜನಕದ ಸಂಚಾರ ಸರಾಗವಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಿದ್ಧವಾಗಿದೆ. ಇದನ್ನು ಆಮ್ಲಜನಕದ ಮಟ್ಟ 94ಕ್ಕಿಂತ ಕೆಳಗೆ ಇಳಿದರೆ ಆ ರೋಗಿಯು ಹೊಟ್ಟೆ ಹಾಗೂ ಮುಖವನ್ನ ಕೆಳಗೆ ಹಾಕಿ ಮಲಗಬೇಕು ಎಂದು ಸಲಹೆ ನೀಡಲಾಗಿದೆ.
ಈ ಪ್ರೋನಿಂಗ್​ ಮಾಡಲು ನಿಮಗೆ ನಾಲ್ಕರಿಂದ ಐದು ದಿಂಬುಗಳ ಅವಶ್ಯಕತೆ ಇದೆ. ಒಂದು ದಿಂಬು ಕುತ್ತಿಗೆ ಕೆಳಗೆ, ಇನ್ನೊಂದು ಎದೆಯ ಕೆಳಗೆ ಇನ್ನೊಂದು ತೊಡೆ ಹಾಗೂ ಉಳಿದ ಎರಡು ದಿಂಬುಗಳನ್ನ ಮೊಣಕಾಲಿನ ಕೆಳಗೆ ಇಡಬೇಕು. ಇದೇ ಸ್ಥಿತಿಯಲ್ಲಿ ಬೋರಲು ಹಾಕಿ 30 ನಿಮಿಷಗಳ ಕಾಲ ಮಲಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿಯಲ್ಲಿ ನೀಡಲಾಗಿದೆ.
ಈ ಪ್ರೋನಿಂಗ್​​ ಅನ್ನು ಯಾರೆಲ್ಲ ಮಾಡಬಾರದು ಎಂಬುದನ್ನೂ ಕೇಂದ್ರ ಆರೋಗ್ಯ ಸಚಿವಾಲಯ ಪಟ್ಟಿ ಮಾಡಿದೆ :

*ಗರ್ಭಿಣಿಯರು

* ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದಲ್ಲಿ

*ಬೆನ್ನುಮೂಳೆ ಸಮಸ್ಯೆ, ಪೆಲ್ವಿಕ್​ ಮುರಿತ ಇದ್ದವರು

ಪ್ರೋನಿಂಗ್​ ಮಾಡುವ ವೇಳೆ ಗಮನಿಸಬೇಕಾದ ಅಂಶಗಳು.

*ಆಹಾರ ಸೇವಿಸಿದ ಒಂದು ಗಂಟೆಯಲ್ಲಿ ಮಾಡಬಾರದು

*ಸಹಿಸಿಕೊಳ್ಳಬಹುದು ಅಥವಾ ತಡೆದುಕೊಳ್ಳಬಹುದು ಎಂದು ಅನಿಸಿದಾಗ ಮಾತ್ರ ಪ್ರೋನಿಂಗ್​ ಮಾಡಬೇಕು

*ಪ್ರೋನಿಂಗ್​ ಮಾಡುವ ವೇಳೆ ದೇಹದ ನ್ಯೂನತೆ ಹಾಗೂ ತೊಂದರೆ ಬಗ್ಗೆ ಗಮನವಿರಬೇಕು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 4

ನಿಮ್ಮ ಕಾಮೆಂಟ್ ಬರೆಯಿರಿ