ಕೊರೊನಾ ಹೊಡೆತಕ್ಕೆ ಮೀನಾಗರರು ಸಂಕಷ್ಟದಲ್ಲಿ

ಕಾರವಾರ : ಕೊರೋನಾ ಮಹಾಮಾರಿ ಮೀನುಗಾರರ ಬದುಕನ್ನುಸಂಕಷ್ಟಕ್ಕೆ ತಳ್ಳಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮೀನುಗಾರರಿಗೆ ಅವಧಿಗೂ ಮುಂಚಿತವೇ ಮೀನುಗಾರಿಕೆ ಬಂದ್ ಮಾಡುವ ಸ್ಥಿತಿ ಮತ್ತೊಮ್ಮೆ ಬಂದೊದಗಿದೆ.
ಆಳ ಸಮುದ್ರ ಮೀನುಗಾರಿಕೆ ಹಂಗಾಮು ಮುಕ್ತಾಯಕ್ಕೆ ಇನ್ನು ಒಂದು ತಿಂಗಳ ಸಮಯವಿರುವಂತೆಯೇ ಮೀನುಗಾರಿಕೆ ಸ್ಥಗಿತ ಮಾಡಲು ಮೀನುಗಾರರು ಮುಂದಾಗಿದ್ದಾರೆ. ಕೊರೊನಾಕ್ಕೆ ಹೆದರಿ ಹೊರ ರಾಜ್ಯದ ಮೀನುಗಾರಿಕಾ ಕಾರ್ಮಿಕರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಇನ್ನೂ ಒಂದು ತಿಂಗಳುಗಳ ಕಾಲ ಮೀನುಗಾರಿಕೆ ಸರ್ಕಾರದ ಆದೇಶ ಇದ್ದರೂ ಮೀನುಗಾರಿಗೆ ಹೋಗಲು ಹೆದರುತ್ತಿದ್ದಾರೆ. ಜೊತೆಗೆ ಕರ್ಪ್ಯೂ ದಿಂದ ಸಮಸ್ಯೆ ಎದುರಾಗಿದೆ.
ಕಳೆದ ವರ್ಷ ಲಾಕ್ ಡೌನ್ ನಿಂದ ಮೀನುಗಾರಿಕೆ ಉದ್ಯಮ ಸಂಪೂರ್ಣ ನೆಲಕಚ್ಚಿತ್ತು.ಈ ವರ್ಷ ಕೂಡ ಅದೇ ಸ್ಥಿತಿ ಬಂದೊದಗಿದ್ದು ಪರಿಸ್ಥಿತಿ ಭಿನ್ನವಾಗುತ್ತಿಲ್ಲ. ಈ ನಡುವೆ ಡೀಸೆಲ್ ದರ ಕೂಡಾ ಗಗನಕ್ಕೇರಿದ್ದು ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ಮೀನುಗಾರರು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement