ಕೋವಿಡ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಜಪಾನ್

ಟೋಕಿಯೊ: ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಟೋಕಿಯೊದ ಜೊತೆಗೆ ಕ್ಯೋಟೋ, ಒಸಾಕಾ ಮತ್ತು ಹ್ಯೋಗೊದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಜಪಾನ್ ಪ್ರಧಾನಿ ಯೋಶಿಹಿಡಾ ಸುಗಾ ಹೇಳಿದ್ದಾರೆ.
ಕ್ಯೋಟೋ, ಒಸಾಕಾ ಮತ್ತು ಹ್ಯೋಗೊದಲ್ಲಿ ಪ್ರದೇಶದಲ್ಲಿನ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಏಪ್ರಿಲ್ 25 ರಿಂದ ಮೇ 11ರ ವರೆಗೆ ಈ ಸ್ಥಳಗಳಲ್ಲಿ ತುರ್ತು ಪರಿಸ್ಥಿತಿ ಮುಂದುವರಿಯಲಿದೆ ಎಂದು ವರದಿಯಾಗಿದೆ. ಕಳೆದ ಜನವರಿಯಲ್ಲಿ ದೇಶದ ಅನೇಕ ಸ್ಥಳಗಳಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಈ ಬಾರಿಯ ತುರ್ತು ಪರಿಸ್ಥಿತಿ ತುಂಬಾ ಕಟ್ಟುನಿಟ್ಟಾಗಿದೆ ಎಂದು ಹೇಳಲಾಗಿದೆ.
ಟೋಕಿಯೊದಲ್ಲಿ ಶುಕ್ರವಾರ 759 ಪ್ರಕರಣಗಳು ದೃಢಪಟ್ಟಿವೆ. ಒಸಾಕಾದಲ್ಲಿ ಮತ್ತೆ ಹೊಸದಾಗಿ 1162 ಪ್ರಕರಣಗಳು ದಾಖಲಾಗಿವೆ. ಒಸಾಕಾದಲ್ಲಿ ಅನಾರೋಗ್ಯದ ರೋಗಿಗಳಿಗೆ ಈಗ ಹಾಸಿಗೆಗಳು ಕಡಿಮೆಯಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಪಾನ್ ದೇಶದಲ್ಲಿ ಕೋವಿಡ್ ಸೋಂಕಿನಿಂದ 10000 ಜನ ಮೃತಪಟ್ಟಿದ್ದಾರೆ. ಕಳೆದ ಬಾರಿ ತುರ್ತು ಪರಿಸ್ಥಿತಿ ವೇಳೆ ಸೋಂಕಿನ ಸಂಖ್ಯೆ ಕಡಿಮೆಯಿತ್ತು. ನಂತರ ತುರ್ತು ಪರಿಸ್ಥಿತಿ ತೆಗೆದೆ ಮೇಲೆ ಮತ್ತೆ ಸೋಂಕಿನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಜಪಾನ್ ಸರ್ಕಾರ ತುರ್ತು ಪರಿಸ್ಥಿತಿ ಜಾರಿ ಮಾಡಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ