ಆಮ್ಲಜನಕ ಪೂರೈಕೆ ತಡೆದರೆ ಗಲ್ಲಿಗೇರಿಸ್ತೇವೆ: ದೆಹಲಿ ಹೈಕೋರ್ಟ್ ಎಚ್ಚರಿಕೆ

ನವ ದೆಹಲಿ: ದೆಹಲಿಯಲ್ಲಿ ಆಮ್ಲಜನಕ ಬಿಕ್ಕಟ್ಟು ಕುರಿತಾದ ವಿಚಾರಣೆಯ ವೇಳೆ ದೆಹಲಿ ಹೈಕೋರ್ಟ್‌ ದೆಹಲಿಯಲ್ಲಿನ ಆಸ್ಪತ್ರೆಗಳಲ್ಲಿನ ಆಮ್ಲಜನಕದ ಕೊರತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತಾದ ಅರ್ಜಿಯ ವಿಚಾರಣೆ ವೇಳೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಹೈಕೋರ್ಟ್‌ ಆಮ್ಲಜನಕ ಪೂರೈಕೆಯನ್ನು ಯಾರಾದರು ಅಡ್ಡಿಪಡಿಸಿದರೆ ಅವರನ್ನು ಗಲ್ಲಿಗೇರಿಸಲಾಗುವುದು ಎಂದು ಹೇಳಿದೆ.
ಜಸ್ಟಿಸ್ ವಿಪಿನ್ ಸಾಂಘಿ ಹಾಗೂ ಜಸ್ಟಿಸ್ ರೇಖಾ ಪಲ್ಲಿ ಅವರನ್ನೊಳಗೊಂಡ ಪೀಠ, ಗಂಭೀರ ರೂಪದಲ್ಲಿ ಅನಾರೋಗ್ಯಕ್ಕೆ ಒಳಗಾದ ಕೊವಿಡ್ ರೋಗಿಗಳ ಚಿಕಿತ್ಸೆಗೆ ಬೇಕಾದ ಆಮ್ಲಜನಕದ ಕೊರತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ವೇಳೆ ಖಾರದ ಪ್ರತಿಕ್ರಿಯೆ ನೀಡಿದೆ. ಮಹಾರಾಜಾ ಅಗ್ರಸೇನ್ ಆಸ್ಪತ್ರೆಯ ವತಿಯಿಂದ ಈ ಅರ್ಜಿ ದಾಖಲಿಸಲಾಗಿತ್ತು.
ಯಾರೇ ಆದ್ರೂ ಸುಮ್ಮನೆ ಬಿಡುವುದಿಲ್ಲ..:
ದೆಹಲಿಯ ಜನರಿಗೆ ಆಗುತ್ತಿರುವ ಆಮ್ಲಜನಕದ ಕೊರತೆ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ನ್ಯಾಯಪೀಠ, ” ಇದೊಂದು ಅಪರಾಧಿ ಕೃತ್ಯವಾಗಿದೆ. ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಆಡಳಿತದ ಯಾವುದೇ ಅಧಿಕಾರಿ ಆಮ್ಲಜನಕವನ್ನು ತೆಗೆದುಕೊಳ್ಳುವಲ್ಲಿ ಅಥವಾ ಸರಬರಾಜಿನಲ್ಲಿ ಅಡ್ಡಿಯಾಗಿದ್ದರೆ, “ನಾವು ಆ ವ್ಯಕ್ತಿಯನ್ನು ಗಲ್ಲಿಗೇರಿಸುತ್ತೇವೆ” ಎಂದು ದೆಹಲಿ ಹೈಕೋರ್ಟ್ ಶನಿವಾರ ಹೇಳಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್ಸಿಗೆ ಶಾಕ್‌ : ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ

ಯಾರೇ ಆಗಲಿ ಆಮ್ಲಜನಕದ ಪೂರೈಕೆ ತಡೆಹಿಡಿಯಲು ಪ್ರಯತ್ನಿಸಿದರೆ ಅವರನ್ನು ಹಾಗೆಯೇ ಬಿಡುವುದಿಲ್ಲ. ಅವರನ್ನು ಗಲ್ಲಿಗೇರಿಸಲಾಗುವುದು ಎಂದ ನ್ಯಾಯಾಲಯ ಇದೇ ವೇಳೆ ಆಮ್ಲಕನಕ ಪೂರೈಕೆ ಬಗ್ಗೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಪ್ರಕರಣದಲ್ಲಿ ನಾವು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಅವರು ಕೆಳಮಟ್ಟದ ಅಧಿಕಾರಿಯೇ ಆಗಲಿ ಅಥವಾ ಮೇಲ್ದರ್ಜೆ ಅಧಿಕಾರಿಯೇ ಆಗಿರಲಿ. ಆಮ್ಲಜನಕ ಪೂರೈಕೆಗೆ ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಏಕೆಂದರೆ ಜೀವನ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ” ಎಂದು ಹೇಳಿದೆ.
ವರದಿ ಕೇಳಿದ ನ್ಯಾಯಪೀಠ
ಅರ್ಜಿಯ ವಿಚಾರಣೆಯ ವೇಳೆ ದೆಹಲಿ ಸರ್ಕಾರಕ್ಕೆ ಕೂಡ ಸೂಚನೆ ನೀಡಿರುವ ನ್ಯಾಯಾಲಯ, ದೆಹಲಿಯಲ್ಲಿ ಆಮ್ಲಜನಕ ಪೂರೈಕೆ ನಿಲ್ಲಿಸುತ್ತಿರುವವರ ಬಗ್ಗೆ ವರದಿ ನೀಡಲು ಸೂಚಿಸಿದೆ. ‘ಆ ವ್ಯಕ್ತಿಯನ್ನು ನಾವು ಗಲ್ಲಿಗೇರಿಸುತ್ತೇವೆ. ಯಾರನ್ನು ಕೂಡ ಬಿಡುವುದಿಲ್ಲ. ಕೇಂದ್ರ ಸರ್ಕಾರಕ್ಕೂ ಕೂಡ ಮಾಹಿತಿ ನೀಡಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರಕ್ಕೆ ತರಾಟೆ:
ದೆಹಲಿಯ ಜನರಿಗೆ ಸಮಯಕ್ಕೆ ಸರಿಯಾಗಿ ಆಮ್ಲಜನಕ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ದೆಹಲಿಯಲ್ಲಿ ಆಮ್ಲಜನಕ ಪ್ಲಾಂಟ್ ಏಕೆ ಪ್ರಾರಂಭಿಸುತ್ತಿಲ್ಲ ಎಂದು ನ್ಯಾಯಪೀಠ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಇನ್ನೊಂದೆಡೆ ದೆಹಲಿಗೆ ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಿಗಲಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಈ ವೇಳೆ ಮಾತನಾಡಿರುವ ಜಸ್ಟಿಸ್ ವಿಪಿನ್ ಸಾಂಘಿ, “ನಾವು ಕಳೆದ ಹಲವು ದಿನಗಳಿಂದ ವಿಚಾರಣೆ ನಡೆಸುತ್ತಿದ್ದೇವೆ, ನಿತ್ಯ ಅದೇ ವಾದಗಳು ಕೇಳಿಬರುತ್ತಿವೆ. ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಹೀಗಾಗಿ ದೆಹಲಿಗೆ ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಿಗಲಿದೆ ಮತ್ತು ಅದು ಎಲ್ಲಿಂದ ಬರಲಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ಪ್ರಮುಖ ಸುದ್ದಿ :-   "ಚಾಣಕ್ಯ ಕೂಡ...: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement