ಪ್ರತಿ ಜಿಲ್ಲೆಗೆ 1 ಸಾವಿರ, ನಗರ ವ್ಯಾಪ್ತಿಯಲ್ಲಿ 5 ಸಾವಿರ ಪೋರ್ಟೇಬಲ್‌ ವೆಂಟಿಲೇಟರ್ ವ್ಯವಸ್ಥೆ

ಬೆಂಗಳೂರು : ಮನೆಯಲ್ಲಿ ಇರುವವರಿಗೆ ಹೆಲ್ಪ್ ಡೆಸ್ಕ್ ಮಾಡಿ, ಅಲ್ಲಿಯೇ ಇದ್ದುಕೊಂಡು ಚಿಕಿತ್ಸೆ ಪಡೆಯುವ ವಿಧಾನದ ಬಗ್ಗೆ ಟೆಲಿ ಕಾಲಿಂಗ್ ವ್ಯವಸ್ಥೆ ಮಾಡುವ ನಿರ್ಧಾರ ಮಾಡಲಾಗಿದ್ದು ಶೀಘ್ರದಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸಚಿವ ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಸ್ರೇಲ್ ನಿಂದ ಪೋರ್ಟೆಬಲ್ ಆಕ್ಸಿಜನ್ ಉಪಕರಣಗಳನ್ನು ತರಿಸಲಾಗುತ್ತದೆ. ಕೊರೊನಾ ಸೌಮ್ಯ ಪ್ರಕರಣ ಇದ್ದವರಿಗೆ ಪೋರ್ಟೆಬಲ್ ಆಮ್ಲಜನಕ ಸಿಗುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಗೆ 1 ಸಾವಿರ, ನಗರ ವ್ಯಾಪ್ತಿಯಲ್ಲಿ 5 ಸಾವಿರ ಪೋರ್ಟೇಬಲ್ ವೆಂಟಿಲೇಟರ್ ವ್ಯವಸ್ಥ ಮಾಡಲಾಗುವುದು. ವಿಕ್ಟೋರಿಯಾ ಕ್ಯಾಂಪಸ್‌ನಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲು ಚಿಂತಿಸಲಾಗಿದೆ. ವೆಂಟಿಲೇಟರ್ ಆಸ್ಪತ್ರೆ ಕೊರತೆ ಕಾಣುತ್ತಿದೆ. ಶನಿವಾರದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.ಖಾಸಗಿ ಆಸ್ಪತ್ರೆಗಳಲ್ಲಿ 75 % ಕೋವಿಡ್ ಬೆಡ್ ತೆಗೆದುಕೊಳ್ಳುವ ನಿರ್ಧಾರ ಆಗಿದೆ. 2 ರಿಂದ 2,500 ಐಸಿಯು ಹಾಸಿಗೆ, ವೆಂಟಿಲೇಟರ್ ಘಟಕಗಳನ್ನು ‌ಮಾಡಬೇಕು ಎಂದು ನಿರ್ಧಾರವಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಲ ವೈದ್ಯಕೀಯ ಕಾಲೇಜು, ತೃತೀಯ ಚಿಕಿತ್ಸ ಹಂತದ ಆಸ್ಪತ್ರೆಗಳಲ್ಲಿ ಮೇಕ್ ಶಿಫ್ಟ್ ಹಾಸ್ಪಿಟಲ್ ಮಾಡಲು‌ ನಿರ್ಧಾರ ಮಾಡಲಾಗಿದೆ.ಎಲ್ಲಾ ಕಡೆ 100 ರಿಂದ 150 ಹಾಸಿಗೆಯ ಮೇಕ್ ಶಿಫ್ಟ್ ಆಸ್ಪತ್ರೆ ಮಾಡಲಾಗುತ್ತದೆ. ಬೀದರ್, ಶಿವಮೊಗ್ಗ, ಮೈಸೂರು, ತುಮಕೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಾಡ್ಯೂಲರ್ ಐಸಿಯು ತೆರೆಯಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದರು‌.
ಒಂದು ಕೋಟಿ ರೆಮ್ಡಿಸಿವಿರ್‌ ವಯಲ್ಸ್ ನೀಡಲು ಸಿಎಂ‌ ನಿರ್ಧರಿಸಿದ್ದಾರೆ. ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜಿನಿಂದ ಹೆಚ್ಚುವರಿ ಬೆಡ್ ಸಿಗಲಿದೆ. ಖಾಸಗಿ ಆಸ್ಪತ್ರೆಗಳ 75 % ಹಾಸಿಗೆ ತೆಗೆದುಕೊಳ್ಳುವ ನಿರ್ಧಾರದಿಂದ ಬೆಂಗಳೂರಿಗೆ 71400 ಹಾಸಿಗೆಗಳು ಸಿಗಲಿದೆ ಎಂದು ತಿಳಿಸಿದರು.
ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಸಭೆಯಲ್ಲಿ ಗೃಹ ಸಚಿವರು, ಕಂದಾಯ ಸಚಿವರು, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ ಜೋಶಿ ಜೊತೆ ನಾನು ಸೇರಿದಂತೆ ಸಭೆಯಲ್ಲಿ ಭಾಗಿಯಾಗಿದ್ದೆವು ಎಂದು ಮಾಹಿತಿ ನೀಡಿದರು.
ಮುಂದಿನ ತಿಂಗಳು ಮತ್ತಷ್ಟು ಆಮ್ಲಜನಕ, ರೆಮಿಡಿಸಿವರ್ ವ್ಯವಸ್ಥೆ ಮಾಡಲಾಗುತ್ತದೆ. ಸದ್ಯ ರಾಜ್ಯವು 300 ಟನ್ ಆಕ್ಸಿಜನ್ ಸಾಮರ್ಥ್ಯ ಹೊಂದಿದೆ.ಶನಿವಾರ ಕೇಂದ್ರದಿಂದ 800 ಟನ್ ಆಕ್ಸಿಜನ್ ಕರ್ನಾಟಕಕ್ಕೆ ರವಾನೆ ಆಗಿದೆ. ಅದೇರೀತಿ ರೆಮ್ಡಿಸಿವಿರ್ 1.22 ಲಕ್ಷ ವಯಲ್ಸ್ ಕೇಂದ್ರದಿಂದ ನೀಡಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement