ಬೈಕ್‌ ಸವಾರ ತೋರಿಸಿದ ದಾಖಲೆಗೆ ಪೊಲೀಸರದ್ದೇ ಬೆವರಿಳಿಯಿತು ಯಾಕೆಂದರೆ…!

ಶಿವಮೊಗ್ಗ : ಕೊರೊನಾ ನಿಯಂತ್ರಣಕ್ಕಾಗಿ ವೀಕೆಂಡ್‌ ಕರ್ಫ್ಯೂನಿಯಮ ಮೀರಿ ರಸ್ತೆಗೆ ಇಳಿದಿದ್ದ ವಾಹನ ಸವಾರರನ್ನು ತಪಾಸಣೆ ನಡೆಸುತ್ತಿದ್ದ ಪೊಲೀಸರೇ ಬಯಕ್‌ ನಿಲ್ಲಿಸಿದ ಸಂದರ್ಭದಲ್ಲಿ ಹೌಹಾರಿದ್ದಾರೆ…!
ಬೈಕ್ ತಡೆದು ಆ ವಯ್ಕತಿಯ ಬಳಿ ದಾಖಲೆ ಕೇಳಿದ ತಪ್ಪಿಗೆ ಪೊಲೀಸರಿಗೇ ಆ ವ್ಯಕ್ತಿ ತೋರಿಸಿದ ದಾಖಲೆ ನೋಡಿ ಮೈಯಿಂದ ಬೆವರಲ್ಲ, ನೀರೇ ಹರಿದಿದೆ…!!
ಇದು ಶಿವಮೊಗ್ಗ ಜಿಲ್ಲೆಯಲ್ಲಿ ವೀಕ್ ಎಂಡ್ ಕರ್ಪ್ಯೂ ನಿಯಮ ಮುರಿಯುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾಗ ನಡೆದಿದೆ. ಅನಗತ್ಯವಾಗಿ ರಸ್ತೆಗೆ ಇಳಿಯುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಈ ಮಧ್ಯೆ ನಗರದ ಅಮೀರ್‌ ಅಹ್ಮದ್ ಸರ್ಕಲ್ ನಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಪೊಲೀಸರು ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬನನ್ನು ತಡೆದಿದ್ದಾರೆ. ಆಗ ಆತನ ಬಳಿ ವಾಹನ ದಾಖಲೆ ತೋರಿಸಲು ಹೇಳಿದಾಗ ಆತ ಕೊರೋನಾ ಪಾಸಿಟಿವ್‌ ರಿಪೋರ್ಟ್ ತೋರಿಸಿದ್ದಾನೆ. ಅಷ್ಟೇ ಅಲ್ಲ, ತಾನೇ ಕೊರೊನಾ ಸೋಂಕಿತ ಎಂದೂ ಹೇಳಿದ್ದಾನೆ.
ಕ್ಷಣಕಾಲ ದಂಗಾದ ಸ್ಥಳದಲ್ಲಿದ್ದ ಪೊಲೀಸರು ಸಾವರಿಸಿಕೊಂಡು ಕೊರೊನಾ ಪಾಸಿಟಿವ್‌ ಇದ್ದರೆ ಹೀಗ್ಯಾಕೆ ಓಡಾಡ್ತಾ ಇದ್ದೀಯಾ ಎಂದು ಪ್ರಶ್ನಸಿದ್ದಾರೆ . ಈಗ ಆತ ಸಾರ್‌ ನಾನು ಈಗ ತಾನೆ ಆಸ್ಪತ್ರೆಯಿಂದ ಬರ್ತಾ ಇದ್ದೇನೆ ಎಂಬುದಾಗಿ ಹೇಳಿದ್ದಾನೆ. ಇದರಿಂದ ಪೊಲೀಸರು ಮತ್ತಷ್ಟು ಹೌಹಾರಿದ್ದಾರೆ.
ಸೋಂಕಿತ ವ್ಯಕ್ತಿಗಳು ಹೀಗೆ ಓಡಾಡಬಾರದು. ಮನೆಗೆ ಹೋಗು ಎಂದು ಹೇಳಿದ್ದಾರೆ. ಆಗ ಅಕ್ಕಪಕ್ಕದ ವಾಹನ ಸವಾರರು ಸೇರಿದಂತೆ ಪೊಲೀಸರು, ಮಾಧ್ಯಮದವರು, ಕ್ಷಣಕಾಲ ಆತಂಕಕ್ಕೆ ಈಡಾಗಿದ್ದಾರೆ. ಬಳಿಕ ಕೂಡಲೇ ಸೋಂಕಿತನನ್ನು ಮನೆಗೆ ಕಳುಹಿಸಿ, ಕಂಟ್ರೋಲ್ ರೂಂಗೆ ತಿಳಿಸಿದ ಪೊಲೀಸರು ಅಲರ್ಟ್ ಅಗಿರುವುದಕ್ಕೆ ಸೂಚಿಸಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಸೋಂಕಿತರನ್ನು ಯಾಕೆ ಹೊರಗೆ ಓಡಾಡಲು ಬಿಡುತ್ತಾರೆ ಎಂದು ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದ್ದಾರೆ.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement