ಮೂಗಿಗೆ ನಿಂಬೆ ರಸ ಹಾಕಿದರೆ ಉಸಿರಾಟದ ಸಮಸ್ಯೆ ಶಮನ: ವಿಜಯ ಸಂಕೇಶ್ವರ

posted in: ರಾಜ್ಯ | 0

ಹುಬ್ಬಳ್ಳಿ:ನಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕಿಕೊಳ್ಳುವುದಿಂದ ಅರ್ಧ ಗಂಟೆಯಲ್ಲಿ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಫ ಹೊರ ಬಂದು ಉಸಿರಾಟದ ಸಮಸ್ಯೆ ಸರಿಯಾಗುತ್ತದೆ ಎಂದು ವಿಆರ್‌ಎಲ್‌ ಲಾಜಿಸ್ಟಿಕ್ಸ್‌ ಚೇರ್ಮನ್‌ ವಿಜಯ ಸಂಕೇಶ್ವರ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದನ್ನು ನಾನು, ನನ್ನ ಕುಟುಂಬ ವರ್ಗ ಹಾಗೂ ಸುಮಾರು 200 ಜನರಿಗೆ ಸೂಚಿಸಿದ್ದೆ, ಇದರಿಂದ ಪರಿಣಾಮಕಾರಿ ಫಲಿತಾಂಶ ಬಂದಿದೆ ಎಂದು ಅವರು ತಿಳಿಸಿದರು.
ನಿಂಬೆ ಹಣ್ಣಿನ ರಸ ಹಾಕಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಕಂಡಿದ್ದೇನೆ. ದಿನಕ್ಕೆ ಎರಡು ಬಾರಿ ಲಿಂಬೆ ಹಣ್ಣಿನ ರಸವನ್ನು ಹನಿ ರೂಪದಲ್ಲಿ ಮೂಗಿಗೆ ಹಾಕಿಕೊಳ್ಳಬೇಕು. ಹೀಗೆ ಹಾಕಿಕೊಳ್ಳುವುದರಿಂದ ಸುಮಾರು ಅರ್ಧ ತಾಸಿನಲ್ಲಿ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಫ ಹೊರಬರುತ್ತದೆ. ಇದರಂದ ಉಸಿರಾಟ ಸಾಮಾನ್ಯ ಸ್ಥಿತಿಗೆ ಬರಲಿದೆ.‌ ಇದರಿಂದ ಆಮ್ಲಜನಕದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಈ ಮನೆಮದ್ದಿನಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ತಿಳಿಸಿದರು.
ಈ ಮನೆಮದ್ದನ್ನು ಸುಮಾರು 200 ಜನರಿಗೆ ಹೇಳಿದ್ದೆ. ಇದನ್ನು ಅನುಸರಿಸಿದವರು ಕರೆ ಮಾಡಿ ಫಲಿತಾಂಶ ತಿಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನರು ಇದನ್ನು ಅನುಸರಿಸುವುದರಿಂದ ಆಮ್ಲಜನಕದ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂಬುದು ನನ್ನ ಅಭಿಪ್ರಾಯ. ಆದರೆ ವೈದ್ಯಕೀಯ ಸಲಹೆ, ಚಿಕಿತ್ಸೆ ಅನುಸರಿಸಿಯೇ ಇದನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಖ್ಯಾತ ವೈದ್ಯ ಡಾ. ಬಿ.ಎಂ ಹಗ್ಡೆ ಹೇಳಿರುವಂತೆ ಮುಖಕ್ಕೆ ಮತ್ತು ಮೂಗಿನ‌‌ ಹೊಳ್ಳಿಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡರೆ ವೈರಸ್ ದೇಹದೊಳಗೆ ಪ್ರವೇಶಿಸುವುದನ್ನು ತಡೆಯಬಹುದು. ಬಿಸಿನೀರಿನ ಆವಿಯನ್ನು (ಸ್ಟೀಮ್) ತೆಗೆದುಕೊಳ್ಳುವುದರಿಂದ ಕೊರೊನಾ ವೈರಸ್‌ ತೊಂದರೆಗಳಿಂದ ದೂರ ಇರಬಹುದು. ಇದನ್ನು ನಾನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇನೆ. ಇದರಿಂದಾಗಿ ಹಿಂದಿ‌ಗಿಂತಲೂ ಈಗ ದೇಶದಾದ್ಯಂತ ನಾಲ್ಕು ಪಟ್ಟು ಓಡಾಡಿದರೂ ಏನೂ ಆಗಿಲ್ಲ’ ಎಂದು‌ ಅವರು ತಮ್ಮ ಅನುಭವ ಹಂಚಿಕೊಂಡರು.
ಉಚಿತ ಪಡಿತರದಿಂದ ಆರ್ಥಿಕತೆಗೆ ಧಕ್ಕೆ..:ಕೇಂದ್ರ ಸರ್ಕಾರ ಜನತೆಗೆ ಉಚಿತ ಪಡಿತರ ವ್ಯವಸ್ಥೆ ಮಾಡುವುದು ಸರಿಯಲ್ಲ. ಇದು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ  ದೇಶದ 80 ಕೋಟಿ ಮಂದಿಗೆ ಉಚಿತ ಪಡಿತರ ನೀಡಲು ನಿರ್ಧರಿಸಿದೆ. ಇದರಿಂದ ಕಾರ್ಮಿಕರು‌ ಕೆಲಸಕ್ಕೆ ಬರದೆ ಕೈಗಾರಿಕಾ ಕ್ಷೇತ್ರದ ಮೇಲೆ‌ ಇದು ಗಂಭೀರ‌ ಪರಿಣಾಮ ಉಂಟು ಮಾಡುತ್ತದೆ  ಎಂದು ಅಭಿಪ್ರಾಯಪಟ್ಟರು.
ಮಾಡುವುದಿದ್ದರೆ ಜನರಿಗೆ ಸಾಕಷ್ಟು ಕೆಲಸಗಳಿವೆ. ಆದರೆ, ಉಚಿತ ಪಡಿತರದಿಂದ ಕಾರ್ಯಕ್ಷೇತ್ರಗಳಿಂದ ದುಡಿಯುವವರು ಮನೆಗಳಿಗೆ ತೆರಳುತ್ತಿದ್ದಾರೆ. ನಮ್ಮಂತಹ ದೇಶದಲ್ಲಿ ಇಂತಹ‌ ಸವಲತ್ತು ನೀಡುವುದು ಸರಿಯಲ್ಲ ಎಂದರು.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ‌ ಮುಖಂಡರು‌ ಚುನಾವಣಾ ಪ್ರಚಾರ ನಡೆಸಿರುವುದು ಸಹ ಸರಿಯಲ್ಲ. ಕೋವಿಡ್ ನಿಯಂತ್ರಣಕ್ಕೆ‌ ಸರ್ಕಾರ ಒಂದೆರಡು ದಿನ ವಿಳಂಬವಾದರೂ ಸರಿಯಾದ ನಿರ್ಧಾರ ತೆಗೆದುಕೊಂಡಿದೆ. ಆದರೆ, ಕಮಿಷನ್ ವ್ಯವಹಾರಗಳು ಅಲ್ಲಲ್ಲಿ ನಡೆಯುತ್ತಿರುವುದರಿಂದ‌ ಸ್ವಲ್ಪ ಸಮಸ್ಯೆಗಳು‌ ಎದುರಾಗುತ್ತಿವೆ. ಹೆಚ್ಚಿನ ಜನಸಂಖ್ಯೆಯ ನಮ್ಮ‌ ರಾಷ್ಟ್ರದಲ್ಲಿ ಇಷ್ಟು ಮಾಡಿರುವುದು ದೊಡ್ಡ ಸಾಧನೆ ಎಂದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ