ಇದು ಅಂತಃಕರಣ ತಟ್ಟುವ ಘಟನೆ… ಯುವಕನಿಗಾಗಿ ಆಸ್ಪತ್ರೆಯಲ್ಲಿ ಸಿಕ್ಕ ಬೆಡ್‌ ತ್ಯಾಗಮಾಡಿ ಪ್ರಾಣಕೊಟ್ಟ ಕೊರೊನಾ ಪೀಡಿತ 85 ವರ್ಷದ ಆರ್‌ಎಸ್‌ಎಸ್‌ ಸ್ವಯಂಸೇವಕ ..!

ನಾಗ್ಪುರ: ಕೊರೊನಾ ಸೋಂಕಿನಿಂದ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಅಲೆದಾಟ ನಡೆಸಿದ ಬಳಿಕ ಕೊನೆಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕ ಬಳಿಕ ತನಗಿಂತ ಸುಮಾರು ನಲವತ್ತು ಕಿರಿಯ ವಯಸ್ಸಿನ ವ್ಯಕ್ತಿಯ ಕುಟುಂಬದವರು ಹಾಸಿಗಾಗಿ ಪರಿತಪಿಸುವುದನ್ನು ಕಂಡು ಅವರಿಗೆ ಹಾಸಿಗೆ ಬಿಟ್ಟುಕೊಟ್ಟ ವಯೋವೃದ್ಧ ಆರೆಸ್ಸೆಸ್‌ ಕಾರ್ಯಕರರ್ತರೊಬ್ಬರು ನಂತರ ತಾವು ಪ್ರಾಣಬಿಟ್ಟ ಅಂತಃಕರಣವನ್ನೇ ತಟ್ಟುವ ಅತ್ಯಪರೂಪದ ಮಾನವೀಯತೆಯ ವಿದ್ಯಮಾನ ನಡೆದ ಬಗ್ಗೆ ವರದಿಯಾಗಿದೆ.

ಈ ಬಗ್ಗೆ ಒಪಿಂಡಿಯಾ ವರದಿ ಮಾಡಿದೆ.

ವರದಿ ಪ್ರಕಾರ, ತಮಗಿಂತ 40 ವಯಸ್ಸಿನ ಆಸುಪಾಸಿನಲ್ಲಿರುವ ಆ ವ್ಯಕ್ತಿಗೆ ಇನ್ನೂ ಬದುಕು ಇದೆ, ತಾನು ಜೀವನದ ಸಂಧ್ಯಾಕಾಲದಲ್ಲಿದ್ದೇನೆ ಎಂದು ಪರಿಭಾವಿಸಿ ಈ ರೀತಿ ತಮಗಿಂತ ಕಿರಿಯ ವ್ಯಕ್ತಿಗೆ ಹಾಸಿಗೆ ಬಿಟ್ಟುಕೊಟ್ಟು ಪ್ರಾಣಬಿಟ್ಟವರು ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾರಾಯಣ ದಾಬಡ್ಕರ್‌ (85 ವರ್ಷ ) ಎಂಬವರು.
ಇದು ನಾಗ್ಪುರ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ನಡೆದ ಘಟನೆ. ಇದನ್ನು ಕಣ್ಣಾರೆ ಕಂಡಿರುವ ಡಾ. ಶೆಫಾಲಿ ಎಂಬ ವೈದ್ಯರು ಆ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
85 ವರ್ಷದ ನಾರಾಯಣ ಅವರಿಗೆ ಕೊರೊನಾ ಸೋಂಕಿನಿಂದ ಉಸಿರಾಟದ ಸಮಸ್ಯೆ ಎದುರಾಗಿತ್ತು. ಅವರ ಮಗಳು ಮತ್ತು ಅಳಿಯ ಅವರಿಗಾಗಿ ಬೇರೆಬೇರೆ ಆಸ್ಪತ್ರೆಗಳಲ್ಲಿ ಹಾಸಿಗೆಗಾಗಿ ಪ್ರಯತ್ನಿಸಿದ್ದಾರೆ, ಕೊನೆಗೆ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಅವರಿಗೆ ಹಾಸಿಗೆ ಸಿಕ್ಕಿತ್ತು.
ಅವರನ್ನು ದಾಖಲಿಸಲು ಪ್ರಕ್ರಿಯೆ ನಡೆಯುತ್ತಿತ್ತು. ಆಗ ಕಣ್ಣೀರಿಡುತ್ತಲೇ ಬಂದ ಮಹಿಳೆ ಸುಮಾರು 40 ವರ್ಷ ವಯಸ್ಸಿನ ತಮ್ಮ ಪತಿಗಾಗಿ ಹಾಸಿಗೆಗೆ ಪ್ರಯತ್ನಿಸಿ ಅದು ಸಿಗದೆ ಇದೇ ಆಸ್ಪತ್ರೆಗೆ ಬಂದಿದ್ದರು. ಮಹಿಳೆ ಜೊತೆ ಅವಳ ಮಕ್ಕಳು ಅಳುತ್ತಿದ್ದರು. ಇದನ್ನು ನೋಡಿದ  ನಾರಾಯಣ ದಾಬಡ್ಕರ್‌ ಅವರು, ತಮ್ಮ ದಾಖಲು ಪ್ರಕ್ರಿಯೆ ನಿಲ್ಲಿಸಿದರು. ನನಗೀಗ 85 ವರ್ಷವಾಯಿತು. ನಾನು ಜೀವನದ ಕೊನೆಯ ಕಾಲಘಟ್ಟದಲ್ಲಿದ್ದೇನೆ. ಹೀಗಾಗಿ ನನಗೆ ಮರಣ ಬಂದರೆ ತೊಂದರೆಯಿಲ್ಲ. ಆದರೆ ಆ ವ್ಯಕ್ತಿಗೆ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಎಳೆಯ ವಯಸ್ಸಿನ ಪತ್ನಿ ಇದ್ದಾಳೆ. ಹೀಗಾಗಿ ನನಗೆ ನೀಡಿದ್ದ ಹಾಸಿಗೆಯನ್ನು ಆ ಮಹಿಳೆಯ ಗಂಡನಿಗೆ ಕೊಡಿ, ನನಗಿಂತ ಸುಮಾರು ನಲವತ್ತೈದು ಕಡಿಮೆ ವಯಸ್ಸಿನ ವ್ಯಕ್ತಿಯನ್ನು ಕಾಪಾಡಿ ಎಂದು ಮನವಿ ಮಾಡಿ ಆಸ್ಪತ್ರೆ ಸಿಬ್ಬಂದಿಯನ್ನು ಒಪ್ಪಿಸಿದ್ದಾರೆ.  ಜೊತೆಗೆ ತನ್ನ ಮಗಳಿಗೂ ಮನವರಿಕೆ ಮಾಡಿದ್ದಾರೆ.  ವ್ಯಕ್ತಿಗೆ ಹಾಸಿಗೆ ನೀಡಿದ್ದನ್ನು ಖಚಿತಪಡಿಸಿಕೊಂಡು ಮನೆಗೆ ಹಿಂತಿರುಗಿದ್ದಾರೆ. ಮೂರು ದಿನಗಳ ನಂತರ ಮೃತಪಟ್ಟಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4.4 / 5. ಒಟ್ಟು ವೋಟುಗಳು 20

  1. geek

    ಅವರ ದೊಡ್ಡ ಮನಸ್ಸಿಗೆ, ತ್ಯಾಗಕ್ಕೆ ಎಷ್ಟು ನಮಿಸಿದರೂ ಸಾಲದು. ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬೆಡ್ ಗಳಿಲ್ಲದೇ ಪರದಾಡುವ ಸ್ಥಿತಿ ಬಂದೊದಗಿರುವುದನ್ನೂ ಮನಗಾಣಬೇಕಿದೆ. ಕೊರೋನಾ ವೈರಸ್ ತೀವ್ರ ಮಟ್ಟದಲ್ಲಿ ಹರಡಿದ ಈ ದುಸ್ಥಿತಿಗೆ ಮೋದಿ ಸರಕಾರದ ತೀವ್ರ ನಿರ್ಲಕ್ಷ್ಯವೂ ಕಾರಣವೆಂಬುದನ್ನು ಮನಗಾಣಬೇಕಿದೆ. ಇನ್ನು ಮುಂದಾದರೂ ಮೋದಿ ಸರಕಾರ ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವ ಬಜೆಟನ್ನು ಹೆಚ್ಚು ಮಾಡುವುದೆಂಬುದು ನಿರೀಕ್ಷೆ.

ನಿಮ್ಮ ಕಾಮೆಂಟ್ ಬರೆಯಿರಿ