ಸ್ತ್ರೀಶಕ್ತಿಗೆ ಈ ಗ್ರಾಮದಿಂದ ಕೊರೊನಾವೇ ಗಾಯಬ್‌…!

ಬೆತುಲ್: ಇಲ್ಲೊಂದು ಹಳ್ಳಿಯಿದೆ.ಅದು ಕೊರೊನಾ ವೈರಸ್‌ ಹಿಡಿತದಿಂದ ತನ್ನನ್ನು ತಾನು ಪಾರು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಸ್ತ್ರೀ ಶಕ್ತಿ.
ಇದು ಮಧ್ಯಪ್ರದೇಶದ ಒಂದು ಹಳ್ಳಿ. ರಾಷ್ಟ್ರೀಯ ಹೆದ್ದಾರಿ ಮೇಲಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಕೊರೊನಾ ಇದೆ. ಆದರೆ ಈ ಹಳ್ಳಿ ಮಾತ್ರ ಕೊರಿನಾ ಹಿಡಿತದಿಂದ ಪಾರಾಗಿದೆ. ಕಾರಣ ಸ್ತ್ರೀ ಶಕ್ತಿ. ಈ ಹಳ್ಳಿ ಕೊರೊನಾ ಮುಕ್ತವಾಗಿರುವುದರ ಎಲ್ಲ ಕ್ರೆಡಿಟ್‌ ಮಹಿಳಯರಿಗೇ ಸಲ್ಲಬೇಕು. ಗ್ರಾಮದಲ್ಲಿ ಸಂಪೂರ್ಣ ಲಾಕ್ ಡೌನ್ ಖಚಿತಪಡಿಸಿಕೊಳ್ಳಲು ಮತ್ತು ಹೊರಗಿನವರು ತಮ್ಮ ಹಳ್ಳಿಗೆ ಪ್ರವೇಶಿಸುವುದನ್ನು ತಡೆಯಲು ಮಹಿಳೆಯರೇ ಕೈಯಲ್ಲಿ ದೊಣ್ಣೆ ಹಿಡಿದು ಕಾಯುತ್ತಾರೆ. ಹಾಗೆಂದು ಯಾರಿಗೂ ಬಡಿದಿಲ್ಲ. ಕಾವಲು ಇದ್ದು ಯಾರೂ ಹಳ್ಳಿಗೆ ಅನಗತ್ಯವಾಗಿ ಪ್ರವೇಶಿಸದಂತೆ ನೋಡಿಕೊಳ್ಳುತ್ತಾರೆ.
ಬೆತುಲ್‌ಗೆ ಸಮೀಪವಿರುವ ಚಿಖಲಾರ್ ಎಂಬ ಹಳ್ಳಿ ಕಳ್ಳಬಟ್ಟಿ ಮಾರಾಟಕ್ಕೆ ಕುಖ್ಯಾತಿ ಪಡೆದಿದೆ, ಆದರೆ ಬೆತಾಲಿನ ಮಹಿಳೆಯರು ಕೈಗೊಂಡ ಈ ಉಪಕ್ರಮವು ಗ್ರಾಮವನ್ನು ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ. ಸೀರೆಯುಟ್ಟ ಹೆಂಗಸರು ಕೋಲುಗಳನ್ನು ಹಿಡಿದು ಯಾರೂ ಹಳ್ಳಿಗೆ ಪ್ರವೇಶಿಸದಂತೆ ತಡೆಯುತ್ತಾರೆ. ಹಳ್ಳಿಯೊಳಗೆ ಪ್ರವೇಶಿಸಬೇಕು ಎಂದರೆ ಅವರ ಅಪ್ಪಣೆ ಬೇಕು.
ಹೊರಗಿನವರ ಪ್ರವೇಶ ನಿಷೇಧಿಸುವ ಪೋಸ್ಟರ್‌ನ ಗಳನ್ನು ಗ್ರಾಮದಲ್ಲಿ ಹಾಕಲಾಗಿದ್ದು, ಆ ಪೋಸ್ತರ್‌ ಗಳ ಬಳಿಯೇ ಮಹಿಳೆಯರು ಬಿದಿರಿನ ಬ್ಯಾರಿಕೇಡ್ ಹಾಕುವ ಮೂಲಕ ಗ್ರಾಮದ ಎಲ್ಲ ಗಡಿಗಳನ್ನು ಮುಚ್ಚಿದ್ದಾರೆ. ಅಷ್ಟೇ ಅಲ್ಲ, ಅಲ್ಲಿಯೇ ದೊಣ್ಣೆ ಹಿಡಿದು ಕಾವಲು ಕಾಯುತ್ತಾರೆ. ಗ್ರಾಮದ ಹತ್ತಿರ ಹಾದುಹೋಗುವ ಹೆದ್ದಾರಿಯಲ್ಲಿ ಬರುವ ಎಲ್ಲರ ಮೇಲೂ ಅವರು ನಿಗಾ ಇಡುತ್ತಿದ್ದಾರೆ.
ಹಳ್ಳಿಗೆ ಬರುವ ಎಲ್ಲರನ್ನೂ ನಿರ್ಬಂಧಿಸಲು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತು. ಆದರೆ ಹಳ್ಳಿಗೆ ಅನಗತ್ಯವಾಗಿ ಬರುವ ಹಾಗೂ ಹಳ್ಳಿಗಳಲ್ಲೇ ಅನಗತ್ಯವಾಗಿ ಓಡಾಡುವುದಕ್ಕೆ ನಾವು ಕಡಿವಾಣ ಹಾಕಿದ್ದೇವೆ. ನಾವು ಯಾರ ಮೇಲೆಯೂ ದೊಣ್ಣೆ ಎತ್ತಿಲ್ಲ. ಅದು ನಮ್ಮ ರಕ್ಷಣೆಗೆ , ಆದರೆ ಅವರಿಗೆ ತಿಳಿ ಹೇಳುತ್ತೇವೆ ಎನ್ನುತ್ತಾರೆ ಮಹಿಳೆಯರು. ನಮ್ಮ ಗ್ರಾಮದವರೂ ಅನಗತ್ಯವಾಗಿ ಹೊರಗೆ ಹೋಗುವದಿಲ್ಲ. ಅಗತ್ಯ ಕೆಲಸಕ್ಕಾಗಿ ಹೊರಗೆ ಅಥವಾ ನಗರಕ್ಕೆ ಹೋಗಬೇಕೆಂದಿದ್ದರೆ ಗ್ರಾಮದ ಇಬ್ಬರು ಯುವಕರಿಗೆ ಅದರ ಜವಾಬ್ದಾರಿ ನೀಡಲಾಗಿದೆ. ಅವರೇ ಗ್ರಾಮದ ಎಲ್ಲ ಅಗತ್ಯ ಕೆಲಸಗಳನ್ನೂ ಮಾಡಿಕೊಂಡು ಬರುತ್ತಾರೆ. ಅವರು ಎಲ್ಲ ಸುರಕ್ಷತಾ ಕ್ರಮಗಳನ್ನೂ ಅನುಸರಿಸುತ್ತಾರೆ. ಹೀಗಾಗಿಯೇ ನಮ್ಮ ಗ್ರಾಮದಲ್ಲಿ ಕೊರೊನಾ ಪ್ರಕರಣವಿಲ್ಲ ಎಂದು ಅವರು ಹೇಳುತ್ತಾರೆ.
ಮಹಿಳೆಯರ ಪ್ರಕಾರ, ಅವರು ತಮ್ಮ ಗ್ರಾಮವನ್ನು ಸೋಂಕಿನಿಂದ ರಕ್ಷಿಸಲು ಈ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಅದನ್ನು ಎಲ್ಲರೂ ಪಾಲಿಸುತ್ತಾರೆ, ಹೀಗಾಗಿಯೇ ಗ್ರಾಮ ಕೊರೊನಾದಿಂದ ಸುರಕ್ಷಿತವಾಗಿದೆ ಎನ್ನುತ್ತಾರೆ.
ಮಧ್ಯಪ್ರದೇಶವು ಸೋಮವಾರ 12,686 ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ಐದು ಲಕ್ಷಕ್ಕೂ ಅಧಿಕವಾಗಿದೆ, ಆದರೆ ಕಳೆದ 24 ಗಂಟೆಗಳಲ್ಲಿ 88 ಸಾವು ಮತ್ತು ಚೇತರಿಕೆ ಸಂಖ್ಯೆ 11,612 ರಷ್ಟು ಹೆಚ್ಚಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ