ಪ್ರಧಾನಿ ಮೋದಿ ಚಿಕ್ಕಮ್ಮ ನರ್ಮದಾ ಬೆನ್‌ ಕೊರೊನಾದಿಂದ ಸಾವು

ಅಹಮದಾಬಾದ್: ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಚಿಕ್ಕಮ್ಮ ನರ್ಮದಾಬೆನ್ ಮೋದಿ ಮಂಗಳವಾರ ಇಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬ ತಿಳಿಸಿದೆ.
ನರ್ಮದಾಬೆನ್ (80) ತನ್ನ ಮಕ್ಕಳೊಂದಿಗೆ ನಗರದ ನ್ಯೂ ರಾಣಿಪ್ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಕೊರೊನಾ ವೈರಸ್ ಸೋಂಕಿನ ನಂತರ ಅವರ ಸ್ಥಿತಿ ಹದಗೆಟ್ಟಿತ್ತು. ನಂತರ ಅವರನ್ನು ಹತ್ತು ದಿನಗಳ ಹಿಂದೆ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಪ್ರಧಾನ ಮಂತ್ರಿ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಹೇಳಿದ್ದಾರೆ.
ಅವರು ಮಂಗಳವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು’ ಎಂದು ಅವರು ತಿಳಿಸಿದ್ದಾರೆ. ಪ್ರಧಾನಿ ಚಿಕ್ಕಪ್ಪ (ತಂದೆ ಸಹೋದರ) ಜಗಜೀವನ್‌ ದಾಸ್ ಹಲವು ವರ್ಷಗಳ ಹಿಂದೆ ನಿಧನ ಹೊಂದಿದ್ದರು ಎಂದು ಪ್ರಹ್ಲಾದ್ ಮೋದಿ ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ