ಬೆಂಗಳೂರಲ್ಲಿ ಎರಡು ವಾರದಲ್ಲಿಯೇ ಕೊರೊನಾ ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 150ರಷ್ಟು ಹೆಚ್ಚಳ..!

posted in: ರಾಜ್ಯ | 0

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣ ಹೊಂದಿರುವ ನಗರವಾಗಿ ಹೊರಹೊಮ್ಮಿದೆ, ಸೋಮವಾರದವರೆಗೆ 1,80,542 ರೋಗಿಗಳು ಆಸ್ಪತ್ರೆಗಳಲ್ಲಿ ಮತ್ತು ಮನೆ ಪ್ರತ್ಯೇಕತೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಏಪ್ರಿಲ್ 15 ರಿಂದ ಪ್ರಸ್ತುತ ಚಿಕಿತ್ಸೆಯಲ್ಲಿರುವ ರೋಗಿಗಳ ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ಶೇಕಡಾ 151.35 ರಷ್ಟು ಹೆಚ್ಚಳವಾಗಿದೆ, ಏಪ್ರಿಲ್ 15ರಂದು ಈ ಸಂಖ್ಯೆ 71,827 ಆಗಿತ್ತು.
ಬೆಂಗಳೂರು, ಸದ್ಯ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣಗಳನ್ನು ಹೊಂದಿದ ನಗರವಾಗಿದೆ. ದೆಹಲಿಗಿಂತ (93,080 ಆಕ್ಟಿವ್ ಕ್ಯಾಸೆಲೋಡ್) ಮತ್ತು ಮುಂಬೈ (75,498) ಗಿಂತ ಎರಡು ಪಟ್ಟು ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿದೆ. ದೆಹಲಿ ಹಾಗೂ ಮುಂಬೈ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಸಕ್ರಿಯ ಪ್ರಕರಣಗಳು ದಿಢೀರ್‌ ಹೆಚ್ಚಾಗಿದೆ. ಮತ್ತು ಮಾರ್ಚ್ 2020 ರಿಂದ ಈವರೆಗೆ ನಗರದಲ್ಲಿ ಕೊರೊನಾ ಪರೀಕ್ಷಿಸಿದವರಲ್ಲಿ ಶೇ.27.62 ರಷ್ಟು ಜನರಲ್ಲಿ ಕೊರೊನಾ ಪಾಸಿಟಿವ್‌ ಬಂದಿದೆ.
ಬೆಂಗಳೂರಿನಲ್ಲಿ ದಿಢೀರ್‌ ಹೆಚ್ಚಳ ಆಮ್ಲಜನಕದ ಕೊರತೆ ಮತ್ತು ಹಾಸಿಗೆಗಳ ಅಲಭ್ಯತೆಗೆ ಕಾರಣವಾಗಿದೆ.
ಈಗ ಏನು ಮಾಡಲಾಗುತ್ತಿದೆ ಎನ್ನುವುದಕ್ಕಿಂತ ಇನ್ನೂ ಹೆಚ್ಚಿನ ಪ್ರಯತ್ನಗಳು ನಡೆಯಬೇಕು ಎಂಬುದು ಮುಖ್ಯ. ಎರಡನೆಯ ಅಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ತೀವ್ರತೆ ಮತ್ತು ಪ್ರಯತ್ನಗಳನ್ನು ಐದಾರು ಪಟ್ಟು ಹೆಚ್ಚಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಮೇ ಮಧ್ಯದಲ್ಲಿ ಎರಡನೇ ಅಲೆ ಗರಿಷ್ಠ ಮಟ್ಟ ತಲುಪಬಹುದು ಎಂದು ಅವರು ಅಂದಾಜಿಸಿದ್ದಾರೆ. ಮತ್ತು ಮೂರನೇ ಅಲೆಯ ಮಧ್ಯದಲ್ಲಿ ಅತಿ ಹೆಚ್ಚು ಜನ ಲಸಿಕೆ ತೆಗೆದುಕೊಳ್ಳುವಂತೆ ಮಾಡಬೇಕು ಎಂದು ಅವರು ಹೇಳುತ್ತಾರೆ. ಯಾಕೆಂದರೆ
ಲಸಿಕೆಯು ಸೋಂಕಿನ ತೀವ್ರತೆ ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಅಭಿಪ್ರಾಯಪಡುತ್ತಾರೆ.
ಬೆಂಗಳೂರಿನಲ್ಲಿ ಪ್ರಕರಣಗಳು ತೀವ್ರವಾಗಿ ಏರಲು ಕಾರಣವೆಂದರೆ SARS-CoV-2 ವೈರಸ್‌ನ ರೂಪಾಂತರಿತ ತಳಿಗಳ ಕೊಡುಗೆ ಸಾಕಷ್ಟಿದೆ.
ವೈರಸ್ ರೂಪಾಂತರಿತ ರೂಪಗಳು ಹರಡುತ್ತಿದ್ದರೂ ಸಹ, ಮೊದಲ ತರಂಗ ಕ್ಷೀಣಿಸಿದ ನಂತರ ಜನರುಈ ಬಗ್ಗೆ ನಿರ್ಲಕ್ಷಿತರಾಗಿದ್ದರು. ಸರ್ಕಾರ ಸಹ ಕಟ್ಟುನಿಟ್ಟಿನ ಕ್ರಮ ಮುಂದುವರಿಸಲಿಲ್ಲ.ಇದು ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗುತ್ತದೆ. ವ್ಯವಸ್ಥೆಯ ಜೊತೆಗೆ, ನಾಗರಿಕರೂ ಸಹ ಹೊಣೆಯಾಗುತ್ತಾರೆ ಎಂಬುದು ಬುತೇಕ ವೈದ್ಯರು ಹೇಳುವ ಮಾತು.
ಸೋಂಕಿತರು ಕೋವಿಡ್‌ ಮಾರ್ಗಸೂಚಿಯಂತೆ ಮನೆ ಪ್ರತ್ಯೇಕತೆಯಲ್ಲಿ ಇರುವ ಬದಲು ನಾಲ್ಕೈದು ದಿನಗಳಿಗೆ ಓಡಾಡಲು ಆರಂಭಿಸಿ ಬಿಡುತ್ತಾರೆ. ಇದು ಪ್ರಕರಣದ ಉಲ್ಬಣದಲ್ಲಿ ಸಾಕಷ್ಟು ಕೊಡುಗೆ ನೀಡಿದೆ ಎನ್ನಲಾಗುತ್ತಿದೆ. ಈಗ ಮಂಗಳವಾರ ರಾತ್ರಿಯಿಂದ ಮೇ 12ರ ವರೆಗೆ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಇದು ಯಾವರೀತಿ ಪರಿಣಾಮ ಬೀರುತ್ತದೆ ಎಂಬುದು ಮುಖ್ಯವಾಗುತ್ತದೆ.ಪರಿಣಾಮ ಬೀರಿದರೆ ನಿಯಮ ಸಡಿಲವಾಗುತ್ತದೆ, ಇಲ್ಲದಿದ್ದರೆ ಇದು ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ