ಇದು ಮನಕಲಕುವ ಘಟನೆ.. ಕೊರೊನಾ ಪೀಡಿತ ಗಂಡನ ಉಳಿಸಲು ಪತ್ನಿಯ ಕೊನೆ ಪ್ರಯತ್ನದ ಫೋಟೋ ವೈರಲ್‌

ನವ ದೆಹಲಿ: ಭಾರತದಲ್ಲಿ ಕೊರೊನಾ ಉಲ್ಬಣದಿಂದ ಒಂದೆಡೆ ಸಾವು-ನೋವುಗಳು ಹೆಚ್ಚಾಗುತ್ತಿದ್ದರೆ      ಮತ್ತೊದೆಡೆ  ಒಂದೊಂದೇ ಅಂತಃಕರಣ ತಟ್ಟುವ, ಮನಕಲಕುವ ಘಟನೆಗಳೂ ವರದಿಯಾಗುತ್ತಿವೆ.
ನಾಗ್ಪುರದಲ್ಲಿ ಎಂಬತೈದು ವರ್ಷದ ಆರೆಸ್ಸೆಸ್‌ ಸ್ವಯಂ ಸೇವಕರೊಬ್ಬರು ತನಗೆ ಸಿಕ್ಕ ಆಸ್ಪತ್ರೆಯ ಬೆಡ್‌ ಅನ್ನು ತನ್ನ ಅರ್ಧ ವಯಸ್ಸಿನ ಕೋವಿಡ್‌ ಸೋಂಕಿತನ ಪತ್ನಿ ಮತ್ತು ಮಕ್ಕಳ ಗೋಳಾಟ ನೋಡಲಾರದೆ ಅವರಿಗೆ ಬಿಟ್ಟುಕೊಟ್ಟು ತಾನು ಮನೆಗೆ ಹೋಗಿ ಎರಡು ದಿನಗಳ ನಂತರ ಪ್ರಾಣಬಿಟ್ಟ ಅಂತಃಕರಣ ತಟ್ಟುವ ಘಟನೆ ವರದಿಯಾದ ಬೆನ್ನಿಗೇ ಈಗ ಉತ್ತರ ಪ್ರದೇಶದಲ್ಲಿ ಮತ್ತೊಂದು ಮನಕಲಕುವ ಘಟನೆ ವರದಿಯಾಗಿದೆ.
ಈ ಮನಕಲಕುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಮಹಿಳೆಯೊಬ್ಬಳು ಕೋವಿಡ್‌ ಸೋಂಕಿತ ಪತಿಯನ್ನು ಆಟೋದಲ್ಲಿ ಆಸ್ಪತ್ರೆಗೆ ಸೇರಿಸಲು ಕರೆದೊಯ್ಯುತ್ತಿದ್ದಾಗಿನ ಈ ಘಟನೆ ಎಂಥವರಿಗೂ ಮನಕಲುಕದೇ ಇರದು.
ಆಸ್ಪತ್ರೆಗೆ ಒಯ್ಯುವಾಗ ಆಟೋದಲ್ಲಿಯೇ ಪತಿಗೆ ಉಸಿರಾಟದ ತೊಂದರೆ ಹೆಚ್ಚಾಗಿದೆ. ಆಗ ಪತಿಯನ್ನು ಬದುಕಿಸಲು ತನ್ನ ಕೊನೆ ಪ್ರಯತ್ನ ಮಾಡಿದ್ದಾಳೆ ಪತ್ನಿ. ಪತಿ ಕೋವಿಡ್‌ ರೋಗಿ ಎಂದು ಗೊತ್ತಿದ್ದರೂ ಬಾಯಿಯ ಮೂಲಕ ಅದರ ರೋಗಾಣುಗಳು ಶ್ವಾಸಕೋಶ ಪ್ರವೇಶಿಸುತ್ತದೆ ಎಂದು ಅರಿವಿದ್ದರೂ ಆಕೆ ಗಂಡನ ಬಾಯಿಗೆ ತನ್ನ ಬಾಯಿಟ್ಟು ಆತನಿಗೆ ಉಸಿರು ನೀಡಿ ಆತನನ್ನು ಪುನರುಜ್ಜೀವನಗೊಳಿಸಬೇಕು ಎಂದು ಕಾರ್ಡಿಯೋಪಲ್ಮನರಿ (ಸಿಪಿಆರ್‌) ವಿಧಾನ ಅನುಸರಿಸಿದ್ದಾಳೆ. ಆಕೆಗೆ ಆ ಕ್ಷಣದಲ್ಲಿ ತನ್ನ ಗಂಡನನ್ನು ಉಳಿಸಿಕೊಳ್ಳುವುದಷ್ಟೇ ಮುಖ್ಯವಾಗಿತ್ತು. ಬಾಕಿ ಎಲ್ಲ ಗೌಣವಾಗಿತ್ತು.
ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದ್ದು,  ರವಿ ಸಿಂಘಲ್ ಎಂಬ ವ್ಯಕ್ತಿ ಕೊರೊನಾದಿಂದ ಉಸಿರಾಟದ ತೊಂದರೆಗೆ ಒಳಗಾಗಿದ್ದ.

ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜು (ಎಸ್‌ಎನ್‌ಎಂಸಿ) ಮತ್ತು ಆಸ್ಪತ್ರೆಗೆ ಕರೆತಂದಿದ್ದರು. ರೇಣು ಸಿಂಘಾಲ್ ಅವರು ಸೆಕ್ಟರ್ 7 ರಲ್ಲಿರುವ ತಮ್ಮ ನಿವಾಸದಿಂದ ಆಟೋ ತೆಗೆದುಕೊಂಡು ಸರ್ಕಾರಿ ಆಸ್ಪತ್ರೆ ತಲುಪಿದರು.   ಆದರೆ ಅಷ್ಟರಲ್ಲಾಗಲೇ  ಪತಿಯ ಸ್ಥಿತಿ ಹದಗೆಟ್ಟಾಗ, ಅವನನ್ನು ಉಳಿಸುವ ಹತಾಶ ಪ್ರಯತ್ನಗಳಲ್ಲಿ, ರೇಣು ಅವನಿಗೆ ಬಾಯಿಂದ ಬಾಯಿಗೆ ಪುನರುಜ್ಜೀವನ ನೀಡಲು ಪ್ರಯತ್ನಿಸಿದಳು. ಆ ಹೊತ್ತಿಗಾಗಲೇ ಪತಿಯ ದೇಹದಲ್ಲಿ ಆಕ್ಸಿಜನ್‌ ಪ್ರಮಾಣದಲ್ಲಿ ಇಳಿಕೆಯಾಗಿಬಿಟ್ಟಿತ್ತು.   ಎಷ್ಟೇ ಪ್ರಯತ್ನಿಸಿದರೂ ಯಮನ ಮುಂದೆ ರೇಣು ಸಿಂಘಲ್‌ ಸೋತಳು.   ಪತ್ನಿಯ ಕಾಲ ಮೇಲೇಯೇ ರವಿ ಸಿಂಘಲ್‌  ಜೀವ ಹೋಗಿದೆ. ಈಗ ಮನಕಲಕುವ ಘಟನೆಗಳ ಫೋಟೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ  ವೈರಲ್‌ ಆಗಿದೆ..

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4.1 / 5. ಒಟ್ಟು ವೋಟುಗಳು 9

  1. Rajan Samuel

    ಘಟನೆ ಹೇಳಿದ ರೀತಿ ಚೆನ್ನಾಗಿದೆ, ಆದರೆ ಪತಿ ಪತ್ನಿ ಇಬ್ಬರನ್ನೂ ಅವನು, ಆಕೆಯೆಂದು ಬರೆಯುವದು ತಪ್ಪು. ಅವರು ಆರೋಪಿಗಳಲ್ಲ ಏಕವಚನ ಬಳಸಲು.
    ಮುಂದೆ ಇಂತಹ ತಪ್ಪುಗಳಾಗದಂತೆ ಹಾಗೂ ವ್ಯಾಕರಣದ ಕಡೆ ಗಮನ ನೀಡಿದರೆ ಒಳ್ಳೇದು.

ನಿಮ್ಮ ಕಾಮೆಂಟ್ ಬರೆಯಿರಿ