ಫೋನ್‌ ಮಾಡಿದ ರೈತನಿಗೆ ಸಾಯಿ ಎಂದ ಸಚಿವ ಉಮೇಶ್ ಕತ್ತಿ; ಸಿಎಂ ಬಿಎಸ್​ವೈ ವಿಷಾದ

posted in: ರಾಜ್ಯ | 0

ಬೆಂಗಳೂರು: 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವ ವಿಚಾರವಾಗಿ ರೈತನೊಬ್ಬ ಆಹಾರ ಮತ್ತು ನಾಗರೀಕ ಖಾತೆ ಸಚಿವರಾದ ಉಮೇಶ್ ಕತ್ತಿ ಅವರಿಗೆ ಕರೆ ಮಾಡಿ, ನಾವು ಸಾಯಬೇಕಾ ಬದುಕಬೇಕಾ ಎಂದು ಕೇಳಿದ್ದಕ್ಕೆ ಸಚಿವರು ಸಾಯಿ ಅಂತ ಹೇಳಿರುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಉಮೇಶ ಕತ್ತಿ ಅವರು ಈ ರೀತಿ ಮಾತನಾಡಿರುವುದಕ್ಕೆ ವಿಪಕ್ಷಗಳು ಸಚಿವ ಉಮೇಶ್ ಕತ್ತಿ ವಿರುದ್ಧ ಹರಿಹಾಯ್ದಿವೆ. ಸಚಿವ ಉಮೇಶ ಕತ್ತಿ ಅವರ ಮಾತಿಗೆ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿಚಾರವಾಗಿ ಸ್ವತಃ ಮುಖ್ಯಮಂತ್ರಿಗಳೇ ವಿಷಾದ ವ್ಯಕ್ತಪಡಿಸಿದ್ದಾರೆ.
ಆಹಾರ ಮತ್ತು ನಾಗರೀಕ ಖಾತೆ ಸಚಿವರಾದ ಉಮೇಶ್ ಕತ್ತಿ ರೈತನೊಬ್ಬ 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದು ಸಾಯಬೇಕಾ ಬದುಕಬೇಕಾ ಎಂದು ಕೇಳಿದಾಗ ಸಾಯಿ ಅಂತ ಹೇಳಿರುವುದು ಒಬ್ಬ ಸಚಿವನಾಗಿ ಸರಿಯಲ್ಲ ಆ ಭಾಗದಲ್ಲಿರುವ ಜನರಿಗೆ ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿಯನ್ನು ಕೊಡಲು ವ್ಯವಸ್ಥೆ ಮಾಡಲಾಗುವುದು . ಉಮೇಶ್ ಕತ್ತಿ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ