ಕೋವಿಡ್‌ ಆಸ್ಪತ್ರೆಯಲ್ಲೂ ವ್ಯಾಸಂಗ ನಿಲ್ಲಿಸದ ಸೋಂಕಿತ…!

ಕೊರೊನಾ ವೈರಸ್​ನಿಂದಾಗಿ ಜನರ ಜೀವನವೇ ಸಂಪೂರ್ಣ ಬದಲಾಗಿದೆ. ಆದರೆ ಕೊರೊನಾ ಸೋಂಕು ಇಲ್ಲೊಬ್ಬರ ಓದಿಗೆ ಅಡ್ಡಿಯಾಗಿಲ್ಲ. ಅವರು ಅಸ್ಪತ್ರೆಯ ಬೆಡ್‌ ಮೇಲೆಯೇ ಓದುತ್ತಿದ್ದಾರೆ. ಚಾರ್ಟಡ್​ ಅಕೌಟೆಂಟ್​ ವ್ಯಾಸಂಗ ಮಾಡುತ್ತಿದ್ದ ಯುವಕ ಆಸ್ಪತ್ರೆಯ ಬೆಡ್‌ ಮೇಲೆಯೇ ತನ್ನ ಓದು ಮುಂದುವರಿಸಿದ್ದಾನೆ.
ಒಡಿಶಾದ ಐಸೋಲೇಷನ್​ ಕೇಂದ್ರದಲ್ಲಿ ಇದ್ದುಕೊಂಡೇ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಒಡಿಶಾ ಕೇಡರ್​ ಐಎಎಸ್​ ಅಧಿಕಾರಿ ವಿಜಯ್​ ಕುಲಂಗೆ, ಕಲೆಕ್ಟರ್​​ ಹಾಗೂ ಡಿಎಂ ಗಂಜಮ್​​​ ವಿದ್ಯಾರ್ಥಿಯ ಫೋಟೋವನ್ನ ಶೇರ್​​ ಮಾಡಿದ್ದಾರೆ. ಈ ವಿದ್ಯಾರ್ಥಿ ಬ್ರಹ್ಮಾಪುರದ ಮಹಾರಾಜ ಕೃಷ್ಣ ಚಂದ್ರ ಗಜಪತಿ ಮೆಡಿಕಲ್​ ಕಾಲೇಜು ಹಾಗೂ ಆಸ್ಪತ್ರೆಯ ಐಸೋಲೇಷನ್​ ಕೇಂದ್ರದಲ್ಲಿದ್ದಾರೆ.
ಸಿಎ ವಿದ್ಯಾರ್ಥಿಯ ಓದಿನ ಕಡೆಗಿನ ಆಸಕ್ತಿ ಗಮನಿಸಿದ ಅವರು, ಯಶಸ್ಸು ಅಕಸ್ಮಾತ್​ ಆಗಿ ಯಾರಿಗೂ ಸಿಗುವುದಿಲ್ಲ. ಇದಕ್ಕೆ ಪ್ರಯತ್ನ ಮುಖ್ಯ. ನಾನು ಕೋವಿಡ್​ 19 ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿ ಸಿಎ ಪರೀಕ್ಷೆಗೆ ತಯಾರಾಗುತ್ತಿರುವುದನ್ನು ನೋಡಿದೆ. ನಿಮ್ಮ ಶ್ರದ್ಧೆ ನಿಮ್ಮ ನೋವನ್ನ ಮರೆಸುತ್ತದೆ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಈ ವಿದ್ಯಾರ್ಥಿಯ ಫೋಟೋ ನೋಡಿದ ನೆಟ್ಟಿಗರು ವಿದ್ಯಾರ್ಥಿಯ ಪರಿಶ್ರಮಕ್ಕೆ ಶಹಬ್ಬಾಸ್​ ಎಂದಿದ್ದಾರೆ. ಕೊರೊನಾ ಕಾರಣದಿಂದಾಗಿ ಚಾರ್ಟಡ್​ ಅಕೌಂಟೆಂಟ್ಸ್​ ಆಫ್​ ಇಂಡಿಯಾ ಮೇ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿದೆ.ಆದರೂ ಈ ವಿದ್ಯಾರ್ಥಿಯ ಓದು ಮುಂದುವರಿದಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ