ಕೇರಳ ಮತಗಟ್ಟೆ ಸಮೀಕ್ಷೆ:ಸತತ ಎರಡನೇ ಬಾರಿ ಜಯದತ್ತ ಎಡರಂಗ.. ಹೊಸ ದಾಖಲೆ ನಿರ್ಮಾಣ..!

140 ಸದಸ್ಯರನ್ನು ಕೇರಳದ ವಿಧಾನಸಭೆ ಚುನಾವಣೆಯಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಹೆಚ್ಚಿನ ರಾಜಕೀಯ ಪಕ್ಷಗಳು ಸತತ ಎರಡು ಬಾರಿ ಆಳ್ವಿಕೆ ನಡೆಸಲು ವಿಫಲವಾಗಿವೆ.
ಆದರೆ ಕೇರಳದಲ್ಲಿ ಬಹುತೇಕ ಮತಗಟ್ಟೆ ಸಮೀಕ್ಷೆಗಳು ಈ ಸಲ ಆಡಳಿತಾರೂಢ ಎಡ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ಎಡರಂಗದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಸ್ಪರ್ಧಿಸಿದ್ದ ಕಾಂಗ್ರೆಸ್‌ ಇಲ್ಲಿ ಅಧಿಕಾರಕ್ಕೆ ಬರಲು ವಿಫಲವಾಗುತ್ತದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಬಿಜೆಪಿ ಹೆಚ್ಚೆಂದರೆ ಮೂರು ಸ್ಥಾನಗಳನ್ನು ಗಳಿಸಬಹುದು ಎಂದು ಒಂದೆರಡು ಸಮೀಕ್ಷೆಗಳು ಹೇಳಿವೆ. ಆದರೆ ಬಿಜೆಪಿ ಕಾಂಗ್ರೆಸ್‌ ಮತಗಳನ್ನು ಕಬಳಿಸಿರುವುದು ಎಡ ರಂಗ ಮತ್ತೆ ಅಧಿಕಾರಕ್ಕೆ ಬರಲು ಅನುಕೂಲತೆ ಒದಗಿಸಿದೆ ಎಂದು ಹೇಳಲಾಗುತ್ತಿದ್ದು, ಇದು ಯಾವ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಡ್ಯಾಮೇಜ್‌ ಮಾಡಿದೆ ಎಂಬುದು ಮೇ 2ರ ಫಲಿತಾಂಶದಲ್ಲಿ ಗೊತ್ತಾಗಲಿದೆ.

ಮಾತೃಭೂಮಿ ಸಿವೋಟರ್      ಎಲ್‌ಡಿಎಫ್ 73–83        ಯುಡಿಎಫ್ 56–66               ಬಿಜೆಪಿ 0-1
.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

ಮನೋರಮಾ – ವಿಎಂಆರ್     ಎಲ್‌ಡಿಎಫ್‌ 77–82,       ಯುಡಿಎಫ್‌ಗೆ 54–59            ಬಿಜೆಪಿ 0-3

ಟೈಮ್ಸ್ ನೌ                         ಎಲ್‌ಡಿಎಫ್‌ಗೆ 77,          ಯುಡಿಎಫ್‌ಗೆ 62                  ಬಿಜೆಪಿ-1

ಎಬಿಪಿ ನ್ಯೂಸ್ – ಸಿವೊಟರ್      ಎಲ್‌ಡಿಎಫ್ 77–85       ಯುಡಿಎಫ್ 54–62              ಬಿಜೆಪಿಗೆ 0–2

.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement