ಕೋವಿಡ್‌ ಲಸಿಕೆ ಹಾಕಿಸಿಕೊಂಡರೆ ಈ ರಾಜ್ಯ ನಿಮಗೆ ಕೊಡುತ್ತದೆ 7,500 ರೂ..!

ಕೊರೊನಾ ವಿಶ್ವವನ್ನೇ ಬಾಧಿಸುತ್ತಿದೆ. ಕೋವಿಡ್‌ ವೈರಸ್‌ನ ನಿಯಂತ್ರಣಕ್ಕಾಗಿ ಹಲವೆಡೆ ಲಸಿಕೆಗೆ ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಬೇಕಾದರೆ ಕೆಲವು ದೇಶಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಆದರೆ, ಇಲ್ಲೊಂದು ಅಪರೂಪದ ಪ್ರಕರಣವಿದೆ. ಇಲ್ಲಿ ಪುಕ್ಕಟೆ ಲಸಿಕೆಯಲ್ಲ, ಬದಲಿಗೆ ಲಸಿಕೆ ಹಾಕಿಸಿಕೊಂಡವರಿಗೇ ಲಸಿಕೆ ಹಾಕಿಸಿಕೊಂಡಿದ್ದಕ್ಕೆ  ಹಣ ನೀಡಲಾಗುತ್ತದೆ. ಅದು ಬರೋಬ್ಬರಿ ನೂರು ಡಾಲರ್‌..! ಅಂದರೆ ಸುಮಾರು 7,500 ರೂ.ಗಳು..!! ಇದು ಎಲ್ಲಿ ಎಂದು ಕೇಳಿದರೆ ನಮ್ಮ ದೇಶದಲ್ಲಂತೂ ಅಲ್ಲ, ಅಮೆರಿಕದ ರಾಜ್ಯವೊಂದರಲ್ಲಿ ಲಸಿಕೆ ತೆಗೆದುಕೊಂಡವರಿಗೆ ನೂರು ಡಾಲರ್‌ ನೀಡಲಾಗುತ್ತಿದೆ. ಅಮೆರಿಕದ ಪಶ್ಚಿಮ ವರ್ಜೀನಿಯಾ ಲಸಿಕೆ ಹಾಕಿಸಿಕೊಂಡ 16 ರಿಂದ 35 ವರ್ಷ ವಯಸ್ಸಿನ ನಿವಾಸಿಗಳಿಗೆ 100 ಡಾಲರ್ ಉಳಿತಾಯ ಬಾಂಡ್ ನೀಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ಯುವಕರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಾರೆ. ಹೀಗಾಗಿ ಯುವಕರು ಲಸಿಕೆ ಪಡೆಯಲು ಉತ್ತೇಜಿಸುವ ದೃಷ್ಟಿಯಿಂದ ಅಲ್ಲಿನ ಸರ್ಕಾರ ಘೋಷಣೆ ಮಾಡಿದೆ. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಮಹತ್ವದ್ದಾಗಿದೆ ಎಂಬುದನ್ನು ಮಕ್ಕಳು ಅರಿಯುವುದಿಲ್ಲ. ಹೀಗಾಗಿ ಅವರು ಯುವಕರು ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲು ಅವರನ್ನು ಪ್ರೇರೇಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ ಎಂದು ಎಂದು ಬಿಬಿಸಿ ವರದಿ ಮಾಡಿದೆ.
ಹಾಗೆಂದು ಇಲಲ್ಲಿ ಲಸಿಕೆ ಹಾಕಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎಂದಲ್ಲ.ಪಶ್ಚಿಮ ವರ್ಜೀನಿಯಾವು ಈ ವರ್ಷದ ಆರಂಭದಲ್ಲಿ ಅತಿ ಹೆಚ್ಚು ವ್ಯಾಕ್ಸಿನೇಷನ್ ದರವನ್ನು ದಾಖಲಿಸಿದ ಅಮೆರಿಕದ ಟಾಪ್‌ ರಾಜ್ಯಗಳಲ್ಲಿ ಒಂದು. ಆದರೆ, ಕೆಲ ವಾರಗಳಲ್ಲಿ ಅದರ ಪ್ರಗತಿ ನಿಧಾನವಾಗಿದ್ದರಿಂದ ಅದು ಮೂರನೇ ಅಲೆಗೆ ಹೆಸರಿ ಈ ನಿರ್ಧಾರ ಕೈಗೊಂಡಿದೆ. ಅರ್ಹ 1.5 ಮಿಲಿಯನ್ (ಹದಿನೈದು ಲಕ್ಷ) ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಜನರು ಇನ್ನೂ ಒಂದು ಡೋಸ್ ಮಾತ್ರ ಪಡೆದಿದ್ದಾರೆ. ಶೇ. 40 ರಷ್ಟು ಯುವಕರನ್ನು ಹೊಂದಿರುವ ರಾಜ್ಯದಲ್ಲಿನ ಯುವಕರು ಲಸಿಕೆಗಳನ್ನು ತೆಗೆದುಕೊಳ್ಳಬೇಕೆಂದು ನಾವು ಬಯಸಿದಷ್ಟು ವೇಗವಾಗಿ ಮುಂದೆ ಬರುತ್ತಿಲ್ಲ” ಎಂದು ಪತ್ರಿಕಾಗೋಷ್ಠಿಯಲ್ಲಿ ಜಸ್ಟೀಸ್‌ ಹೇಳಿದ್ದಾರೆಂದು ಬಿಬಿಸಿ ವರದಿ ಮಾಡಿದೆ.
ಯುವಕರ ಪೈಕಿ ಶೇ. 70 ರಷ್ಟು ಮಂದಿ ಲಸಿಕೆ ಹಾಕಿಸಿಕೊಂಡರೆ ಅವರು ವೈರಸ್‌ ಅನ್ನು ಹೋಗಲಾಡಿಸುತ್ತಾರೆ. ಮಾಸ್ಕ್‌ಗಳು ತೊಲಗುತ್ತವೆ, ಆಸ್ಪತ್ರೆಗೆ ದಾಖಲಾಗುವುದು ದೂರವಾಗುತ್ತದೆ ಮತ್ತು ಸಾವು ಕನಿಷ್ಠವಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. 100 ಡಾಲರ್ ಜತೆಗೆ ಬಡ್ಡಿಯನ್ನು ನೀಡಲಾಗುತ್ತದೆ ಎಂದು ಜಸ್ಟೀಸ್‌ ಹೇಳಿದ್ದಾರೆ. ಅಲ್ಲದೆ, ಅಧಿಕಾರಿಗಳು ‘ಹಣವನ್ನು ಉಳಿತಾಯ ಬಾಂಡ್‌ಗಳಿಗೆ ಬಳಸಲಾಗಿದೆಯೆ ಎಂದು ನಾವು ಖಚಿತಪಡಿಸಿಕೊಳ್ಳುವ ಎಲ್ಲ ರೀತಿಯಲ್ಲಿಯೂ ಇದನ್ನು ಪರಿಶೀಲಿಸಿದ್ದಾರೆ” ಎಂದೂ ಅವರು ಹೇಳಿದ್ದಾರೆ.
ಕೇರ್ಸ್ ಆಕ್ಟ್‌ ಅಡಿ ಕಳೆದ ತಿಂಗಳು ಯುಎಸ್‌ನಲ್ಲಿ 1.9 ಟ್ರಿಲಿಯನ್‌ ಡಾಲರ್‌ ಕೋವಿಡ್‌ ಪರಿಹಾರ ಪ್ಯಾಕೇಜ್ ಕಾನೂನು ಬದ್ಧಗೊಳಿಸಲಾಗಿದೆ. ಕಳೆದ ತಿಂಗಳು ಕೈಸರ್ ಫ್ಯಾಮಿಲಿ ಫೌಂಡೇಶನ್ ನಡೆಸಿದ ಸಮೀಕ್ಷೆಯ ಪ್ರಕಾರ, 18 ರಿಂದ 29 ವರ್ಷ ವಯಸ್ಸಿನ ಅಮೆರಿಕದ ನಿವಾಸಿಗಳಲ್ಲಿ 25% ಜನರು ಲಸಿಕೆ ಪಡೆಯುವ ಮೊದಲು ಸ್ವಲ್ಪ ಸಮಯ ಕಾಯಲು ಮತ್ತು ಇತರರ ಅನುಭವ ನೋಡಲು ಬಯಸುತ್ತಾರೆ. ಆದರೆ, 65 ವರ್ಷಕ್ಕಿಂತ ಮೇಲ್ಪಟ್ಟ ನಿವಾಸಿಗಳಲ್ಲಿ ಕೇವಲ 7% ಜನರು ಮಾತ್ರ ಈ ರೀತಿ ಮಾಡಲು ಬಯಸುತ್ತಾರೆ. ವಯಸ್ಸಾದ ಜನಸಂಖ್ಯೆಗಿಂತ ಯುವ ಸಮೂಹ ಲಸಿಕೆಯ ಡೋಸ್‌ ಬಗ್ಗೆ ಹೆಚ್ಚು ಸಂಶಯ ವ್ಯಕ್ತಪಡಿಸುತ್ತಾರೆ ಎಂದೂ ಸಮೀಕ್ಷೆ ಹೇಳಿದೆ ಎಂದು ಬಿಬಿಸಿ ವರದಿ ತಿಳಿಸಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement