ಮತಗಟ್ಟೆ ಸಮೀಕ್ಷೆ; ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೆ, ಬಿಜೆಪಿಗೆ ಕೆಲವೇ ಸೀಟುಗಳ ಅಂತರ..!

ಎಂಟು ಹತಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದು, ಬಹುತೇಕ ಎಲ್ಲ ಸಮೀಕ್ಷೆಗಳು ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿದೆ.
ಗುರುವಾರ (ಏ.೨೯) ಕೊನೆಯ ಹಂತದ ಮತದಾನ ಮುಗಿದ ಬೆನ್ನಿಗೇ ವಿವಿಧ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ. ಆದರೆ ಬಹುತೇಕ ಎಲ್ಲ ಸಮೀಕ್ಷೆಗಳಲ್ಲಿಯೂ ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿರುವುದನ್ನು ಸೂಚಿಸಿದ್ದು, ತೃಣಮೂಲ ಕಾಂಗ್ರೆಸ್‌ ಸರಳ ಬಹುತಮದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಆದರೆ ಇದೇ ಸಮಯದಲ್ಲಿ ಬಿಜೆಪಿ ಬಹುತೇಕ ಒಟ್ಟು ಸ್ಥಾನಗಳ ಅರ್ಧದ ಸಮೀಪ ಬರುವ ಸಾಧ್ಯತೆ ಬಗ್ಗೆ ಹೇಳಿವೆ. ಪಶ್ಚಿಮ ಬಂಗಾಳದ 294 ಸದಸ್ಯರ ವಿಧಾನಸಭೆಯಲ್ಲಿ ಬಹುಮತ 148 ಆಗಿದೆ.
ಮತಗಟ್ಟೆ ಸಮೀಕ್ಷೆಗಳು

ಇಟಿಜಿ ಸಂಶೋಧನೆ     ಟಿಎಂಸಿ 164-176        ಬಿಜೆಪಿ 105-115      ಕಾಂಗ್ರೆಸ್-ಎಡ ಮೈತ್ರಿ 10-15

ಪಿ-ಮಾರ್ಕ್               ಟಿಎಂಸಿ 152-172        ಬಿಜೆಪಿ 112-132       ಕಾಂಗ್ರೆಸ್-ಎಡ ಮೈತ್ರಿ 10-20

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

ಎಬಿಪಿ ಸಿ-ವೋಟರ್‌     ಟಿಎಂಸಿ: 152-164       ಬಿಜೆಪಿ: 109-121      ಕಾಂಗ್ರೆಸ್-ಎಡ ಮೈತ್ರಿ 14-25

ಸಿಎನ್ಎನ್ನ್ಯೂಸ್18    ಟಿಎಂಸಿ -162              ಬಿಜೆಪಿ -115              ಕಾಂಗ್ರೆಸ್-ಎಡ ಮೈತ್ರಿ -15

ರಿಪಬ್ಲಿಕ್ ಟಿವಿ-           ಟಿಎಂಸಿ -128-138        ಬಿಜೆಪಿ 138-148       ಕಾಂಗ್ರೆಸ್-ಎಡ ಮೈತ್ರಿ 11-21

ಸಿಎನ್ಎಕ್ಸ್ 

ಎಬಿಪಿ ಸಿ-ವೋಟರ್ ಎಕ್ಸಿಟ್ ಪೋಲ್ ಬಂಗಾಳದಲ್ಲಿ ಟಿಎಂಸಿ ಗೆಲುವು ಮುನ್ಸೂಚನೆ ನೀಡಿದ್ದು ಮತಗಳು ಪಡೆಯುವ ಪ್ರಮಾಣವನ್ನು ಅಂದಾಜಿಸಿದೆ.
ಟಿಎಂಸಿ: 42.1% ಮತಗಳು;  152-164 ಸ್ಥಾನಗಳು
ಬಿಜೆಪಿ: 39% ಮತಗಳು;       109-121 ಸ್ಥಾನಗಳು
ಕಾಂಗ್ರೆಸ್: 15.4% ಮತಗಳು; 14-25 ಸ್ಥಾನಗಳು

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement