ಅರ್ಧ ಲಕ್ಷ ಸಮೀಪ ಬಂದ ದೈನಂದಿನ ಕೊರೊನಾ ಸೋಂಕು.. ಮಹಾರಾಷ್ಟ್ರವಾಗುವತ್ತ ಕರ್ನಾಟಕ

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಳ ಕೈಮೀರಿ ಹೋಗುತ್ತಿದ್ದು, ಮಹಾರಾಷ್ಟ್ರದ ಸಂಖ್ಯೆ ತಲುಪಲು ರಾಜ್ಯವೂ ದಾಪುಗಾಲು ಹಾಕುತ್ತಿದ್ದಂತೆ ತೋರುತ್ತಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 48,296 ಕೊರೊನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಇವತ್ತೊಂದೇ ದಿನ 217 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿನ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 15,23,142 ತಲುಪಿದೆ, ಇದುವರೆಗೆ ಮೃತಪಟ್ಟವರ ಸಂಖ್ಯೆ 15,523ಕ್ಕೆ ಏರಿದೆ.
ಶುಕ್ರವಾರ 14,884 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ಈವರೆಗೆ 11,24,909 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 3,82,690 ಸಕ್ರಿಯ ಪ್ರಕರಣಗಳಿವೆ.

ರಾಜಧಾನಿ ಬೆಂಗಳೂರಿನಲ್ಲೇ ಇವತ್ತು 26,756 ಜನರಿಗೆ ಸೋಂಕು ತಗುಲಿದೆ. 93 ಜನ ಸೋಂಕಿತರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,59,058 ಕ್ಕೆ ಏರಿಕೆಯಾಗಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದೆ ಹೀಗೇ ಮುಂದುರಿದರೆ ದಿನವೊಂದಕ್ಕೆ ಅರ್ಧ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವ ಆತಂಕ ಎದುರಾಗಿದೆ. ನಿನ್ನೆಯ ಕರೊನಾ ಬುಲೆಟಿನ್‌ ಪ್ರಕಾರ ಗುರುವಾರ 270 ಮಂದಿ ಕರೊನಾಗೆ ಬಲಿಯಾಗಿದ್ದು, ಗುರುವಾಋ 35,024 ಕೊರೊನಾ ದೈನಂದಿನ ಪ್ರಕರಣಗಳು ವರದಿಯಾಗಿದ್ದವು. ಶುಕ್ರವಾರ ಅದಕ್ಕಿಂತಲೂ 13 ಸಾವಿರ ಹೆಚ್ಚು, 48 ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ವರದಿಯಾಗಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ