ನಾನು ಇನ್ನೊಬ್ಬ ಆಯೆಷಾ ಆಗಲು ಬಯಸುವುದಿಲ್ಲ: ವರದಕ್ಷಿಣೆಗೆಂದು ಹಿಂಸೆಗೊಳಗಾಗಿದ್ದೇನೆ ಎನ್ನುವ ಮುಸ್ಲಿಂ ಮಹಿಳೆ ವಿಡಿಯೋ ಈಗ ವೈರಲ್‌

ವರದಕ್ಷಿಣೆ ಕಾರಣದಿಂದಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಹಿನಾ ಖಾನ್ ಎಂಬ ಮುಸ್ಲಿಂ ಮಹಿಳೆ ತನ್ನ ಜೀವ ಉಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರದಕ್ಷಿಣೆ ಕಾರಣದಿಂದಾಗಿ ತನ್ನ ಕುಟುಂಬದವರು ತನ್ನನ್ನು ಹಿಂಸೆಗೆ ಒಳಪಡಿಸುತ್ತಿದ್ದಾರೆ ಎಂದು ಹಿನಾ ಖಾನ್‌ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ತಾನು ಪೊಲೀಸರನ್ನು ಸಂಪರ್ಕಿಸಿದ್ದೇನೆ, ಆದರೆ ಯಾವುದೇ ಸಹಾಯ ಆಗಿಲ್ಲ, ಆದರೆ ನಾನು ಸಾಯಲು ಬಯಸುವುದಿಲ್ಲ” ಎಂದು ಅವರು ವೀಡಿಯೊದಲ್ಲಿ ಹೇಳುತ್ತಾರೆ. ನಾನು ಇನ್ನೊಬ್ಬ ಆಯೆಷಾ ಆಗಲು ಬಯಸುವುದಿಲ್ಲ” ಎಂದು ಹಿನಾ ಖಾನ್‌ ಹೇಳುತ್ತಾರೆ. ಆಕೆ ಉತ್ತರ ಪ್ರದೇಶದ ಬುಲಂದ್‌ಶಹರ್ ಮೂಲದವಳು ಎಂದು ಹೇಳಲಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಸಂಕಟದ ಸಮಯದಲ್ಲಿ ಸಹಾಯ ಮಾಡಬೇಕೆಂದು ಮನವಿ ಮಾಡಿರುವ ಹಿನಾ ಖಾನ್‌, ಕಳೆದ ಆರು ತಿಂಗಳಿಂದ ತಾನು ಅಲ್ಲಿಂದಿಲ್ಲದೆ ಓಡಾಡುತ್ತಿದ್ದೇನೆ. ಆದರೆ ಅಧಿಕಾರಿಗಳಿಗೆ ಲಂಚ ನೀಡಲು ಹಣವಿಲ್ಲದ ಕಾರಣ ಅವರಿಂದ ಯಾವುದೇ ಸಹಾಯ ಬಂದಿಲ್ಲ ಎಂದು ಅವರು ಹೇಳುತ್ತಾರೆ.
ಹಿನಾ ಖಾನ್ ಅವರು ಪತ್ರಕರ್ತರಿಗೆ ತಮ್ಮ ದುಃಸ್ಥಿತಿ ಬಗ್ಗೆ ಎತ್ತಿ ತೋರಿಸುವಂತೆ ಮನವಿ ಮಾಡಿದ್ದಾರೆ, ಇದರಿಂದ ಅವರು ನ್ಯಾಯ ಸಿಗುತ್ತದೆ ಎಂದು ಹೇಳಿದ್ದಾರೆ. ತನ್ನ ಕುಟುಂಬದವರು ತನ್ನ ಜೀವಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಹೀಗಾಗಿ ತಾನು ಕೊಲ್ಲಲ್ಪಡುವ ಸಾಧ್ಯತೆಯದೆ ಎಂದು ಹಿನಾ ಖಾನ್‌ ವಿಡಿಯೋದಲ್ಲಿ ಹೇಳುತ್ತಾರೆ.
ತನ್ನ ಮನವಿಯಲ್ಲಿ ಹಿನಾ ಖಾನ್‌ ಉಲ್ಲೇಖಿಸಿರುವ ಆಯೆಷಾ ಗುಜರಾತ್‌ನ ಆಯೆಷಾ ಖಾನ್, ವರದಕ್ಷಿಣೆಗಾಗಿ ಪತಿ ಮತ್ತು ಕುಟುಂಬದವರಿಂದ ಕಿರುಕುಳಕ್ಕೊಳಗಾದ ನಂತರ ಆಯೆಷಾ ಸಬರಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ನದಿಗೆ ಹಾರುವ ಮೊದಲು ವಿಡಿಯೋ ರೆಕಾರ್ಡ್ ಮಾಡಿದ್ದಳು.
ಆತ್ಮಹತ್ಯೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ದೇಶಾದ್ಯಂತ ಸಂತ್ರಸ್ತೆಯ ಬಗ್ಗೆ ಸಹಾನುಭೂತಿಗೆ ಕಾರಣವಾಗಿತ್ತು ಹಾಗೂ ರಾಷ್ಟ್ರಮಟ್ಟದಲ್ಲಿ ಈ ಘಟನೆ ದೊಡ್ಡ ಸುದ್ದಿಯಾಗಿತ್ತು. ನಂತರ ಜಾಮೀನು ಪಡೆಯುವ ಮೊದಲು ಆಯೆಷಾ ಗಂಡನನ್ನು ಪೊಲೀಸರು ಬಂಧಿಸಲಾಗಿತ್ತು. ಈಗ ಹಿನಾ ಖಾನ್‌ ಹೆಸರಿನ ವಿಡಿಯೋ ಸಾಮಾಜಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement