ಇಸ್ರೇಲ್​ನಲ್ಲಿ ಕಾಲ್ತುಳಿತದಿಂದ 44 ಜನರು ಸಾವು

ನವ ದೆಹಲಿ: ಇಸ್ರೇಲ್​ನಲ್ಲಿ ನಡೆದ ಧಾರ್ಮಿಕ ಉತ್ಸವ ನಡೆದ ವೇಳೆ ಕಾಲ್ತುಳಿತಕ್ಕೊಳಗಾಗಿ 44ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್​ನಲ್ಲಿ ನಡೆಯುತ್ತಿದ್ದ ಬೋನ್​ಫೈರ್ ಉತ್ಸವದ ವೇಳೆ ಕಾಲ್ತುಳಿತದಿಂದ 44ಕ್ಕೂ ಅಧಿಕ ಜನರು ಸಾವನ್ನಪ್ಪಿರುವುದು ದೊಡ್ಡ ದುರಂತ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆಟನ್ಯಹು ಸಂತಾಪ ಸೂಚಿಸಿದ್ದಾರೆ.
ಈ ದುರಂತದಲ್ಲಿ 44ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆದಾಖಲಿಸಲಾಗಿದೆ.
ಇಸ್ರೇಲ್​ನ ಮೌಂಟ್ ಮರೂನ್​ನಲ್ಲಿ ಬೋನ್​ಫೈರ್ ಫೆಸ್ಟಿವಲ್ ಆಚರಿಸಲು ಸಾಮೂಹಿಕ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಈ ದುರಘಟನೆ ನಡೆದಿದೆ.
ಆ್ಯಂಬುಲೆನ್ಸ್​ ಮತ್ತು ಹೆಲಿಕಾಪ್ಟರ್ ಮೂಲಕ ಗಾಯಗೊಂಡವರನ್ನು ನಹಾರಿಯಾದಲ್ಲಿರುವ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

2.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement