ತಾಯಿ ಶವದ ಜತೆಯೇ ಎರಡು ದಿನ ಕಳೆದ ಹಸಿವಿನಿಂದ ಕೂಗುತ್ತಿದ್ದ ಶಿಶು…ಕೊರೊನಾ ಭಯಕ್ಕೆ ಹತ್ತಿರವೂ ಸುಳಿಯದ ನೆಂಟರಿಷ್ಟರು..!..!

ಕೋವಿಡ್​ ಸಾಂಕ್ರಾಮಿಕದ ಭಯ ಜನರಲ್ಲಿ ಎಷ್ಟರ ಮಟ್ಟಿಗೆ ಬಂದಿದೆ ಎಂಬುದಕ್ಕೆ ಇಲ್ಲಿ ನಡೆದ ಘಟನೆಯೇ ಉದಾಹರಣೆ.. ಈ ಘಟನೆ ಮಾನವೀಯತೆಯನ್ನು ಜನ ಸಮುದಾಯ ಹೇಗೆ ಮರೆಯಿತು ಎಂಬುದನ್ನು ತೋರಿಸುತ್ತದೆ.
ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆ ಪುಣೆಯ ಪಿಂಪ್ರಿ ಚಿಂಚ್ವಾಡಾ ಬಳಿ ನಡೆದಿದೆ. ಮಗುವೊಂದು ಮೃತಪಟ್ಟಿದ್ದ ತಾಯಿ ಶವದೊಂದಿಗೆ ಎರಡು ದಿನಗಳ ಕಾಲ ಹಸಿವಿನಿಂದ ಕಂಗೆಟ್ಟಿದ್ದರೂ ಕೊರೊನಾ ಭಯದಿಂದ ಯಾರೂ ಮಗುವನ್ನು ಎತ್ತಿಕೊಳ್ಳಲು ಮುಂದೆ ಬರಲಿಲ್ಲ. ಎರಡು ದಿನಗಳ ಕಾಲ ಮಗು ಅಳುತ್ತಲೇ ಇತ್ತು.
ಮನೆಯಲ್ಲಿ ಮಗುವಿನೊಂದಿಗೆ ವಾಸವಾಗಿದ್ದ ತಾಯಿ ಸರಸ್ವತಿ (29) ಎರಡು ದಿನಗಳ ಹಿಂದೆ ಮೃತಪಟ್ಟಿದ್ದಾಳೆ, ಈಕೆ ಮೃತಪಟ್ಟಿದ್ದು ಮೊದಲು ಯಾರ ಗಮನಕ್ಕೂ ಬರಲಿಲ್ಲ. ನಂತರ ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರ ಗಮನಕ್ಕೆ ಬಂದರೂ ಅವರು ಮಗುವಿನ ಸಹಾಯಕ್ಕೆ ಬರಲಿಲ್ಲ. ಕಾರಣ ಮಹಿಳೆ ಕೊರೊನಾದಿಂದ ಮೃತಪಟ್ಟಿರಬಹುದೆಂಬ ಭಯ. ಈ ವೇಳೆ ಮನೆಯಿಂದ ದುರ್ವಾಸನೆ ಬಂದ ಕಾರಣ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿ ಪೊಲೀಸರು ಒಳಹೋಗಿದ್ದಾರೆ. ಈ ವೇಳೆ ತಾಯಿ ಪಕ್ಕದಲ್ಲಿಯೇ ಸಮಾರು ಹದಿನೆಂಟು ತಿಂಗಳ ಮಗು ಹಸಿವಿನಿಂದ ಅತ್ತು ಅತ್ತು ಕಂಗಲಾಗಿತ್ತು. ಈ ದೃಶ್ಯ ಎಂಥವರನ್ನೂ ಮನಕಲಕುವಂತಿತ್ತು.  ತಾಯಿ ಶವದ ಪಕ್ಕದಲ್ಲಿದ್ದ ಮಗುವನ್ನು ಯಾರು ಕೂಡ ಎತ್ತಿಕೊಳ್ಳಲು ಮುಂದಾಗಿಲ್ಲ. ಕಡೆಗೆ ಮಹಿಳಾ ಪೊಲೀಸರೇ ಮಗುವಿನ ಆರೈಕೆಗೆ ಮುಂದಾಗಿದ್ದಾರೆ. ಈ ವರ್ಷ ತುಂಬದ ಮಗುವು ನೀರು, ಆಹಾರ ಇಲ್ಲದೇ 48 ಗಂಟೆ ಕಳೆದಿದೆ.
ಪೊಲೀಸ್​ ಮಹಿಳಾ ಕಾನ್ಸ್​ಟೇಬಲ್​ಗಳಾದ ಸುಶೀಲಾ ಗಭಲೆ ಮತ್ತು ರೇಖಾ ವಾಜೆ ಸದ್ಯ ಮಗುವಿನ ಆರೈಕೆಯಲ್ಲಿ ತೊಡಗಿದ್ದಾರೆ. ತಾಯಿ ಮಕ್ಕದಲ್ಲಿಯೇ ಅಳುತ್ತ ಮಲಗಿದ್ದ ಮಗು ನಿತ್ರಾಣಗೊಂಡಿರುವುದರ ಜೊತೆಗೆ ಜ್ವರದಿಂದ ಬಳಲುತ್ತಿತ್ತು. ಅದಕ್ಕೆ ಹಾಲು, ಬಿಸ್ಕೆಟ್​ ತಿನ್ನಿಸಿ ವೈದ್ಯರ ಬಳಿ ಕರೆದುಕೊಂಡು ಹೋದೆವು. ಮಗುವಿಗೆ ಚೆನ್ನಾಗಿ ಊಟ ಮಾಡಿಸಿ ಎಲ್ಲವೂ ಸರಿಯಾಗುತ್ತದೆ ಎಂದು ವೈದ್ಯರು ತಿಳಿಸಿದರು. ಕೊರೋನಾ ಪರೀಕ್ಷೆಗೂ ಮಗುವನ್ನು ಒಳಪಡಿಸಲಾಗಿದ್ದು, ನೆಗೆಟಿವ್​ ವರದಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರಸ್ವತಿ ಗಂಡ ರಾಜೇಶ್​ ಉತ್ತರ ಪ್ರದೇಶಕ್ಕೆ ಕೆಲಸದ ನಿಮಿತ್ತ ಹೋಗಿರುವುದಾಗಿ ತಿಳಿದುಬಂದಿದೆ. ಆತನನ್ನು ವಾಪಾಸು ಕರೆಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸರಸ್ವತಿ ಶವದ ಮರಣೋತ್ತರ ಪರೀಕ್ಷೆ ಬಂದ ನಂತರ ಆಕೆಯ ಸಾವಿಗೆ ನಿಜ ಕಾರಣ ತಿಳಿದುಬರಲಿದೆ ಮಗುವಿನ ತಾಯಿ ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿಲ್ಲ. ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ಬಳಿಕ ಕೋವಿಡ್​ ನಿಂದ ಮೃತಪಟ್ಟಿದ್ದಾರೆಯೇ ಅಥವಾ ಬೇರೆ ಕಾರಣದಿಂದಲೋ ಎಂಬುದು ತಿಳಿಯಲಿದೆ. ಈ ಮಹಿಳೆಯ ಪತಿ ಉದ್ಯೋಗ ನಿಮಿತ್ತ ಉತ್ತರ ಪ್ರದೇಶಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕರೆತರುವ ಪ್ರಯತ್ನ ನಡೆದಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement