ಸರ್ಕಾರದಿಂದ ತಮಿಳುನಾಡು ದೇವಸ್ಥಾನಗಳ ಮುಕ್ತಿ: ಹೈಕೋರ್ಟ್ ಮೆಟ್ಟಿಲೇರಿದ ಸದ್ಗುರು

ಚೆನ್ನೈ: ಇಶಾ ಫೌಂಡೇಷನ್​​ನ ಸಂಸ್ಥಾಪಕ ಸದ್ಗುರು ತಮಿಳುನಾಡು ಸರ್ಕಾರದ ವಿರುದ್ಧ ಮದ್ರಾಸ್​ ಹೈಕೋರ್ಟ್​​ನಲ್ಲಿ ಪಿಐಎಲ್​ ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ದೇವಾಲಯಗಳನ್ನು ಸರ್ಕಾರದಿಂದ ಮುಕ್ತಿಗೊಳಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಕೆಲ ತಿಂಗಳುಗಳಿಂದ ‘ಫ್ರೀ ತಮಿಳುನಾಡು ಟೆಂಪಲ್ಸ್​’ಎಂಬ ಸದ್ಗುರು ಅಭಿಯಾನ ಆರಂಭಿಸಿದ್ದರು. ತಮಿಳುನಾಡಿನಲ್ಲಿರುವ 44 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳನ್ನು ಸರ್ಕಾರದ ಸುಪರ್ದಿಗೆಯಿಂದ ಮುಕ್ತಿಗೊಳಿಸಿ ಎಂದು ಆಗ್ರಹಿಸಿದ್ದರು. ಸದ್ಗುರು ಈ ಅಭಿಯಾನಕ್ಕೆ ಅವರಿಗೆ 3 ಕೋಟಿಗೂ ಹೆಚ್ಚು ಮಂದಿ ಬೆಂಬಲ ವ್ಯಕ್ತಪಡಿಸಿದ್ದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ತಮಿಳುನಾಡು ಸರ್ಕಾರ ಯಾವುದೇ ನಿಲುವು ಪ್ರಕಟಿಸಿರಲಿಲ್ಲ. ಈಗ ಸರ್ಕಾರ ವಿರುದ್ಧ ಸದ್ಗುರು ಹೈಕೋರ್ಟ್​​ ಮೆಟ್ಟಿಲೇರಿದ್ದಾರೆ.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement