ಕೊರೊನಾ ಯುದ್ಧದಲ್ಲಿ ಗೆದ್ದ 23 ದಿನಗಳ ಕಂದಮ್ಮ..!

ನವ ದೆಹಲಿ: ಕೊರೊನಾ ಎರಡನೇ ಉಲ್ಬಣವು ದೇಶದಲ್ಲಿ ಯುವಕರು ಹಾಗೂ ಮಕ್ಕಳನ್ನೂ ಬಿಡುತ್ತಿಲ್ಲ. ನವಜಾತ ಶಿಶುಗಳಿಗೂ ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ತಗಲುತ್ತಿದೆ. ಪ್ರಪಂಚದಲ್ಲಿ ಹದಿನಾರು ವರ್ಷಗಳಿಗಿಂತ ಚಿಕ್ಕವರಾದವರಿಗೆ ಈವರೆಗೆ ಕೊರೊನಾ ಲಸಿಕೆ ಇಲ್ಲ. ಹೀಗಾಗಿ ಚಿಕ್ಕಮಕ್ಕಳ ಬಗ್ಗೆ ಹೆಚ್ಚು ಕಾಳಿ ವಹಿಸಬೇಕು ಎಂದು ಸರ್ಕಾರ ಹೇಳುತ್ತ ಬಂದಿದೆ.
ಆದರೆ ಇಲ್ಲೊಂದು ನವಜಾತ ಶಿಶು ಕೊರೊನಾಕ್ಕೆ ಸಡ್ಡು ಹೊಡೆದು ಕೊರನಾ ದವಡೆಯಿಂದ ಪಾರಾಗಿ ಬಂದಿದೆ. ಕೊರೊನಾ ವಿರುದ್ಧ ಗೆದ್ದಿದ್ದು ಕೇವಲ 23 ದಿನಗಳ ಮುದ್ದು ಕಂದಮ್ಮ. ಪ್ರಪಂಚಕ್ಕೆ ಬಂದು ಪಿಳಿಪಿಳಿ ಕಣ್ಬಿಟ್ಟು ನೋಡುತ್ತಿರುವ ಈ ನವಜಾತ ಶಿಶುವಿಗೂ ಕೊರೊನಾ ಕಾಡಿದೆ. ಇಂತಹ ಕೊರೊನಾ ಸೋಂಕನ್ನೇ ಗೆದ್ದು ಬಂದಿದೆ 23 ದಿನಗಳ ಮುದ್ದು ಕಂದಮ್ಮ.ಅದೂ ಉತ್ತರ ಪ್ರದೇಶದಲ್ಲಿ..!
ಜನಿಸಿದ ಕೇವಲ 8 ದಿನಕ್ಕೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಉತ್ತರ ಪ್ರದೇಶದ ಘಾಜಿಯಾಬಾದ್ ನ ನವಜಾತ ಶಿಶು ಬರೋಬ್ಬರಿ 15 ದಿನಗಳ ಸತತ ಚಿಕಿತ್ಸೆ ಬಳಿಕ ಕೊರೊನಾ ಸೋಂಕಿನ ವಿರುದ್ಧ ವಿಜಯ ಸಾಧಿಸಿದೆ.
ಮಗು ಜನಿಸುವ ಮೊದಲು ತಾಯಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಆದರೆ ಆಗ ತಾಯಿಗೆ ಸೋಂಕು ಕಂಡುಬಂದಿರಲಿಲ್ಲ. ಹೆರಿಗೆ ಬಳಿಕ ತಾಯಿ 8 ದಿನಗಳ ತನ್ನ ಪುಟ್ಟ ಮಗುವಿನೊಂದಿಗೆ ಆಸ್ಪತ್ರೆಯಿಂದ ಮನೆಗೆ ಮರಳಿದ್ದಳು. ಅಷ್ಟೊತ್ತಿಗಾಗಲೇ ತಾಯಿಗೆ ಸೋಂಕು ತಗುಲಿತ್ತು. ತಾಯಿ ಜೊತೆಗೆ ಈ ಪುಟ್ಟ ಕಂದಮ್ಮ ಕೂಡ ಕೊರೊನಾ ಸೋಂಕಿಗೆ ಒಳಗಾಗಿತ್ತು.
ನವಜಾತ ಶಿಶುವನ್ನು 15 ದಿನಗಳ ಕಾಲ ವೈದ್ಯರು ನಿಗಾದಲ್ಲಿರಿಸಿ ಚಿಕಿತ್ಸೆ ನೀಡಿದ್ದಾರೆ. ಹದಿನೈದು ದಿನಗಳ ನಂತರ ಮಗುವಿನ ಕೊರೊನಾ ವರದಿಯಲ್ಲಿ ನೆಗೆಟಿವ್ ಬಂದಿದೆ. ಕೇವಲ 23 ದಿನಗಳ ಕಂದಮ್ಮ ಕೋವಿಡ್ ವೈರಸ್ ಗೆದ್ದು ಬಂದಿದ್ದಕ್ಕೆ ಕೇಔಲ ಕುಟುಂಬಸ್ಥರಷ್ಟೇ ಅಲ್ಲ, ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ