ಫೋಟೋ ಫಿನಿಶ್‌ನಲ್ಲಿ ಬೆಳಗಾವಿಯಲ್ಲಿ ಗೆದ್ದ ಬಿಜೆಪಿಯ ಮಂಗಲಾ ಅಂಗಡಿ

posted in: ರಾಜ್ಯ | 0

ಬೆಳಗಾವಿ: ಅತ್ಯಂತ ತುರುಸಿನ ಸ್ಪರ್ಧೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ದಿ. ಸುರೇಶ್​ ಅಂಗಡಿ ಪತ್ನಿ ಮಂಗಲಾ ಅಂಗಡಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್​ ಅಭ್ಯರ್ಥಿ ಸತೀಶ್​ ಜಾರಕಿಹೊಳಿ ಸೋಲುಂಡಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಏ.17ರಂದು ಮತದಾನವಾಗಿತ್ತು. ಮತ ಎಣಿಕೆಯ ಆರಂಭದಲ್ಲಿ ಸತೀಶ್​ ಜಾರಕಿಹೊಳಿ ಆರಂಭಿಕ ಮುನ್ನಡೆ ಸಾಧಿಸಿದ್ದರಾದರೂ ತದನಂತರ  ಮಂಗಲಾ ಅಂಗಡಿ ಮುನ್ನಡೆ ಕಾಯ್ದುಕೊಂಡಿದ್ದರು. ಮತ್ತೆ ಸತೀಶ್‌ ಜಾರಕಿಹೊಳಿ ಲೀಡ್‌ ಪಡೆದುಕೊಂಡರು. ನಂತರ ಅತ್ಯಂತ ತೀವ್ರ ಪೈಪೋಟಿ ಮುಂದುವರಿಯಿತು. ನಂತರ ಕೊನೆಯ ನಾಲ್ಕೈದು ಸುತ್ತು ಬಾಕಿ ಇರುವಾಗ ಮಂಗಲಾ ಅಂಗಡಿ ಲೀಡ್‌ ತೆಗೆದುಕೊಂಡವರು ಅಂತಿಮವಾಗಿ ವಿಜಯಿಯಾದರು.
ಇಬ್ಬರ ನಡುವೆ ಮತಗಳ ಅಂತರ ಕಡಿಮೆ ಇದ್ದುದರಿಂದ ಕೊನೆಯ ಸುತ್ತಿನ ಮತ ಎಣಿಕೆ ವರೆಗೂ ಭಾರಿ ಕುತೂಹಲಕಕೆ ಕಾರಣವಾಗಿತ್ತು. ಅಲ್ಪಮತಗಳ ಅಂತರದಿಂದ ಜಯಗಳಿಸಿದರು. ಬಿಜೆಪಿಯ ಮಂಗಲಾ ಅಂಗಡಿ 4,35,202 ಮತಗಳನ್ನು ಪಡೆದರೆ ಕಾಂಗ್ರೆಸ್‌ನ ಸತೀಶ್​ ಜಾರಕಿಹೊಳಿ 4,32,299 ಮತಗಳನ್ನು ಪಡೆದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 5

ನಿಮ್ಮ ಕಾಮೆಂಟ್ ಬರೆಯಿರಿ