ತಾಯಿ ಬದುಕಿಸಲು ಬಾಯಿಗೆ ಬಾಯಿ ಕೊಟ್ಟು ಉಸಿರು ನೀಡಿದ ಪುತ್ರಿಯರು..ಮನಕಲಕುವ ವಿಡಿಯೋ ವೈರಲ್​

ಉತ್ತರ ಪ್ರದೇಶದ ಬಹ್ರೇಚ್​ ಜಿಲ್ಲೆಯಲ್ಲಿ ಪುತ್ರಿಯರಿಬ್ಬರು ತಮ್ಮ ತಾಯಿ ಬಚಾವ್‌ ಮಾಡಲು ಪ್ರಯತ್ನಿಸಿದ ಘಟನೆ ಸಾಮಾಜಿ ಜಾಲತಾಣದಲ್ಲಿ ಬಾರೀ ವೈರಲ್‌ ಆಗಿದೆ.
ಬಹ್ರೇಚ್‌ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸ್ಟ್ರೆಚರ್​ ಮೇಲೆ ಮಲಗಿದ್ದ ತಾಯಿಯನ್ನ ಉಳಿಸಿಕೊಳ್ಳಬೇಕು ಎಂದು ಇಬ್ಬರು ಪುತ್ರಿಯರು ತಾಯಿಯ ಬಾಯಿಗೆ ಬಾಯಿ ಕೊಟ್ಟು ಉಸಿರು ನೀಡಲು ಯತ್ನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್​ ಆಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆಯೇ ನೆಟ್ಟಿಗರು ಆಸ್ಪತ್ರೆಯಲ್ಲಿ ಆಕ್ಸಿಜನ್​ ಅಭಾವ ಹಾಗೂ ಸಿಬ್ಬಂದಿ ಕೊರತೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ತುರ್ತು ಸೇವಾ ಅಧಿಕಾರಿ ಅಹ್ತಿಸಮ್​​ ಅಲಿ, ಮೃತ ಮಹಿಳೆಯು ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಂದಿದ್ದರು. ವೈದ್ಯರು ಆಕೆಗೆ ಚಿಕಿತ್ಸೆ ನೀಡುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಜಿಲ್ಲಾ ಮ್ಯಾಜಿಸ್ಟ್ರೇಟ್​ ಶಂಭು ಕುಮಾರ್​ ಹಾಗೂ ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ಸ್ಟ್ರೆಚರ್ ಮೇಲೆ ಮಲಗಿದ್ದ ಮಹಿಳೆಯ ಬಳಿ ಧಾವಿಸಿದ್ದರು.
ಮಹಾರಾಜ್​ ಸುಹೇಲ್​ದೇವ್​ ಮೆಡಿಕಲ್​​ ಕಾಲೇಜಿನ ಪ್ರಾಂಶುಪಾಲ ಎ.ಕೆ. ಸಾಹ್ನಿ ಈ ಸಂಬಂಧ ಮಾತನಾಡಿದ್ದು, ಭಾನುವಾರ ಮಹಿಳೆಯನ್ನ ತುರ್ತು ಸೇವೆ ವಿಭಾಗಕ್ಕೆ ಕರೆತರಲಾಗಿತ್ತು. ಆಕೆಯನ್ನ ವೈದ್ಯರು ನೋಡುವ ಮೊದಲೇ ಮೃತಪಟ್ಟಿದ್ದರು. ಮೃತ ಮಹಿಳೆಯ ಶವಕ್ಕೆ ಆಕೆಯ ಮಕ್ಕಳು ಉಸಿರು ನೀಡುವ ಯತ್ನ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement