ಕರ್ನಾಟಕದಲ್ಲಿ ಅರ್ಧಶತಕ ಬಾರಿಸಿದ ಕೊರೊನಾ ಏಕದಿನದ ಸೋಂಕು..!

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ 50,112 ಪ್ರಕರಣಗಳೊಂದಿಗೆ ಕರ್ನಾಟಕವು ಒಂದೇ ದಿನದಲ್ಲಿ 50,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿ ದಾಖಲೆ ಮಾಡಿದೆ.
ಇದು ಒಟ್ಟು ಪ್ರಕರಣಗಳನ್ನು ಅನ್ನು 17,41,046 ಕ್ಕೆ ಒಯ್ದಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬುಧವಾರ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 346 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆಯೂ ಮುನ್ನೂರು ದಾಟಿದೆ, ಒಟ್ಟು ಸಾವುನೋವುಗಳನ್ನು 16,884 ಕ್ಕೆ ಏರಿಕೆಯಾಗಿದೆ.ಕರ್ನಾಟಕದಲ್ಲಿ 4,87,288 ಸಕ್ರಿಯ ಪ್ರಕರಣಗಳಿವೆ. ರಾಜ್ಯವು ಬುಧವಾರ 26,841ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 23,106 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ 161 ಕೊರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ.
ಏತನ್ಮಧ್ಯೆ, ಕೋವಿಡ್ -19 ಸಾಂಕ್ರಾಮಿಕ ರೋಗದ ಮೂರನೇ ಅಲೆಯು “ಅನಿವಾರ್ಯ,”ಆದರೂ ಅದರ ಸಮಯದ ಚೌಕಟ್ಟನ್ನು ಊಹಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ,

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement