ಚಾಮರಾಜನಗರ ಆಸ್ಪತ್ರೆ ದುರಂತದ ತನಿಖೆ ಆಯೋಗ ನೇಮಕ: ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ

posted in: ರಾಜ್ಯ | 0

ಬೆಂಗಳೂರು : ಚಾಮರಾಜ ನಗರ ಆಸ್ಪತ್ರೆ ದುರಂತ ಪ್ರಕರಣವನ್ನು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ‌ಆದೇಶ ನೀಡಿದೆ.
ಹೈಕೋರ್ಟ್ ‌ನಿವೃತ್ತ ನ್ಯಾಮೂರ್ತಿ ಬಿ.ಎ.ಪಾಟೀಲ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ ಸರಕಾರ ಆದೇಶ ಹೊರಡಿಸಿದೆ.
ಚಾಮರಾಜನಗರದ ಘಟನೆಯ ತನಿಖೆಗೆ ‌ ಒಂದು ತಿಂಗಳು ಗಡವು ನೀಡಲಾಗಿದ್ದು ಮೈಸೂರಿನಲ್ಲೇ ಕಚೇರಿ ತೆರೆದು ತನಿಖೆ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ವಿಶೇಷವೆಂದರೆ ನ್ಯಾಯಾಂಗ ತನಿಖೆಗೆ ಆದೇಶಿಸುವುದಾಗಿ  ಸೂಕ್ತ ಎಂದ ಕೋರ್ಟ್   ಮಂಗಳವಾರ ಹೇಳಿತ್ತು.

ಹೈಕೋರ್ಟ್ ಅಸಮಾಧಾನ: ಚಾಮರಾಜನಗರ ಆಸ್ಪತ್ರೆಯ ದುರಂತ ತನಿಖೆಗೆ ಸರ್ಕಾರ  ತನ್ನಷ್ಟಕ್ಕೇ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ಆಯೋಗವನ್ನು  ನೇಮಿಸಿರುವ ಕ್ರಮಕ್ಕೆ ಹೈಕೋರ್ಟ್   ಅಸಮಾಧಾನ ವ್ಯಕ್ತಪಡಿಸಿದೆ.

ಬುಧವಾರ  ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತ ಪ್ರಕರಣವನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ಸರ್ಕಾರ ನ್ಯಾಯಾಧೀಶರನ್ನು ನೇಮಕ ಮಾಡುವ ಕೆಲಸವನ್ನು ಹೈಕೋರ್ಟ್ ಗೆ ಬಿಡಬೇಕಾಗಿತ್ತು ಎಂದು ಹೇಳಿದೆ, ಅಲ್ಲದೆ,  ನ್ಯಾಯಮೂರ್ತಿ ಬಿ ಎ ಪಾಟೀಲ ಅವರನ್ನು ನೇಮಕ ಮಾಡಿದ್ದಕ್ಕೆ ನಮ್ಮ ವಿರೋಧವಲ್ಲ, ಸರ್ಕಾರದ ನಡೆ ನಮಗೆ ಸಮಾಧಾನ ತರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ

ಸರ್ಕಾರದ ಪರ ವಕೀಲ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವಡಗಿ, ಸರ್ಕಾರದ ಆದೇಶದಲ್ಲಿ ಕೆಲವು ತಿದ್ದುಪಡಿಗಳಿದ್ದು, ಮಧ್ಯಾಹ್ನ ಮೇಲೆ ಮತ್ತೆ ಸರ್ಕಾರದ ಸೂಚನೆಯೊಂದಿಗೆ ಬರುವುದಾಗಿ ಹೈಕೋರ್ಟಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಹೈಕೋರ್ಟ್, ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ಹಗರಣ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿಕ್ರಿಯೆ ಕೇಳಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ