ಜೈನ್‌ ಸಮಾಜದ ಗಣ್ಯ ಛಗನಲಾಲ್‌ ಜೈನ್‌ ನಿಧನ

posted in: ರಾಜ್ಯ | 0

ಹುಬ್ಬಳ್ಳಿ: ನಗರದ ಜೈನ್‌ ಸಮಾಜದ ಪ್ರಮುಖರಾದ ಕೇಶ್ವಾಪುರ ನಿವಾಸಿ ಛಗನ್‌ಲಾಲ್‌ ಎ. ಜೈನ್‌ ಬುಧವಾರ ಸಂಜೆ ನಿಧನರಾದರು.
ಅವರಿಗೆ ೮೩ ವರ್ಷ ವಯಸ್ಸಾಗಿತ್ತು.ಅಧ್ಯಾತ್ಮ ಸಾಧಕರಾಗಿದ್ದ ಅವರು ಎರಡು ಬಾರಿ ಸತತ ನಲವತ್ತು ದಿವಸಗಳ ಉಪವಾಸ ವ್ರತ (ಮಾಸಕ್‌ಮನ್‌) ಮಾಡಿದ್ದರು. ಅಷ್ಟೇ ಅಲ್ಲದೆ ನಲವತ್ತು ಸಲ ಹನ್ನೊಂದು ದಿವಸಗಳ ಉಪವಾಸ ವ್ರತ ಕೈಗೊಂಡಿದ್ದರು. ನಗರದ ಶಾಂತಿನಿಕೇತನ ಶಾಲೆಯ ಟ್ರಸ್ಟಿಯೂ ಆಗಿ ಕಾರ್ಯನಿರ್ವಹಿಸಿದ್ದರು.
ಅವರು ಪತ್ನಿ, ಶಾಂತಿನಿಕೇತನ ಶಾಲೆಯ ಅಧ್ಯಕ್ಷ ಭವರಲಾಲ್‌ ಸಿ.ಜೈನ್‌ ಹಾಗೂ ವಿಜಯವಾಣಿ ಪತ್ರಿಕೆಯ ಹುಬ್ಬಳ್ಳಿ ನಗರದ ವಿತರಕ ಸುರೇಶ ಸಿ.ಜೈನ್‌ ಸೇರಿದಂತೆ ಆರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ: ಛಗನಲಾಲ್‌ ಜೈನ್‌ ನಿಧನಕ್ಕೆ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ವಿಆರ್‌ಎಲ್‌ ಲಾಜಿಸ್ಟಿಕ್ಟ್‌ನ ಚೇರ್ಮನ್‌ ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಜೈನ್‌ ಮರುಧರ ಸಂಘದ ಅಧ್ಯಕ್ಷ ಪುಖರಾಜ್‌ ಸಂಘ್ವಿ ಹಾಗೂ ಟ್ರಸ್ಟಿಗಳು ಹಾಗೂ ಉದ್ಯಮಿ ವೀರೇಂದ್ರ ಛಡ್ಡಾ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

3.3 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ