ಭಾರತದಲ್ಲಿ ಸತತ ನಾಲ್ಕು ದಿನಗಳ ನಂತರ ನಾಲ್ಕು ಲಕ್ಷಕ್ಕಿಂತ ಕಡಿಮೆಯಾದ ದೈನಂದಿನ ಕೊರೊನಾ ಸೋಂಕು

ನವ ದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3,66,161 ಕೊರೊನಾ ಪ್ರಕರಣಗಳು ದಾಖಲಾಗಿವೆ. ಸತತ ನಾಲ್ಕು ದಿನಗಳ ನಂತರ ಇದೇ ಮೊದಲ ಬಾರಿಗೆ ಭಾರತದ ಕೋವಿಡ್-19 ದೈನಂದಿನ ಸೋಂಕಿನ ಸಂಖ್ಯೆ 4,00,000ಕ್ಕಿಂತ ಕಡಿಮೆ ದಾಖಲಾಗಿದೆ.
ಇದೇ ಸಮಯದಲ್ಲಿ 3,754 ಹೆಚ್ಚು ಜನರು ಕೊರೋನಾ ಸೋಂಕಿಗೆ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ.ಳೆದ ಎರಡು ದಿನಗಳಲ್ಲಿ ದೇಶದ ದೈನಂದಿನ ಸಾವಿನ ಸಂಖ್ಯೆ 4,000 ಕ್ಕಿಂತ ಹೆಚ್ಚಾಗಿತ್ತು.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,26,62,575 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್ ಎಫ್ ಡಬ್ಲ್ಯೂ) ಸೋಮವಾರ ತಿಳಿಸಿದೆ. ಒಟ್ಟು ಸಾವಿನ ಸಂಖ್ಯೆ 2,46,116 ಕ್ಕೆ ಏರಿದೆ.
ಇದೇ ಸಮಯದಲ್ಲಿ 3,53,818 ಹೆಚ್ಚು ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿವರೆಗೆ 1,86,71,222 ಜನ ಅಗುಣಮುಖರಾಗಿದ್ದಾರೆ. . ಸಕ್ರಿಯ ಪ್ರಕರಣಗಳು 37, 45,237ದಷ್ಟು ಇದೆ.
ಸೋಂಕಿಗಾಗಿ ಪರೀಕ್ಷಿಸಲಾದ ಮಾದರಿಗಳ ಸಂಖ್ಯೆ 30,37,50,077 ಕ್ಕೆ ತಲುಪಿದೆ, ಅವುಗಳಲ್ಲಿ ಕಳೆದ 24 ಗಂಟೆಗಳಲ್ಲಿ 14,74,606 ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ತಿಳಿಸಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement