ಡಬ್ಲುಎಚ್‌ಒ SARS-CoV-2 ನ ಭಾರತೀಯ ರೂಪಾಂತರವನ್ನು ಜಾಗತಿಕ ಕಳವಳ ಎಂದು ಕರೆದಿದ್ದು ಯಾಕೆಂದರೆ..

“ಟುಗೆದರ್ ಫಾರ್ ಇಂಡಿಯಾ” ಅಭಿಯಾನವನ್ನು ಪ್ರಾರಂಭಿಸಿದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸೋಮವಾರ ಕೋವಿಡ್ -19ಕ್ಕೆ ಕಾರಣವಾಗುವ ಕೊರೊನಾ ವೈರಸ್‌ SARS-CoV-2ರ ಭಾರತೀಯ ರೂಪಾಂತರದ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿದೆ. ಡಬ್ಲ್ಯುಎಚ್‌ಒ ಇಂಡಿಯನ್ ಕೋವಿಡ್ -19 ರೂಪಾಂತರವನ್ನು “ಜಾಗತಿಕ ಕಳವಳ ಅಥವಾ ಕಾಳಜಿಯ ರೂಪಾಂತರ” ಎಂದು ಕರೆದಿದೆ.
ಇದೇ ರೂಪಾಂತರವು ಮಹಾರಾಷ್ಟ್ರದಲ್ಲಿ ಡಬಲ್ ರೂಪಾಂತರಗಳೊಂದಿಗೆ ಪತ್ತೆಯಾಗಿದೆ. ಇದು ಈಗ ಬ್ರಿಟನ್‌, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲಿ ಪತ್ತೆಯಾದ ರೂಪಾಂತರಗಳಂತೆಯೇ ಇದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.
ಈ ಮೊದಲು, ಇಂಡಿಯನ್ ಕೋವಿಡ್ -19 ರೂಪಾಂತರವು “ಆಸಕ್ತಿಯ ರೂಪಾಂತರ” (ವಿಒಐ) ಆಗಿತ್ತು. SARS-CoV-2 ರೂಪಾಂತರಿತವು ಕೆಲವು ಮಾನದಂಡಗಳಲ್ಲಿ ಒಂದನ್ನಾದರೂ ಪೂರೈಸುವ ಪುರಾವೆಗಳನ್ನು ತೋರಿಸಿದಾಗ VOI ಯಿಂದ “ಕಾಳಜಿಯ ರೂಪಾಂತರ” (VOC) ಗೆ ಅದನ್ನು ಸೇರಿಸಲಾಗುತ್ತದೆ ಅಥವಾ ವರ್ಗೀಕರಿಸಲಾಗುತ್ತದೆ.

* ಸುಲಭ ಪ್ರಸರಣ *ಅನಾರೋಗ್ಯದ ತೀವ್ರತೆ, *ಪ್ರತಿಕಾಯಗಳಿಂದ ತಟಸ್ಥೀಕರಣವನ್ನು ಕಡಿಮೆ ಮಾಡುವುದು, * ಔಷಧಗಳು ಮತ್ತು ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುವುದು, * ಲಸಿಕೆಗಳ ಪರಿಣಾಮಕಾರಿತ್ವ ಅಥವಾ ಲಸಿಕೆ ತಪ್ಪಿಸಿಕೊಳ್ಳುವ ಸಾಮರ್ಥ್ಯ.

ಇವುಗಳ ಮೇಲೆ ಆಸಕ್ತಿಯ ರೂಪಾಂತರದಿಂದ ಕಾಳಜಿಯ ರೂಪಾಂತರಕ್ಕೆ ಸೇರಿಸಲಾಗುತ್ತದೆ,

ಪ್ರಾಥಮಿಕ ಅಧ್ಯಯನಗಳು ಭಾರತೀಯ ರೂಪಾಂತರವನ್ನು – ಬಿ .1.617 ಎಂದು ಗುರುತಿಸಿವೆ ಹಾಗೂ ಇತರ ರೂಪಾಂತರಗಳಿಗೆ ಹೋಲಿಸಿದರೆ ಸುಲಭವಾಗಿ ಹರಡುತ್ತದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಲಸಿಕೆ-ಶಕ್ತಗೊಂಡ ರೋಗನಿರೋಧಕ ಶಕ್ತಿಗೆ ಭಾರತೀಯ ರೂಪಾಂತರವು ಹೆಚ್ಚಿನ ಪ್ರತಿರೋಧವನ್ನು ತೋರಿಸಿದೆ ಎಂದು ಡಬ್ಲ್ಯುಎಚ್‌ಒ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮಾರಿಯಾ ವ್ಯಾನ್ ಕೆರ್ಖೋವ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಕೋವಿಡ್ -19 ಲಸಿಕೆ ಕೋವಾಕ್ಸಿನ್ ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಏಪ್ರಿಲ್ಲಿನಲ್ಲಿ ತನ್ನ ಜಬ್ ಯುಕೆ, ಬ್ರೆಜಿಲ್ ಮತ್ತು ಇಂಡಿಯನ್ ಕೋವಿಡ್ -19 ರೂಪಾಂತರಗಳನ್ನು ತಟಸ್ಥಗೊಳಿಸಿದೆ ಎಂದು ಹೇಳಿದೆ.
ಭಾರತದ ಕೋವಿಡ್ -19 ರೂಪಾಂತರದ ಮೂರು ವಂಶಾವಳಿಗಳು ಅಥವಾ ಆವೃತ್ತಿಗಳಿವೆ – ಬಿ .1.617.1, ಬಿ .1.617.2 ಮತ್ತು ಬಿ .1.617.3. ಇವುಗಳಲ್ಲಿ, ಬಿ .1.617.2 ಹೆಚ್ಚಿನ ಪ್ರಸರಣದ ಕಾರಣದಿಂದಾಗಿ ಹೆಚ್ಚಿನ ಕಾಳಜಿ ರೂಪಾಂತರ ಎಂದು ಕರೆಯಲ್ಪಡುತ್ತಿದೆ. ಅಮೆರಿಕದ ಆರೋಗ್ಯ ಸಂಸ್ಥೆ, ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಈ ಮೂರು ರೂಪಾಂತರಗಳನ್ನು ವಿಒಸಿ ಅಂದರೆ ಕಾಳಜಿಯ ರೂಪಾಂತರ ಎಂದು ವರ್ಗೀಕರಿಸಿದೆ.
ರೂಪಾಂತರವನ್ನು VOC ಎಂದು ವರ್ಗೀಕರಿಸುವುದು ವರ್ಗೀಕರಣದ ಎರಡನೇ ಹಂತವಾಗಿದೆ ಹಾಗೂ ಒಂದು ಬೆದರಿಕೆಯ ರೂಪಾಂತರವಾಗಿರುತ್ತದೆ. ಮೂರನೇ ಹಂತವೆಂದರೆ ‘ವೇರಿಯಂಟ್ ಆಫ್ ಹೈ ಕಾನ್ಸೀಕ್ವೆನ್ಸ್’ (ವಿಒಹೆಚ್ಸಿ) ಅಂದರೆ ಹೆಚ್ಚು ಕಳವಳಕಾರಿ ರೂಪಾಂತರ. ಚಿಕಿತ್ಸೆಯ ಪ್ರೋಟೋಕಾಲ್ ಮತ್ತು ಲಸಿಕೆಗಳು ಅಥವಾ ತಡೆಗಟ್ಟುವ ಪ್ರೋಟೋಕಾಲ್ ಎರಡಕ್ಕೂ ವೈರಸ್ ತಳಿ ನಿರೋಧಕವಾಗಿದೆ ಎಂದು ಸಾಬೀತಾದಾಗ ಈ ವರ್ಗದಲ್ಲಿ ಒಂದು ರೂಪಾಂತರವನ್ನು ಹಾಕಲಾಗುತ್ತದೆ.
ಡಬ್ಲುಎಚ್‌ಒದ ವ್ಯಾನ್ ಕೆರ್ಖೋವ್, ರೋಗನಿರ್ಣಯ ಅಥವಾ ಚಿಕಿತ್ಸಕ ಮತ್ತು ಲಸಿಕೆಗಳು ಭಾರತೀಯ ರೂಪಾಂತರದ SARS-CoV-2 ವಿರುದ್ಧ ಕೆಲಸ ಮಾಡುವುದಿಲ್ಲ ಎಂದು ಸೂಚಿಸಲು ಇಲ್ಲಿಯವರೆಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
ಡಬ್ಲುಎಚ್‌ಒ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಕೂಡ ಈ ಅಭಿಪ್ರಾಯವನ್ನೆ ಪ್ರತಿಧ್ವನಿಸಿದ್ದು, “ಮುಂದುವರಿಯಿರಿ ಮತ್ತು ಅವರಿಗೆ ಲಭ್ಯವಿರುವ ಯಾವುದೇ ಲಸಿಕೆ ಪಡೆದುಕೊಳ್ಳಿ” ಎಂದು ಜನರಿಗೆ ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತೀಯ ರೂಪಾಂತರ ಪತ್ತೆಯಾಗಿದೆ. ಈ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ, ಒಂದು ಅಧ್ಯಯನವು 361 ಮಾದರಿಗಳಲ್ಲಿ 220 ಈ ಡಬಲ್ ರೂಪಾಂತರಿತ ರೂಪಾಂತರವನ್ನು ಹೊಂದಿದೆ ಎಂದು ಕಂಡುಹಿಡಿದಿದೆ.
ಭಾರತದ ಎರಡನೇ ಅಲೆಯ ಉಲ್ಬಣವು ಡಬಲ್ ರೂಪಾಂತರಿತ ರೂಪಾಂತರಕ್ಕೆ ಕಾರಣವಾಗಿದೆ ಎಂದು ಕೆಲವು ತಜ್ಞರು ಹೇಳಿದ್ದಾರೆ. ಹಲವಾರು ದೇಶಗಳು ಭಾರತದಿಂದ ಅವರ ದೇಶಕ್ಕೆ ಪ್ರಯಾಣ ಮಾಡಲು ನಿಷೇಧ ಹೇರಲು ಈ ಡಬಲ್ ರೂಪಾಂತರಿತ ರೂಪಾಂತರವೇ ಕಾರಣವಾಯಿತು. 30 ದೇಶಗಳಿಂದ ಈ ರೂಪಾಂತರ ವರದಿಯಾಗಿದೆ ಎಂದು ಡಬ್ಲುಎಚ್‌ಒ ಹೇಳಿದೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement