ಗುವಾಹಟಿ: ಅಸ್ಸಾಂನಲ್ಲಿ 18 ಕಾಡು ಆನೆಗಳ ಹಿಂಡು ಸಿಡಿಲು ಬಡಿದು ಮೃತಪಟ್ಟಿವೆ.
ಬುಧವಾರ ರಾತ್ರಿ ಮಧ್ಯ ಅಸ್ಸಾಂನ ನಾಗಾಂವ್ ಜಿಲ್ಲೆಯ ಕಂಡಲಿ ಪ್ರಸ್ತಾವಿತ ಮೀಸಲು ಅರಣ್ಯದಲ್ಲಿ ಈ ಘಟನೆ ನಡೆದಿದೆ.
ಅಸ್ಸಾಂನ ಮುಖ್ಯ ವನ್ಯಜೀವಿ ವಾರ್ಡನ್ ಎಂ.ಕೆ. ಯಾದವ ಮಾತನಾಡಿ, ಮಿಂಚು ಆನೆಗಳ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಸಿಡಿಲು ಬಡಿದು ಪ್ರಾಣಿಗಳನ್ನು ಸಾಯುವ ಘಟನೆಗಳು ಮೊದಲು ಸಹ ನಡೆದಿವೆ. ಆದರೆ ಇದು ದೊಡ್ಡ ಸಂಖ್ಯೆಯಾಗಿದೆ” ಎಂದು ಅವರು ಹೇಳಿದರು.
ಪಶುವೈದ್ಯಕೀಯ ವೈದ್ಯರು ಮತ್ತು ವನ್ಯಜೀವಿ ತಜ್ಞರ ತಂಡ ಕಂಡಲಿಗೆ ತೆರಳಿದ್ದು, ಅವರು ಶುಕ್ರವಾರ ಬೆಳಿಗ್ಗೆ ವೇಳೆಗೆ ಸ್ಥಳ ತಲುಪುವ ನಿರೀಕ್ಷೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ