ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಏನು ಬೇಕಾದರೂ ಸಾಧ್ಯ! ವರನೊಬ್ಬ ತನ್ನ ಸ್ವಂತ ಮದುವೆಯಲ್ಲಿ ಬ್ಯಾಂಡ್ ಬಾರಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಆದರೆ ಕೊರೊನಾ ಸಂದರ್ಭದಲ್ಲಿ ಇದು ಆಗಿದೆ.
ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಳವಾಗಿರುವಾಗ ದೇಶದ ಅನೇಕ ರಾಜ್ಯಗಳಲ್ಲಿ ಲಾಕ್ಡೌನ್ ಮತ್ತು ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ, ಈ ಕಾರಣದಿಂದಾಗಿ ಮದುವೆಗಳನ್ನು ಸಣ್ಣ ಪ್ರಮಾಣದಲ್ಲಿ ಮಾತ್ರ ನಡೆಸಲಾಗುತ್ತಿದೆ. ಅಂತಹ ಒಂದು ವಿಶೇಷವಾದ ಹಾಗೂ ವಿಶಿಷ್ಟವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.ಈ ವಿಡಿಯೋದಲ್ಲಿ ವರನು ತನ್ನ ಮದುವೆಯಲ್ಲಿ ಬ್ಯಾಂಡ್ ಅನ್ನು ತಾನೇ ಬಾರಿಸುತ್ತಿದ್ದಾನೆ…!
ಮದುವೆಯ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ, ವಧು ಪಕ್ಷದಲ್ಲಿಯೇ ನಿಂತಿದ್ದಾಗ ವರನು ತನ್ನ ಮದುವೆಯಲ್ಲಿ ಡ್ರಮ್ ಅನ್ನು ತಾನೇ ಹೇಗೆ ಬಾರಿಸುತ್ತಿದ್ದಾನೆ ಎಂಬುದನ್ನು ನೋಡಬಹುದು, ಆದರೆ ಹಿನ್ನೆಲೆಯಲ್ಲಿ ಸಂಗೀತವನ್ನು ನುಡಿಸಲಾಗುತ್ತಿದೆ. ಏತನ್ಮಧ್ಯೆ, ಇತರ ಬಂದು ವಧೂ-ವರರನ್ನು ಆಶೀರ್ವದಿಸುತ್ತಾರೆ. ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ ಅವರು ‘ಸ್ವಾವಲಂಬಿ ವರ (ಆತ್ಮ ನಿರ್ಭರ ವರ) ಎಂದು ಬರೆದಿದ್ದಾರೆ..


ನಿಮ್ಮ ಕಾಮೆಂಟ್ ಬರೆಯಿರಿ