ಕೋವಾಕ್ಸಿನ್ ಲಸಿಕೆ ಸೂತ್ರ ಇತರ ತಯಾರಕರಿಗೆ ನೀಡಲು ʼಭಾರತ್ ಬಯೋಟೆಕ್ ಸಮ್ಮತಿ: ಕೇಂದ್ರ

ನವ ದೆಹಲಿ : ಉತ್ಪಾದನೆ ಹೆಚ್ಚಿಸಲು ಕೋವಿಡ್-19 ಲಸಿಕೆಗಳ ಸೂತ್ರವನ್ನ ಇತರ ತಯಾರಕರೊಂದಿಗೆ ಹಂಚಿಕೊಳ್ಳುವಂತೆ ಹಲವಾರು ರಾಜ್ಯಗಳು ಕೇಂದ್ರವನ್ನ ಒತ್ತಾಯಿಸಿದ ನಂತರ ‘ಭಾರತ್ ಬಯೋಟೆಕ್ ಇದನ್ನ ಸ್ವಾಗತಿಸಿದೆ’ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪಾಲ್ ಹೇಳಿದ್ದಾರೆ.
ಎಎನ್‌ಐ ವರದಿ ಮಾಡಿದಂತೆ ಡಾ. ವಿ.ಕೆ. ಪಾಲ್, ‘ಕೊವಾಕ್ಸಿನ್ ಉತ್ಪಾದನೆಗಾಗಿ ಇತರ ಕಂಪನಿಗಳಿಗೆ ನೀಡಬೇಕು ಎಂದು ಜನರು ಹೇಳುತ್ತಾರೆ. ಕೊವಾಕ್ಸಿನ್ ಉತ್ಪಾದನಾ ಕಂಪನಿ (ಭಾರತ್ ಬಯೋಟೆಕ್) ಇದನ್ನು ಸ್ವಾಗತಿಸಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಈ ಲಸಿಕೆಯ ಅಡಿ ಲೈವ್ ವೈರಸ್ ನಿಷ್ಕ್ರಿಯವಾಗಿದೆ ಮತ್ತು ಇದನ್ನು ಬಿಎಸ್‌ಎಲ್ 3 ಲ್ಯಾಬ್ʼಗಳಲ್ಲಿ ಮಾತ್ರ ಮಾಡಲಾಗುತ್ತದೆ’ ಎಂದರು

‘ಪ್ರತಿಯೊಂದು ಕಂಪನಿಯೂ ಇದನ್ನು ಹೊಂದಿಲ್ಲ. ಇದನ್ನ ಮಾಡಲು ಬಯಸುವ ಕಂಪನಿಗಳಿಗೆ ನಾವು ಮುಕ್ತ ಆಹ್ವಾನವನ್ನ ನೀಡುತ್ತೇವೆ. ಕೊವಾಕ್ಸಿನ್ ತಯಾರಿಸಲು ಬಯಸುವ ಕಂಪನಿಗಳು ಅದನ್ನು ಒಟ್ಟಿಗೆ ಮಾಡಬೇಕು. ಸಾಮರ್ಥ್ಯ ಹೆಚ್ಚಿಸಲು ಸರ್ಕಾರ ಸಹಾಯ ಮಾಡುತ್ತದೆ’ ಎಂದು ಎಎನ್ ಐ ಉಲ್ಲೇಖಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement