ಹೈದರಾಬಾದ್: ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ, ಕೋವಿಡ್ -19 ರ ಸವಾಲುಗಳು ಕೇವಲ ಆರೋಗ್ಯ ಕೇಂದ್ರಗಳು, ಔಷಧಿ ಮತ್ತು ಲಸಿಕೆಗಳಿಗಷ್ಟೇ ಸೀಮಿತವಾಗಿಲ್ಲ. ಅದು ಮೂಲಭೂತ ಸೌಕರ್ಯ ಇಲ್ಲದ ಮನೆಗಳೂ ಸವಾಲಾಗಿದೆ.
ಇಂಥ ಮೂಲಭೂತ ಸವಾಲು ಎದುರಿಸುತ್ತಿರುವ 18 ವರ್ಷದ ಯುವಕನೊಬ್ಬತಮ್ಮ ಮನೆಯಲ್ಲಿ ಹೋಮ್ ಐಸೊಲೇಶನ್ ಅಸಾಧ್ಯವಾದ ಕಾರಣ ಪರ್ಯಾಯ ಮಾರ್ಗ ಕಂಡುಕೊಂಡಿದ್ದು ತನ್ನ ಮನೆಯ ಕಾಂಪೌಂಡ್‌ನಲ್ಲಿರುವ ಮರದ ಮೇಲೆಯೇ 11 ದಿನಗಳ ಕಾಲ ಕೋವಿಡ್ ಐಸೋಲೇಶನ್ ಆಗಿದ್ದಾನೆ…!
ಈ ವಿದ್ಯಮಾನ ನಡೆದಿರುವುದು ನಲಗೊಂಡ ಜಿಲ್ಲೆಯ ಕುಗ್ರಾಮವಾದ ಕೊಥಾನಂದಿಕೊಂಡ ಗ್ರಾಮದಲ್ಲಿ. ಶಿವ ಎಂಬ ಯುವಕ ಮೇ 4 ರಂದು ಕೋವಿಡ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದ. ಹಳ್ಳಿಯ ಸ್ವಯಂಸೇವಕರು ಹಾಗೂ ಆಶಾ ಕಾರ್ಯಕರ್ತೆಯರು ಮನೆಯಲ್ಲಿ ಉಳಿಯಲು ಮತ್ತು ಕುಟುಂಬದಿಂದ ಪ್ರತ್ಯೇಕವಾಗಿ ಇರಲು ತಿಳಿಸಿದರು, ಆದರೆ ಅವರ ಜೀವನ ಪರಿಸ್ಥಿತಿಗಳು ಮತ್ತು ಗ್ರಾಮದಲ್ಲಿ ಪ್ರತ್ಯೇಕ ಕೇಂದ್ರದ ಕೊರತೆಯಿಂದಾಗಿ ಪರ್ಯಾಯ ಮಾರ್ಗ ಹುಡುಕುದ ಶಿವ ಇಲ್ಲಿಯ ವರೆಗೆ ಮರದ ಮೇಲಯೇ 11 ದಿನಗಳನ್ನು ಕಳೆದಿದ್ದಾನೆ..!
ಕೊಥಾನಂದಿಕೊಂಡವು ಸುಮಾರು 350 ಕುಟುಂಬಗಳ ಗ್ರಾಮ. ಜಿಲ್ಲೆಯ ಆದಾವಿದೇವಲಪಲ್ಲಿ ಮಂಡಲದ ಅಡಿಯಲ್ಲಿರುವ ಅನೇಕ ಬುಡಕಟ್ಟು ಕುಗ್ರಾಮಗಳಲ್ಲಿ ಒಂದು. ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) 5 ಕಿಮೀ ದೂರದಲ್ಲಿದೆ ಮತ್ತು ಈ ಕುಗ್ರಾಮಗಳ ಜನರು ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ 30 ಕಿ.ಮೀ ಪ್ರಯಾಣಿಸ ಬೇಕಾಗುತ್ತದೆ.
ಊರಲ್ಲಿ ಯಾವುದೇ ಪ್ರತ್ಯೇಕ ಕೇಂದ್ರ ಇರಲಿಲ್ಲ. ಸಮೀಪದಲ್ಲಿಯೇ ಇರುವುದು ಅವರಿಗೆ ಗೊತ್ತಿರಲಿಲ್ಲ. ಶಿವ ಸೇರಿ ನಾಲ್ಕು ಜನರ ಕುಟುಂಬ ಅವರದ್ದು. ತನ್ನ ಕಾರಣದಿಂದಾಗಿ ಯಾರಿಗೂ ತೊಂದರೆಯಾಗಬಾರದು. ಆಸ್ಪತ್ರೆಗೆ ಮೂವತ್ತು ಕಿಮೀ ಹೋಗಬೇಕು. ಹೀಗಾಗಿ ಮರದ ಮೇಲೆ ಪ್ರತ್ಯೇಕಿಸಲು ನಿರ್ಧರಿಸಿರುವುದಾಗಿ ಶಿವ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರಿಗೆ ತಿಳಿಸಿದ್ದಾರೆ.
ನನಗೆ ಸಹಾಯ ಮಾಡಲು ನನ್ನ ಹಳ್ಳಿಯಲ್ಲಿ ಯಾರೂ ಮುಂದೆ ಬರಲಿಲ್ಲ. ಅವರೆಲ್ಲರೂ ಕೊರೊನಾ ವೈರಸ್‌ಗೆ ಹೆದರುತ್ತಾರೆ. ಅವರು ತಮ್ಮ ಮನೆಗಳಿಂದ ಹೊರಗೇ ಬರುತ್ತಿಲ್ಲ ಎಂದು ಶಿವ ಹೇಳುತ್ತಾರೆ.
ಶಿವ ಇರುವ ಮರವು ಮನೆಯ ಕಾಂಪೌಂಡ್‌ನಲ್ಲಿದೆ. ಶಿವ ಹಗ್ಗ, ಬಿದಿರು ಮತ್ತು ಬಕೆಟ್ ಬಳಸಿ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದು, ಕಳೆದ 11 ದಿನಗಳಿಂದ ಮರದ ಮೇಲೆ ಪ್ರತ್ಯೇಕವಾಗಿರುತ್ತಿದ್ದಾರೆ, ಏಕೆಂದರೆ ಅವರ ಮನೆ ಒಂದೇ ಕೋಣೆಯ ಘಟಕ. ಶಿವ ಹೊರತಾಗಿ ನಾಲ್ಕು ಮಂದಿ ವಾಸಿಸುತ್ತಿದ್ದಾರೆ.
ಶಿವ ಹೈದರಾಬಾದ್‌ನಲ್ಲಿ ಪದವಿ ಕೋರ್ಸ್ ಓದುತ್ತಿರುವ ವಿದ್ಯಾರ್ಥಿ. ಹೈದರಾಬಾದ್ ನಗರದಲ್ಲಿ ಪ್ರಕರಣಗಳು ಹೆಚ್ಚಾದಾಗ ತಿಂಗಳ ಹಿಂದೆ ಪ್ರಕರಣಗಳು ಹೆಚ್ಚಾಗುತ್ತಿದ್ದಾಗ ಅವರು ತಮ್ಮ ಗ್ರಾಮಕ್ಕೆ ಮರಳಿದ್ದರು.
ನನ್ನ ಗಂಡ ಮತ್ತು ನಾನು ದೈನಂದಿನ ಕೂಲಿ ಕಾರ್ಮಿಕರು ಮತ್ತು ಶಿವನಿಗೆ ಇಬ್ಬರು ಒಡಹುಟ್ಟಿದವರು ಇದ್ದಾರೆ. ನಾವು ಸೋಂಕಿಗೆ ಒಳಗಾಗಿದ್ದರೆ, ಕುಟುಂಬವು ಯಾವುದೇ ಗಳಿಕೆಯಿಲ್ಲದೆ ಬದುಕುವುದು ಕಷ್ಟ. ಶಿವನಿಗೆ ಕೊರೊನಾ ಸೋಂಕು ದೃಢಪಟ್ಟಾಗ ಆಶಾ ಕಾರ್ಯಕರ್ತೆಯರು ಅವನನ್ನು ಪ್ರತ್ಯೇಕಿಸಲು ಹೇಳಿದರು, ಆದರೆ ಮನೆಯಲ್ಲಿ ಪ್ರತ್ಯೇಕಿಸಲು ನಮ್ಮಲ್ಲಿ ಅವಕಾಶವಿದೆಯೇ ಎಂದು ಕೇಳಲಿಲ್ಲ. ಹತ್ತಿರದ ಪಿಎಚ್‌ಸಿಗೆ 5 ಕಿ.ಮೀ ಪ್ರಯಾಣಿಸಿದೆವು, ಆದರೆ ಅಲ್ಲಿ ಯಾವುದೇ ಹಾಸಿಗೆಗಳಿರಲಿಲ್ಲ. ನಾವು ಅವನನ್ನು ಎಲ್ಲಿ ಇಡುತ್ತೇವೆ?. ಹೀಗಾಗಿ ನನ್ನ ಮಗನೇ ಪರ್ಯಾಯ ವ್ಯವಸ್ಥೆ ಕಂಡುಕೊಂಡ ಎಂದು ಶಿವನ ತಾಯಿ ಅನುಸೂಯಾ ತಿಳಿಸಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಮನೆಯಲ್ಲಿ ಕೇವಲ ಒಂದು ವಾಶ್ ರೂಂ ಇದೆ, ಮನೆಯೊಳಗೆ ನಿರ್ಮಿಸಲಾಗಿದೆ, ಆದ್ದರಿಂದ ಶಿವ ಸೂರ್ಯಾಸ್ತದ ನಂತರ ಬಹಿರ್ದೆಸೆಗೆ ಹೊಲಗಳಿಗೆ ಹೋಗುತ್ತಿದ್ದರು.
ವಿಷಯ ಗೊತ್ತಾದ ಮೇಲೆ ಪೊಲೀಸರು ಶಿವನ ಮನೆಗೆ ತಲುಪಿದರು ಹಾಗೂ ಆತನನ್ನು ಕುಗ್ರಾಮದಿಂದ 5 ಕಿ.ಮೀ ದೂರದಲ್ಲಿರುವ ಪ್ರತ್ಯೇಕ ಕೇಂದ್ರವಾಗಿ ಪರಿವರ್ತಿಸಿದ ಎಸ್‌ಟಿ ಹಾಸ್ಟೆಲ್‌ಗೆ ಸ್ಥಳಾಂತರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ