ಅನೇಕ ದಿನಗಳ ನಂತರ ಭಾರತದಲ್ಲಿ ಮೂರು ಲಕ್ಷಕ್ಕಿಂತ ಕೆಳಗೆಬಂದ ದೈನಂದಿನ ಕೊರೊನಾ ಸೋಂಕು..!

ನವ ದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಮೊಹ್‌ಎಫ್‌ಡಬ್ಲ್ಯು) ಸೋಮವಾರ ಹಂಚಿಕೊಂಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2.81 ಲಕ್ಷಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಸೋಂಕುಗಳು ಕಂಡುಬಂದಿದ್ದು, ಭಾರತದಲ್ಲಿ ಒಟ್ಟು ಕೋವಿಡ್‌ -19 ಪ್ರಕರಣಗಳು 2.5 ಕೋಟಿಗಳಿಗೆ ತಲುಪಿದೆ. ಅನೇಕ ದಿನಗಳ ನಂತರ ಭಾರತದಲ್ಲಿ ದೈನಂದಿನ ಕೊರೊನಅ ಸೋಂಕು ಮೂರು ಲಕ್ಷಕ್ಕಿಂತ ಕಡಿಮೆ ಬಂದಿದೆ. ಇದೇ ಸಮಯದಲ್ಲಿ 3.78ಲಕ್ಷಕ್ಕೂ ಹೆಚ್ಚು ಜನರು ಗುಣಮುಖರಾಗಿ ಆಸ್ಪತ್ತೆರಯಿಂದ ಬಿಡುಗಡೆಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,81,386 ಹೊಸ COVID-19 ಪ್ರಕರಣಗಳು, 3,78,741 ಡಿಸ್ಚಾರ್ಜ್‌ಗಳು ಮತ್ತು 4,106 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಹೊಸ ಸಾವುಗಳು ಭಾರತದ ಕೋವಿಡ್ -19 ಸಾವಿನ ಸಂಖ್ಯೆ 2,74,390 ಕ್ಕೆ ತಲುಪಿಸಿದ್ದರೆ, ಒಟ್ಟು ಬಿಡುಗಡೆಯಾದವರ ಸಂಖ್ಯೆ 2,11,74,076 ಕ್ಕೆ ಏರಿದೆ.
ದೇಶದಲ್ಲಿ ಪ್ರಸ್ತುತ ಒಟ್ಟು 35,16,997 ಪ್ರಕರಣಗಳು ಸಕ್ರಿಯವಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಏತನ್ಮಧ್ಯೆ, ಮೇ 16 ರವರೆಗೆ ಕೋವಿಡ್ -19 ಗಾಗಿ ಒಟ್ಟು 31,64,23,658 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಈ ಪೈಕಿ 15,73,515 ಮಾದರಿಗಳನ್ನುಭಾನುವಾರ ಪರೀಕ್ಷಿಸಲಾಯಿತು.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳು ಮಹಾರಾಷ್ಟ್ರದಲ್ಲಿ 34,389 ಪ್ರಕರಣಗಳು, ತಮಿಳುನಾಡು 33,181 ಪ್ರಕರಣಗಳು, ಕರ್ನಾಟಕವು 31,531 ಪ್ರಕರಣಗಳು, ಕೇರಳದಲ್ಲಿ 29,704 ಪ್ರಕರಣಗಳು ಮತ್ತು ಆಂಧ್ರಪ್ರದೇಶ 24,171 ಪ್ರಕರಣಗಳು ದಾಖಲಾಗಿವೆ.
ಈ ಐದು ರಾಜ್ಯಗಳಿಂದ ಹೊಸ ಪ್ರಕರಣಗಳು ವರದಿಯಾಗಿದ್ದರಲ್ಲಿ ಶೇಕಡಾ 12.22 ರಷ್ಟು ಮಹಾರಾಷ್ಟ್ರದ ಪಾಲು. ಮಹಾರಾಷ್ಟ್ರದಲ್ಲಿ 974 ಸಾವುಗಳು ಸಂಭವಿಸಿವೆ, ನಂತರ ಕರ್ನಾಟಕದಲ್ಲಿ 403 ಸಾವುನೋವುಗಳು ಸಂಭವಿಸಿವೆ. ಸಕ್ರಿಯ ಪ್ರಕರಣಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಕ್ಕಿಂತ ಬಹುತೇಕ 1 ಲಕ್ಷಕ್ಕಿಂತಲೂ ಕಡಿಮೆಯಾಗಿದೆ, ಆದರೆ ಭಾನುವಾರ ಕೇವಲ 6.9 ಲಕ್ಷ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement