ಕರ್ನಾಟಕದಲ್ಲಿ ಈವರೆಗೆ ಲಸಿಕೆ ಪಡೆದವರೆಷ್ಟು..? ಇಲ್ಲಿದೆ ಮಾಹಿತಿ

ಬೆಂಗಳೂರು : ಕೋವಿಡ್-19 ನ ಎರಡನೇ ಅಲೆಯ ಹೊಡೆತಕ್ಕೆ ನಲುಗಿರುವ ಕರ್ನಾಟಕ ಮೂರನೆ ಅಲೆ ಎದುರಿಸಲು ಸಿದ್ಧತೆ ನಡೆಸಿದೆ.
ಈ ಮಧ್ಯೆ ಕೋವಿಡ್‌ ಲಸಿಕೆ ಅಭಿಯಾನ ಮಾತ್ರ ಚುರುಕು ಪಡೆಯುತ್ತಿಲ್ಲ. ಲಸಿಕೆ ಪಡೆಯಲು ಅರ್ಹತೆ ಇರುವ ಶೇ.80 ರಷ್ಟು ಮಂದಿ ಲಸಿಕೆ ಪಡೆಯಲು ಕಾಯುತ್ತಿದ್ದಾರೆ.
ಕೇಂದ್ರ ಸರ್ಕಾರ ಪ್ರಕಟಿಸಿದ ನೀತಿಯಂತೆ ರಾಜ್ಯಾದ್ಯಂತ ಸುಮಾರು 5.11 ಕೋಟಿ ಜನ ಲಸಿಕೆ ಪಡೆಯುವುದಕ್ಕೆ ಅರ್ಹರಿದ್ದಾರೆ. ಈವರೆಗೆ (ಮೇ16) 1,11,88,143 ಜನರಿಗೆಲಸಿಕೆ ನೀಡಲಾಗಿದೆ., ಇನ್ನೂ 4.22 ಕೋಟಿ ಜನರಿಗೆ ಲಸಿಕೆ ನೀಡಬೇಕಿದ್ದು, ಈ ಪೈಕಿ 66.4 ಲಕ್ಷ ಜನರು ಎರಡನೇ ಡೋಸ್ ಗಾಗಿ ಕಾಯುತ್ತಿದ್ದಾರೆ.
ಮಾಹಿತಿಯ ಪ್ರಕಾರ 8.6 ಲಕ್ಷ ಆರೋಗ್ಯ ಕಾಳಜಿ ನೌಕರರಿಗೆ ಕೋವಿಡ್-19 ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ ಈವರೆಗೂ 4,60,437 ಜನರಷ್ಟೇ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಸುಮಾರು 2.4 ಲಕ್ಷ ಆರೋಗ್ಯ ಕಾಳಜಿ ಕಾರ್ಯಕರ್ತರು ಎರಡನೇ ಡೋಸ್ ಲಸಿಕೆಗೆ ಕಾಯುತ್ತಿದ್ದರೆ 1.6 ಲಕ್ಷ ಕಾಳಜಿ ಕಾರ್ಯಕರ್ತರು ಮೊದಲ ಡೋಸ್ ಪಡೆಯಬೇಕಿದೆ.
ಇನ್ನು ಮುನ್ನೆಲೆ ಕಾರ್ಯಕರ್ತರ ವಿಷಯದಲ್ಲಿ 6 ಲಕ್ಷ ಗುರಿ ಹೊಂದಲಾಗಿದ್ದು, 1.2 ಲಕ್ಷ ಮುನ್ನೆಲೆ ಕಾರ್ಯಕರ್ತರು ಮೊದಲ ಡೋಸ್ ಪಡೆದಿಲ್ಲ. 3 ಲಕ್ಷ ಮುನ್ನೆಲೆ ಕಾರ್ಯಕರ್ತರು ಎರಡನೇ ಡೋಸ್ ಗಾಗಿ ಕಾಯುತ್ತಿದ್ದಾರೆ.
ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿಯ ಪ್ರಕಾರ 1.5 ಲಕ್ಷ ಡೋಸ್ ಗಳಷ್ಟು ಕೋವ್ಯಾಕ್ಸಿನ್ ಹಾಗೂ 6.5 ಲಕ್ಷ ಡೋಸ್ ಗಳಷ್ಟು ಕೋವಿಶೀಲ್ಡ್ ಲಸಿಕೆಗಳು ರಾಜ್ಯದ ಬಳಿ ಲಭ್ಯವಿದೆ.
ಇನ್ನು ಈಗ ಎರಡು ಡೋಸ್ ಗಳ ಲಸಿಕೆಯ ಅಂತರವನ್ನು 12-16 ವಾರಗಳಿಗೆ ಹೆಚ್ಚಿಸಿರುವುದರಿಂದ 1.68 ಲಕ್ಷ ಮಂದಿಗೆ ಕಾಯುವುದಕ್ಕೆ ಹೆಚ್ಚಿನ ಸಮಯ ಸಿಕ್ಕಂತಾಗಿದೆ. ಆದರೆ ತಜ್ಞರ ಪ್ರಕಾರ ರಾಜ್ಯ ಇನ್ನೂ 4.40 ಲಕ್ಷ ಮಂದಿಗೆ ತಕ್ಷಣವೇ ಎರಡನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಬೇಕಿದೆ.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement