ಕುಸ್ತಿಪಟು ಹತ್ಯೆ ಪ್ರಕರಣ: ಜಾಮೀನು ರಹಿತ ವಾರಂಟ್‌ ನಂತರ ಈಗ ಸುಶೀಲಕುಮಾರ್ ಮಾಹಿತಿಗೆ 1 ಲಕ್ಷ ರೂ.ಬಹುಮಾನ

ನವ ದೆಹಲಿ; ದೆಹಲಿ ನ್ಯಾಯಾಲಯವು ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ಕೆಲ ದಿನಗಳ ನಂತರ, ಛತ್ರಸಾಲ ಕ್ರೀಡಾಂಗಣದ ಜಗಳದಲ್ಲಿ ಭಾಗಿಯಾಗಿದ್ದಕ್ಕಾಗಿ ರಾಜ್ಯ ಪೊಲೀಸರು ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಕುಸ್ತಿಪಟು ಸುಶೀಲಕುಮಾರ ಪತ್ತೆಗೆ 1 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರದಿಂದ ಜಾರಿಗೆ ಬರುವಂತೆ ಬಹುಮಾನವನ್ನು ಶಿಫಾರಸು ಮಾಡಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ ಎಂದು ಟೈಮ್ಸ್‌ ನೌ.ಕಾಮ್‌ ವರದಿ ಮಾಡಿದೆ.

ವರದಿ ಪ್ರಕಾರ, ಭಾರತೀಯ ಕುಸ್ತಿಪಟುಗಳಲ್ಲಿ ಅತ್ಯಂತ ಹೆಸರು ಪಡೆದವರಲ್ಲಿ ಒಬ್ಬರಾದ ಸುಶೀಲ್ ರಾಷ್ಟ್ರ ರಾಜಧಾನಿಯ ಛತ್ರಸಾಲ ಕ್ರೀಡಾಂಗಣದ ಬಳಿ ನಡೆದ ಜಗಳದಲ್ಲಿ ಭಾಗಿಯಾಗಿದ್ದಾನೆ. ಸ್ಟೇಡಿಯಂ ಜಗಳ ಪ್ರಕರಣದ ಮೊದಲ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಸ್ಟಾರ್ ಕುಸ್ತಿಪಟು ಹೆಸರಿಸಲ್ಪಟ್ಟಾಗಿನಿಂದಲೂ ಸುಶೀಲಕುಮಾರ ಪರಾರಿಯಾಗಿದ್ದಾನೆ. ಈ ಗದ್ದಲವು 23 ವರ್ಷದ ಕುಸ್ತಿಪಟುವಿನ ಸಾವಿಗೆ ಕಾರಣವಾಗಿತ್ತು.
ಛತ್ರಸಾಲ ಕ್ರೀಡಾಂಗಣದ ಗದ್ದಲ ಪ್ರಕರಣದ ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ದೆಹಲಿ ಪೊಲೀಸರು ಕುಸ್ತಿಪಟು ಮಾಹಿತಿಗಾಗಿ ಬಹುಮಾನವನ್ನು ಶಿಫಾರಸು ಮಾಡಿದ್ದಾರೆ. ಸುಶೀಲ್ ಅವರ ಬಹು ನಿರೀಕ್ಷಿತ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು 1 ಲಕ್ಷ ರೂ. ಭಾರಿ ಬಹುಮಾನವನ್ನು ನೀಡಿದ್ದರೆ, ರಾಜ್ಯ ಕಾನೂನು ಜಾರಿ ಸಂಸ್ಥೆ ಅವರ ಸಹವರ್ತಿ ಅಜಯ್ ಕುಮಾರ್ ಅವರ ಮೇಲೆ 50,000 ರೂ. ಬಹುಮಾತ ಪ್ರಕಟಿದ್ದಾರೆ ಎನ್ನಲಾಗಿದೆ. ಸುಶೀಲ್ ಅವರ ನಿಕಟವರ್ತಿ ಅಜಯ್ ದೈಹಿಕ ಶಿಕ್ಷಣ ಶಿಕ್ಷಕ ಎಂದು ನಂಬಲಾಗಿದೆ.
ರಾಜ್ಯ ಪೊಲೀಸರ ಹಲವಾರು ತಂಡಗಳು ಕುಸ್ತಿಪಟು ಸುಶೀಲಕುಮಾರ ಅವರ ಹುಡುಕಾಟದಲ್ಲಿವೆ ಮತ್ತು ದೆಹಲಿ, ಹರಿಯಾಣ, ಪಂಜಾಬ್, ಉತ್ತರಾಖಂಡ್, ಮತ್ತು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಹಲವಾರು ಸ್ಥಳಗಳಲ್ಲಿ ಅನೇಕ ದಾಳಿಗಳನ್ನು ನಡೆಸಲಾಗಿದೆ. ಈ ಹಿಂದೆ ಛತ್ರಸಾಲ ಕ್ರೀಡಾಂಗಣದ ಜಗಳದಲ್ಲಿ ಭಾಗಿಯಾಗಿದ್ದ ಸುಶೀಲಕುಮಾರ ಮತ್ತು ಇತರ ಆರು ಜನರ ವಿರುದ್ಧ ದೆಹಲಿ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ಪ್ರಮುಖ ಸುದ್ದಿ :-   ಸ್ಟೀಲ್‌ ತ್ಯಾಜ್ಯದಿಂದ ವಿಶ್ವದ ಅತಿ ಉದ್ದದ ರಸ್ತೆ ನಿರ್ಮಿಸಿದ ಜಿಂದಾಲ್ ಸ್ಟೀಲ್‌ ಕಂಪನಿ ; ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement